Thursday, 26th December 2024

ಸೋಲು ಎದುರಾದಾಗ ಏನು ಮಾಡಬೇಕು ?

ಪರಿಶ್ರಮ

parishramamd@gmail.com

ಮೊಬೈಲ್‌ನಲ್ಲಿ ಇರುವ Appಯನ್ನು ತೆಗೆದು ನಾವು Food Order ಮಾಡುತ್ತೀವಿ, Food ಬರೋದು ಐದು ನಿಮಿಷ ತಡವಾದಾಗ, ಅದನ್ನು freeಯಾಗಿ ಕೊಡಬೇಕೆಂದು ಕೂಗಾಡುತ್ತೀವಿ, ಆಪ್‌ಅಲ್ಲಿ ಪ್ರೊಫೈಲ್ ಚೆಕ್ ಮಾಡಿ ಮದುವೆಯಾಗಿ ನಾಲ್ಕು ದಿನಕ್ಕೆ ನಾವು ಡಿವೋರ್ಸ್ ಕೂಡ ಅಪ್ಲೇ ಮಾಡುತ್ತೀವಿ. ಇದು ನಮ್ಮ ಆಧುನಿಕ ಜಗತ್ತಿನ ಒನ್‌ಲೈನ್ ಸ್ಟೋರಿ.

ಈ ಪೀಠಿಕೆ ಹಾಕುವುದಕ್ಕೆ ಒಂದು ಕಾರಣ ಇದೆ, ನಾವು ತುಂಬಾ ಸೂಕ್ಷ್ಮ ಆಗುತ್ತಿದ್ದೇವೆ. ಯಾವುದನ್ನು ಸಹಿಸೋ ಶಕ್ತಿ ನಮ್ಮಲ್ಲಿ ಉಳಿದಿಲ್ಲ, ಸಹನೆ ಸತ್ತು ಸುಮಾರು ವರ್ಷ ವಾಗಿದೆ, ಸ್ನೇಹಿತರೇ! ನಾನು ನಿಮಗೆ ಒಂದು ಕಿವಿ ಮಾತು ಹೇಳುತ್ತೇನೆ. 10 ನಿಮಿಷ ಸಮಯ ಇದರೆ, ಅದು ಸರಿ ಎನಿಸಿದರೆ ನೀವು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ.

ನೀವು ಅನುಭವಿಸುತ್ತಿರೋ ಕಷ್ಟ ಈ ಪ್ರಪಂಚದಲ್ಲಿ ಯಾರು ಕೂಡ ಜಿಚಿಛಿe ಮಾಡಿರಲ್ಲ ಅಂತ ನಿಮಗೆ ಅನಿಸುತ್ತದೆ? ನಿಮ್ಮ ಅಜ್ಜ-ಅಜ್ಜಿ, ಅಪ್ಪ-ಅಮ್ಮ ಅವರಿಗೆ ಈ ಕಷ್ಟ ಬಂದಿರಲ್ಲವೆಂದೆನಿಸುತ್ತದೆಯಾ? ನೀವು ಆತುರದಲ್ಲಿ ಅಥವಾ ನಿಮ್ಮ ಆತ್ಮಾಭಿ ಮಾನಕ್ಕೆ ದಕ್ಕೆ ಆಗಿದೆ ಅನ್ನೋ ಭಾವನೆಯಿಂದ ನೀವು ತೆಗೆದುಕೊಂಡ ಒಂದು ಈ ನಿರ್ಧಾರ ನಿಮ್ಮನ್ನು ಸೋಲಿಗೆ ದೂಡಿದೆ ಎಂದು ಅನಿಸುತ್ತಿದ್ದೇಯಾ? ಸರಿ ಹಾಗಾದರೆ ಒಂದು ಕೆಲಸ ಮಾಡೋಣ ನೀವು ಯಾವುದೇ ನಿರ್ಧಾರ ಮಾಡುವ ಮೊದಲು ನಿಮ್ಮ ಮೇಲೆ ಅವಲಂಭಿತರು ಯಾರು ಅನ್ನುವುದನ್ನು ಯೋಚನೆ ಮಾಡಿ. ನಿಮಗೆ ಅಪ್ಪ-ಅಮ್ಮ ಇದ್ದಾರ, ನಿಮ್ಮನ್ನು ನಂಬಿ ಬಂದ ಒಂದು ಹೆಣ್ಣು ನಿಮ್ಮಿಂದ ಜನ್ಮ ಪಡೆದ ಮಕ್ಕಳು ಯಾರೆಲ್ಲಾ ಇದ್ದಾರೆ ಎಂದು ಮೊದಲು ಯೋಚನೆ ಮಾಡಿ, ಸರೀ ಯಾರು ಇಲ್ಲ, ನನಗೆ ಅನಿಸಿದರೆ ನಿರ್ಧಾರ ತೆಗೆದುಕೊಳ್ಳುವುದಕ್ಕೆ ನೀವು ಸ್ವಾತಂತ್ರ್ಯರು ಅನ್ನುವ ಅರ್ಥ.

ನಂತರ ನೀವು ಇರೋ ಜಾಗವನ್ನು ಬಿಡುತ್ತೀರಾ, ಅಂತ ಅಂದರೆ ನೀವು ಆ ಜಾಗದಿಂದ ಹೊರಗಡೆ ನಡೆಯುವ ಮುಂಚೆ ನಿಮಗೆ ಬೇರೆ ಕಡೆ ಜಾಗ ಗಟ್ಟಿಯಾಗಿದ್ದೀಯಾ ಎಂದು ಯೋಚನೆ ಮಾಡಿ? ಇದೆಲ್ಲಾ ಯೋಚನೆ ಮಾಡೋಕೆ ಸಮಯ ಮಾಡಿಕೊಳ್ಳಿ, ನಿಮಗೆ ಯಾರು ಸರಿಯಾದ ಮಾರ್ಗದರ್ಶಕರು ಅನಿಸುತ್ತಾರೋ, ಅವರ ಹತ್ತಿರ ಕುಳಿತು ಸಾಧಕ-ಭಾದಕದ ಬಗ್ಗೆ ಚರ್ಚೆ ಮಾಡಿ.
ಅದರೆ ಮನೆಯವರ ಹತ್ತಿರ ಮಾತಾನಾಡಿ, ನಿಮಗೆ ಖುಷಿ ಅನಿಸುವ ವಿಷಯದ ಬಗ್ಗೆ ಗಮನ ಕೊಡಿ, ನಿಮ್ಮ ಮನಸ್ಸಿಗೆ
ಸಮಾಧಾನ ಕೊಡೋ ಜಾಗಕ್ಕೆ ಹೋಗಿ ಬನ್ನಿ, ಕುಟುಂಬದವರಿಗೆ ನಿಮ್ಮ ಸಮಯವನ್ನು ಕೊಡಿ, ಸಮಯಕ್ಕೆ ಸ್ವಲ್ಪ ಸಮಯ ಕೊಡಿ, ಎಲ್ಲವು ಸರಿಯಾಗೋ ಸಮಯ ಒಂದಲ್ಲ ಒಂದು ದಿನ ಬಂದೆ ಬರುತ್ತದೆ.

ನಾವು ಎಲ್ಲಿ ಸೋಲುತ್ತೀವಿ ನಿಮ್ಮಗೆನಾದರೂ ಗೊತ್ತಾ? ನಮ್ಮ ಪ್ರೀತಿ, ವಿಷಯ, ನಮ್ಮ ಆದಾಯ, ನಮ್ಮ ಮುಂದಿನ ನಡೆ ಇವೆಲ್ಲಾವನ್ನು ನಾವು ಖುಷಿಯಲ್ಲಿದ್ದಾಗ ನಮ್ಮವರು ಅಂತ ನಂಬಿ ಹೇಳಿಕೊಂಡು ಬಿಡುತ್ತೀವಿ, ಆದರೆ ಸಮಯ ಬದಲಾದ ಹಾಗೆ ಅವರಿಗೆ ನಮ್ಮ ದೌರ್ಬಲ್ಯ ಗೊತ್ತಾಗುತ್ತದೆ. ನಿಮ್ಮ ಬಗ್ಗೆ ಸಹಜವಾಗಿ ಎಲ್ಲಾ ತಿಳಿದ ಮೇಲೆ ನಿಮ್ಮ ಅವಶ್ಯಕತೆ ಮತ್ತು
ಅನಿರ್ವಾಯತೆ ಅವರಿಗೆ ಇಲ್ಲ ಅನಿಸುತ್ತದೆ.

ಇನ್ನೊಂದು ವಿಷಯ ನಿಮಗೆ ಹೇಳಲೇಬೇಕು ನೀವು ಕೆಲಸ ಮಾಡುವ ಸ್ಥಳದಲ್ಲಿ ನಾವು ಮಾಡೋ ಮೊದಲನೆ ತಪ್ಪು ಏನು
ಗೊತ್ತಾ? ನಮ್ಮ ಬಾಸನ್ನು ಮೆಚ್ಚಿಸೋಕೆ ಎಲ್ಲಾ ಕೆಲಸವನ್ನು ಮೈ ಮೇಲೆ ಹಾಕಿಕೊಂಡು ಮಾಡವುದಕ್ಕೆ ಹೋಗುತ್ತೀವಿ, ಕಾಲ ಕ್ರಮೇಣ ಅದು ನಮಗೆ ಇರಿಟೇಷನ್ ಶುರುವಾಗುತ್ತದೆ. ಮೊದಲಿದ್ದ ಇಂಟರೆಸ್ಟ್ ಆಟೋಮ್ಯಾಟಿಕ್ ಆಗಿ ಕಡಿಮೆಯಾಗುತ್ತದೆ, ಕೆಲಸ ಬೋರ್ ಅನಿಸುವುದಕ್ಕೆ ಶುರುವಾಗುತ್ತದೆ. ಅದಕ್ಕೆ ಹೇಳೋದು ಎಲ್ಲಾ ಗೊತ್ತಿದ್ದರೂ, ಏನು ಗೊತ್ತಿಲ್ಲದವನ ಹಾಗೆ ಇದ್ದು ಬಿಡು.

ನಿನ್ನ ಬೆಳವಣಿಗೆ ಸಹಿಸದ ಎಷ್ಟೋ ಜನರು ನಿನ್ನ ಜತೆಯಲ್ಲಿಯೇ ಇರುತ್ತಾರೆ. ಹಾಗಾಗೆ ಏನು ಹೇಳುತ್ತಾರೋ ಅದನ್ನು ಮಾಡು ಸಮಯ ಬಂದಾಗ ನಿನ್ನ ಸಾಮರ್ಥ್ಯ ಅವರಿಗೆ ತೋರಿಸು, ಆಪತ್ತಿಗೆ ಆದವನೇ ನೆಂಟ ಎಂಬ ಅನ್ನೋಭಾವ ಆಗ ಅವರಿಗೆ ಬರುತ್ತದೆ. ಇದು ಒಂದು ಸಿಂಪಲ್ ಟಿಪ್ಸ್ ಅಷ್ಟೇ. ಇದನ್ನು ಬಿಟ್ಟು ಹೇಳುವುದಾದರೆ, ಮೊದಲು ನಿನ್ನನ್ನು ನೀನು ಪ್ರೀತಿಸುವು ದನ್ನು ಕಲಿ, ಬೇರೆಯವರನ್ನು ಮೆಚ್ಚಿಸೋಕೆ ಹೋಗಬೇಡ, ನಿನಗೆ ಖುಷಿ ಕೊಡೋ ಕೆಲಸವನ್ನು ಹೆಚ್ಚು ಮಾಡಿ.

ಒಂಟಿಯಾಗಿ ಇರೋದನ್ನು ಬಿಡಿ, ಅತಿಯಾಗಿ ಯೋಚನೆ ಮಾಡಬೇಡಿ, ಅತಿಯಾದ ಚಿಂತೆ ನಿನ್ನ ಚಿತೆಗೆ ದೂಡುತ್ತದೆ, ಯಾವುದು ಸಮಯ ಬರದೆ ಆಗೋದಿಲ್ಲ, ಅನ್ನೋದನ್ನು ಮರೆಯಬೇಡಿ. ಹಾಗೆ ಸಮಯ ಬರೋ ತನಕ ನಾನು ಕೆಲಸ ಮಾಡುವುದಿಲ್ಲ ಎಂದು ಕೈಕಟ್ಟಿಕೂರಬೇಡಿ. ಈ ಮಾತು ಯಾಕೆ ಹೇಳುತ್ತೇನೆ ಎಂದರೆ, ಒಮ್ಮೆ ಅರ್ಜುನ ಕೃಷ್ಣನನ್ನು ಕೇಳುತ್ತಾನೆ, ಕೃಷ್ಣ ನೀನು ಗೋಡೆ ಮೇಲೆ ಒಂದು ವಿಷಯವನ್ನು ಬರಿ ಅದನ್ನು ಖುಷಿಯಲ್ಲಿ ಇದ್ದಾಗ ದುಃಖ ಆಗಬೇಕು, ದುಃಖದಲ್ಲಿ ಇದ್ದು ನೋಡಿದಾಗ ಖುಷಿ ಆಗಬೇಕು ಎಂದು, ಹಾಗೆ ಕೃಷ್ಣ ಒಂದು ವಾಕ್ಯವನ್ನು ಗೋಡೆಯ ಮೇಲೆ ಬರೆದು ಅದನ್ನು ಓದುವಂತೆ ಹೇಳುತ್ತಾನೆ. ಅದರಲ್ಲಿ ಹೀಗೆ ಬರೆದಿತ್ತು.

‘ಈ ಸಮಯ ಕಳೆದು ಹೋಗುತ್ತದೆ’ ಒಮ್ಮೆ ಸುಮ್ಮನೆ ಕೂತು ಯೋಚನೆ ಮಾಡಿ, ನಿಮ್ಮ ಕಷ್ಟ ಕಳೆದು ಹೋಗುತ್ತದೆ, ನಿಮ್ಮಿಂದ ಹೋದ ವಸ್ತು ಮತ್ತು ವ್ಯಕ್ತಿ ಎಲ್ಲವೂ ನಿಮಗೆ ಸಮಯದೊಂದಿಗೆ ಪುನಃ ಬರುತ್ತದೆ, ಆಗಿದ್ದಾಗ ಜೀವನ ತುಂಬ ಸರಳವಾಗಿದೆ. ನಾನು ಆ ದಿನ ಹಾಗೆ ಮಾಡಿದೀನಾ ಎಂದು ನೀವೇ, ಕೂತು ನಕ್ಕು ಬಿಡುತ್ತೀರಾ ಆದರೆ ನಿಮ್ಮ ಕೆಟ್ಟ ಸಮಯ ನೋಡಿ ನಕ್ಕವರು
ಅಲ್ಲೇ ಅನ್ನುತ್ತಾರೆ, ಉಗರಿನಲ್ಲಿ ಹೋಗುವುದನ್ನು, ಕೊಡಲಿ ತೆಗೆದುಕೊಂಡರು ಎಂಬ ಗಾದೆ ಮಾತಿದೆ.

ಸಮಸ್ಯೆಯನ್ನು ನೀವು ಸಮಸ್ಯೆ ಎಂದು ತೆಗೆದುಕೊಂಡರೇ, ಅದು ದೊಡ್ಡ ಸಮಸ್ಯೆಯಾಗಿ, ನಿಮ್ಮನ್ನು ಕಾಡುತ್ತದೆ. ಅದು ಜೀವನದ ಒಂದು ಭಾಗ. ಈ ದಿನ ಬರುತ್ತದೆ, ನಾಳೆ ಹೋಗುತ್ತದೆ ಅಂದುಕೊಂಡು ಬದುಕಿ, ಸಮಸ್ಯೆ ನಿಮಗೆ ಸಮಸ್ಯೆಯನ್ನೇ ಕೊಡಲ್ಲ, ಅದಕ್ಕೆ ಹೇಳೋದು ಕಷ್ಟ ಬಂದಾಗ ಹೇಳಿಕೊಳ್ಳುವುದಕ್ಕೆ ಮನೆಯಲ್ಲಿ ದೊಡ್ಡವರು ಇರಬೇಕು. ಸೋಲು ಎದುರಾದಾಗ ಸಾಂತ್ವಾನ ಹೇಳಿ, ನಿಮ್ಮ ಕಣ್ಣೀರಿಗೆ ಭುಜ ಕೊಡುವ ಒಂದು ಜೀವ ಇರಬೇಕು. ನೀವು ಸರಿಯಾಗಿ ಸಂಪಾದನೆ ಮಾಡಿ, ನಿಮ್ಮ ಹತ್ತಿರ ಸೋಲು ಬರುವುದಕ್ಕೆ ಯೋಚನೆ ಮಾಡುವುದಿಲ್ಲ.

ಕೊನೆಯದಾಗಿ ಒಂದು ಮಾತು ಹೇಳುತ್ತೇನೆ ಗೆಳೆಯರೇ! ನೀವು ಕಂಪನಿಗೆ ಸ್ನೇಹಿತರಲ್ಲ, ಒಬ್ಬ ವ್ಯಕ್ತಿ ಅಷ್ಟೇ, ನೀವು ಬಿಟ್ಟು ಹೋದ ದಿನ ವೆಕೆನ್ಸಿ ಇದೆ ಎಂದು ಎಂದು ಜಾಹಿರಾತು ಕೊಡುತ್ತಾರೆ. ಮತ್ತೆ ಹುಟ್ಟಿ ಬಾ ಗೆಳೆಯ ಎಂದು ಫ್ಲೆಕ್ಸ್ ಬೋರ್ಡ್ ಹಾಕಿ ಸಾಂತ್ವಾನ ಹೇಳುತ್ತಾರೆ, ಆದರೆ ನಷ್ಟ ಆಗೋದು ನಿಮ್ಮ ಮನೆಗೆ, ನಿಮ್ಮ ಮನೆಯವರಿಗೆ, ಒಂದು ಸೋಲು ನಮ್ಮನ್ನು ಅಷ್ಟು ಕುಗ್ಗಿಸುತ್ತದೆ.

ಅದರೆ ನಾವು ಹೇಡಿಗಳಲ್ಲ? ನಮಗೆ ಜೀವನ ಎದುರಿಸೋ ಸಾಮರ್ಥ್ಯ ಇಲ್ಲವಾ? ಸೋತಿದ್ದೀಯಾ ಅಷ್ಟೇ ನೀನು, ಸತ್ತಿಲ್ಲ ಸಾವು ಬರೋ ತನಕ ಹೋರಾಡು, ಸತ್ತ ಮೇಲೆ ನೀನು ಯಾರಿಗಾದರೂ ಮಾದರಿ ಆಗುತ್ತೀಯಾ, ಹೋರಾಡಿ ಸತ್ತ ಎಂದು ಇಲ್ಲ, ಹತ್ತಿರ ದಲ್ಲಿ ನೀವು ಹನ್ನೊಂದು ಆಗುತ್ತೀರಾ ಯೋಚನೆ ಮಾಡಿ?