Wednesday, 30th October 2024

ರಾಜ್ಯ ವಕ್‌ಫ್‌ ಬೋರ್ಡ್ ಅಧ್ಯಕ್ಷ ಡಾ.ಯೂಸುಫ್ ನಿಧನ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ಕರ್ನಾಟಕ ರಾಜ್ಯ ವ್ಫೃ್‌ ಬೋರ್ಡ್ ಅಧ್ಯಕ್ಷ ಡಾ.ಯೂಸುಫ್ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಕಿಡ್ನಿ ಹಾಗೂ ಇತರ ಅಂಗಾಂಗ ವೈಫಲ್ಯ ಕಾರಣದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ 20 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಶುಕ್ರವಾರದಂದು  ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಅಸುನೀಗಿದ್ದಾರೆ.

ವ್ಫೃ್‌ ಬೋರ್ಡ್‌ನ ಅಧ್ಯಕ್ಷರಾಗಿ ಎರಡನೇ ಬಾರಿ ಅವರು ಕಳೆದ ವರ್ಷ ಚುನಾಯಿತರಾಗಿದ್ದರು. ಉದ್ಯಮಿಯೂ ಆಗಿರುವ ಅವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.  ವ್ಫೃ್‌ ಬೋರ್ಡ್ ಅಧ್ಯಕ್ಷರಾದ ಬಳಿಕ ಒತ್ತುವರಿಯಾಗಿರುವ ವ್ಫೃ್‌ ಸರ್ವೆ ಕಾರ್ಯವನ್ನು ಕೈಗೊಂಡು ವ್ಫೃ್‌ ಆಸ್ತಿಯ ಒತ್ತುವರಿ ತೆರವಿಗೆ ಪ್ರಯತ್ನಿಸಿದ್ದರು.
ಓರ್ವ ಪುತ್ರ, ಪುತ್ರಿ ಹಾಗೂ ಪತ್ನಿ ಮತ್ತು ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ. ಗೋವಿಂದಪುರದ ಮುಝಮ್ಮಿಲ್ ಮಸೀದಿಯ ಕಬರಸ್ತಾನದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.  ಡಾ.ಯೂಸುಫ್  ಸೇರಿದಂತೆ ಅನೇಕ ಗಣ್ಯರು ಅವರಿಗೆ ಸಂತಾಪ ಸೂಚಿಸಿದ್ದಾರೆ.