ತಿಪಟೂರು: ದೇವಾಂಗ ಸಮಾಜದ ಪೂಜ್ಯ ದೇವತೆಯಾದ ಹೊಸಕೆರೆ ಲಕ್ಷ್ಮಿದೇವಿಯವರಿಗೆ ಹಸೆಗೆ ಇಳಿಸುವ ಕಾರ್ಯಕ್ರಮ ನವಂಬರ್ ೧೧ನೇ ಶುಕ್ರವಾರ ಮತ್ತು ೧೨ ನೇ ಶನಿವಾರ ನಗರದ ಹಿಂಡಿಸ್ಕೆರೆ ಗ್ರಾಮದಲ್ಲಿ ನಡೆಯಲಿದೆ ಎಂದು ಹೊಸಕೆರೆ ಲಕ್ಷ್ಮಿದೇವಿ ದೇವಾಲಯದ ಟ್ರಸ್ಟಿನ ಅಧ್ಯಕ್ಷ ಉಮಾಪತಿ ತಿಳಿಸಿದರು.
ನಗರದ ಖಾಸಗಿ ಹೋಟೆಲಿನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನ.೧೧ ರ0ದು ದೇವಿಯವರ ಅಪ್ಪಣೆ ಮೇರೆಗೆ ಪ್ರತಿ ವರ್ಷದಂತೆ ಹಸೆಗೆ ಇಳಿಸುವ ಕಾರ್ಯಕ್ರಮ ಅಂದರೆ ಲಕ್ಷ್ಮಿ ತಾಳಿ, ಗುಂಡು, ಮುಂತಾದ ಆಭರಣಗಳನ್ನು ಮಣ್ಣು ಮಿಶ್ರಣ ಮಡಿಕೆಯ ನೆಲ್ಲಿಕಾಲಿನ ಮೇಲಿಟ್ಟು ಶಾಸ್ತ್ರ ವಿಧಾನಗಳಿಂದ ಮಡಿಯಿಂದ ಮತ್ತೆ ಮೂಡಿಸುವ ಪದ್ಧತಿಯ ಕಾರ್ಯಕ್ರಮವಾಗಿರುತ್ತದೆ.
ಈ ಕಾರ್ಯಕ್ರಮಕ್ಕೆ ದೇವಾಂಗ ಜಗದ್ಗುರು ಶ್ರೀ ದಯಾನಂದಪುರಿ ಮಹಾಸ್ವಾಮೀಜಿಗಳು ಗಾಯಿತ್ರಿ ಪೀಠ ಹಂಪೆ ಹೇಮಕೂಟ ಹಾಗೂ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿ ಕೆರಗೋಡಿ ರಂಗಾಪುರ ಕ್ಷೇತ್ರ, ಮತ್ತು ಶ್ರೀ ಅಭಿನವ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ನೊಣವಿನಕೆರೆ ಮಠ, ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಟಿ ಆರ್ ಉಮಾಪತಿ, ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಚಿವ ಬಿ ಸಿ ನಾಗೇಶ್, ರಾಜ್ಯಸಭಾ ಸದಸ್ಯರಾದ ಕೆ ನಾರಾಯಣ್, ಬೆಂಗಳೂರು ದೇವಾಂಗ ಸಂಘದ ಡಾ, ರಮೇಶ್, ಸಂಗಮೇಶ್ ಉಪಾಸೇ, ಆರ್ ರಾಮಕೃಷ್ಣಯ್ಯ, ಮಾಜಿ ಶಾಸಕರಾದ ಕೆ. ಷಡಕ್ಷರಿ, ಕಾಂಗ್ರೆಸ್ ಮುಖಂಡ ಕೆ. ಟಿ. ಶಾಂತಕುಮಾರ್, ಸಿ.ಬಿ. ಶಶಿಧರ್ ವೈದ್ಯರಾದ ಡಾ, ಶ್ರೀಧರ್ ವಹಿಸಲಿದ್ದಾರೆ. ಇದೇ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ ೧೨ನೇ ಶನಿವಾರ ಮಾಸ್ತಮ್ಮನವರ ಕಾರ್ಯಕ್ರಮವಿದ್ದು, ದೇವಿಯವರಿಗೆ ನಾಡಿದಾದ್ಯಂತ ಭಕ್ತರಿದ್ದು ಸಾವಿರಾರು ಜನ ಭಾಗವ ಹಿಸುವ ನಿರೀಕ್ಷೆ ಇದೆ.
ಎರಡು ದಿನವೂ ಸಹ ದಾಸೋಹ ವ್ಯವಸ್ಥೆಯಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಕಾಶ್ ಕಾರ್ಯದರ್ಶಿ, ಗವಿ ರಂಗಯ್ಯ ಖಜಾಂಚಿ ಜಂಟಿ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ್ ಮುಂತಾ ದವರಿದ್ದರು.