ಮಧುಗಿರಿ : ನಿರ್ಮಾಣವಾಗದ ಧನದ ಕೊಟ್ಟಿಗೆ ಕಾಮಗಾರಿಯಲ್ಲಿ ಗ್ರಾ.ಪಂ. ಸದಸ್ಯೆಯ ಪತಿಯ ಹೆಸರಲ್ಲಿ ಬಿಲ್ ಪಾವತಿ ಮಾಡಿದ್ದು ಗುಣಮಟ್ಟದ ಕಾಮಗಾರಿ ಮಾಡಿರುವ ಬಡವರಿಗೆ ಹಣ ಪಾವತಿಸದೆ ಅನ್ಯಾಯ ಮಾಡಲಾಗಿದೆ ಎಂದು ದೊಡ್ಡ ಮಾಲೂರು ಗ್ರಾ.ಪಂ ಸದಸ್ಯ ಸುರೇಶ್ ಆರೋಪಿಸಿದ್ದಾರೆ.
ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ದೊಡ್ಡಮಾಲ್ಲೂರು ಗ್ರಾ.ಪಂ.ನ ಶ್ರಾವಂಡನ ಹಳ್ಳಿಯಲ್ಲಿ ಕಳೆದ ಅವಧಿಯಲ್ಲಿ ನಡೆಸಿರುವ ಹಲವಾರು ಕಾಮಗಾರಿಗಳಲ್ಲಿ ಲೋಪವಿದ್ದು ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಶಾವಂಡನಹಳ್ಳಿ ಗ್ರಾಮದ ಗ್ರಾ.ಪಂ. ಸದಸ್ಯೆ ರೂಪ ನಾಗೇಂದ್ರ ಹಾಗೂ ಭಾಗ್ಯಮ ಬಸವ ರಾಜು ಇವರುಗಳು ಈ ನಕಲಿ ಕಾಮಗಾರಿಯಲ್ಲಿ ಬಿಲ್ ಪಡೆದವರೆಂದು ಆರೋಪಿಸಿರುವ ಸದಸ್ಯ ಸುರೇಶ್ ಒಂದೇ ದನದ ಕೊಟ್ಟಿಗೆಗೆ ೨೦೧೫-೧೬ ರಲ್ಲಿ ಒಂದು ಬಾರಿ ಹಾಗೂ ೨೦೨೦-೨೧ ರಲ್ಲಿ ಅದೇ ಕೊಟ್ಟಿಗೆಗೆ ಇಬ್ಬರ ಹೆಸರಲ್ಲಿ ಹಣ ಪಾವತಿಯಾಗಿದೆ ಎಂದು ಆರೋಪಿಸಿರುವ ಸುರೇಶ್ ಯಾವುದೇ ಧನದ ಕೊಟ್ಟಿಗೆ ನಿರ್ಮಿಸದೆ ಸರ್ಕಾರಕ್ಕೆ ದ್ರೋಹ ಮಾಡಲಾಗಿದೆ.
ಅವರ ದಾಖಲೆಗಳ ಪ್ರಕಾರ ಹಣ ಪಾವತಿಸಿದ್ದು ಧನದ ಕೊಟ್ಟಿಗೆಯೇ ಸ್ಥಳದಲ್ಲಿ ನಿರ್ಮಿ ಸಿಲ್ಲ, ಬಡವರು ಸಾಲಮಾಡಿ ಕಾಮಗಾರಿ ನಡೆಸಿದ್ದು ಅವುಗಳಿಗೆ ಬಿಲ್ ನೀಡದೆ ಸತಾಯಿ ಸುವ ಗ್ರಾ.ಪಂ. ಅಧಿಕಾರಿಗಳು ಕೆಲಸ ಮಾಡದಿದವರಿಗೆ ಹಣ ನೀಡಿರುವುದು ಎಷ್ಟು ಸರಿ ಎಂದರು.
ಗ್ರಾಮದ ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಮಲ್ಲೇಶ್ ಮಾತನಾಡಿ, ಗ್ರಾಮದ ೧೬೪ ನೇ ಸ.ನಂ. ನಲ್ಲಿರುವ ದೊಡ್ಡಮಾಲೇರಪ್ಪ ಕಟ್ಟೆ ಎಂಬ ಸಣ್ಣ ಕೊಳವಿದ್ದು ಅದರ ಅಭಿವೃದ್ಧಿಗಾಗಿ ೩ ಲಕ್ಷ ಮೀಸಲಿಟ್ಟು ಎನ್‌ಎಂಆರ್ ಹಣವಾಗಿ ಈಗಾಗಲೇ ೨ ಲಕ್ಷ ಹಣ ಬಿಡುಗಡೆಯಾಗಿದೆ, ಆದರೆ ಇಲ್ಲಿ ಯಾವುದೇ ಕೆಲಸಗಳಾಗಿಲ್ಲ. ಈ ಕೆಲಸವನ್ನು ಸದಸ್ಯೆ ಭಾಗ್ಯಮ ಪತಿಯಾದ ಬಸವರಾಜು ಎಂಬುವವರು ಮಾಡಿದ್ದು ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಗಂಭೀರ ಆರೋಪ ಮಾಡಿ ದ್ದಾರೆ.
ಗ್ರಾಮದ ಆನಂದಕುಮಾರ್ ಮಾತನಾಡಿ, ನೇತ್ರಾವತಿ ಎಂಬುವವರು ಹಾಗೂ ನಾವು ಕುರಿ ಶೆಡ್ ನಿರ್ಮಿಸಿಕೊಂಡು ವರ್ಷ ವಾಗಿದ್ದು ಇಲ್ಲಿಯವರೆಗೂ ಮೆಟೇರಿಯಲ್ ಬಿಲ್ ಪಾವತಿಸಿಲ್ಲ : ಅಳಕೆ ಮತ್ತು ಗುಣಮಟ್ಟದಲ್ಲಿ ಶೆಡ್ ನಿರ್ಮಿಸದಿದ್ದರೂ ಅವರಿಗೆ ಹಣ ನೀಡಲಾಗಿದ್ದು, ಪ್ರಾಮಾಣಿಕವಾಗಿ ಶೆಡ್ ನಿರ್ಮಿಸಿದ್ದ ನನಗೆ ಹಣ ನೀಡಲು ಸಾತಾಯಿಸುತ್ತಿದ್ದಾರೆಂದು ನೋವು ತೋಡಿ ಕೊಂಡರು.
*
ನಾನು ಕೆಲವು ತಿಂಗಳುಗಳಿ0ದ ಅಧ್ಯಕ್ಷನಾಗಿ ಕೆಲಸ ನಿರ್ವಹಿಸುತ್ತಿದ್ದು ಇತ್ತೀಚೆಗೆ ತಾಂತ್ರಿಕ ಸಮಸ್ಯೆ ಎದುರಾಗಿ ಕೆಲ ಕಾಮಗಾರಿಯ ಹಣ ಬಿಡುಗಡೆ ತಡವಾಗಿದ್ದು ಉಳಿದ ಕಾಮಗಾರಿ ಹಣ ಬಿಡುಗಡೆ ಮಾಡಿಸಲು ಎಲ್ಲಾ ಕ್ರಮ ಕೈಗೊಳ್ಳುತ್ತೇವೆ.
ಅಶ್ವಥ್ ನಾರಾಯಣ ನೂತನ ಅಧ್ಯಕ್ಷ ದೊಡ್ಡಮಾಲೂರು ಗ್ರಾ.ಪಂ.ಮಧುಗಿರಿ
*
ನನ್ನ ಮಡದಿ ರೂಪ ದೊಡ್ಡಮಾಲೂರು ಗ್ರಾಪಂ ಸದಸ್ಯೆ ನಿಜ ನಾನು ಕೂಡ ಗ್ರಾ.ಪಂ ವತಿಯಿಂದ ಧನದ ಕೊಟ್ಟಿಗೆ ನಿರ್ಮಿಸುವ ಉದ್ದೇಶದಿಂದ ಹಣ ಪಡೆದಿದ್ದೇನೆ . ಆದರೆ ಕೊಟ್ಟಿಗೆ ನಿರ್ಮಿಸಿದ ಹಣ ಪಡೆದಿಲ್ಲ.
ನಾಗೇಂದ್ರ, ಸದಸ್ಯೆ ರೂಪ ರವರ ಪತಿ