ಹೊಸಕೆರೆ ಲಕ್ಷ್ಮಿದೇವಿ ಅಮ್ಮನವರ ಹಸೆಗೆ ಇಳಿಸುವ ಧಾರ್ಮಿಕ ಕಾರ್ಯ ಕ್ರಮದಲ್ಲಿ ಅಭಿಪ್ರಾಯ
ತಿಪಟೂರು: ಗ್ರಾಮೀಣ ಭಾಗಗಳಲ್ಲಿ ಧರ್ಮ, ದೇವರು, ದೇವಸ್ಥಾನ ಸಂಸ್ಕೃತಿ ಮುಂತಾದ ಧಾರ್ಮಿಕ ವಿಚಾರಗಳು ಇನ್ನೂ ಜೀವಂತವಾಗಿವೆ ಎಂದು ಕೆರಗೋಡಿ-ರಂಗಾಪುರ ಕ್ಷೇತ್ರದ ಶ್ರೀ ಗುರುಪರದೇಶೀಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹಿಂಡಿಸ್ಕೆರೆ ಗ್ರಾಮದ ಹೊಸಕೆರೆ ಲಕ್ಷ್ಮಿದೇವಿ ಅಮ್ಮನವರ ಹಸೆಗೆ ಇಳಿಸುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಮಾತನಾಡಿದ ಶ್ರೀಗಳು, ಪ್ರಪಂಚದಲ್ಲಿ ಭಾರತೀಯ ಸಂಸ್ಕೃತಿ ಸಮೃದ್ದವಾಗಿ ಕೂಡಿದ್ದು ಜಾಗತೀಕರಣ ದ ಪ್ರಭಾವ ದಿಂದಾಗಿ ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಮಾರ್ಪಡುತ್ತಿವೆ. ಹೆತ್ತವರಿಗೆ ಗೌರವ ನೀಡುವುದು ಹಿರಿಯರನ್ನು ಗೌರವ ಆಧರದಿಂದ ಗೌರವಿಸುವುದು ಇನ್ನೂ ಜೀವಂತವಾಗಿದೆ ಎಂದು ನಮ್ಮ ಸಂಸ್ಕೃತಿಯನ್ನು ನೆನೆದರು.
ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕಿರಿಯ ಶ್ರೀಗಳು ಮಾತನಾಡಿ, ದೇವರು ಮತ್ತು ಧರ್ಮದ ವಿಷಯದಲ್ಲಿ ಭಕ್ತರ ಪಾತ್ರ ಮಹತ್ವದ್ದು. ಭಕ್ತರ ಮತ್ತು ದೇವರ ನಡುವೆ ದೇವಸ್ಥಾನಗಳು ಮಠ ಮಾನ್ಯಗಳು ಪ್ರಮುಖವಾಗುತ್ತವೆ. ಆ ಮೂಲಕ ಜನರಲ್ಲಿ ಸಾಮರಸ್ಯ ಮೂಡಿಸುವಂತಹ ಪರಿಸರ ನಿರ್ಮಾಣ ಮಾಡುತ್ತಿವೆ ಎಂದರು.
ಕುಮಾರ್ ಆಸ್ಪತ್ರೆಯ ವೈದ್ಯ ಡಾ.ಶ್ರೀಧರ್ ಮಾತನಾಡಿ, ದೇವಾಂಗ ಸಮಾಜದ ಪೂಜ್ಯ ದೇವತೆಯಾದ ಹೊಸಕೆರೆ ಲಕ್ಷ್ಮಿದೇವಿ ಯವರಿಗೆ ರಾಜ್ಯಾದ್ಯಂತ ಭಕ್ತರಿದ್ದಾರೆ. ದೇವಾಗ ಜನಾಂಗದವರು ಲಕ್ಷ್ಮಿ ದೇವರನ್ನು ಅತೀ ಹೆಚ್ಚಾಗಿ ಪೂಜಿಸುತ್ತಾರೆ, ಅದೇ ಅವರ ಭಕ್ತಿ ಮತ್ತು ನಂಬಿಕೆಯಾಗಿದೆ. ದೇವರು ಮತ್ತು ಧರ್ಮದ ಬಗ್ಗೆ ಅನಿಸಿಕೆ ಅಭಿಪ್ರಾಯಗಳು ಬದಲಾಗುತ್ತಿರುವ ಕಾಲಘಟ್ಟ ದಲ್ಲಿ ಇಂತಹ ಧಾರ್ಮಿಕ ಕೆಲಸಗಳು ಹೆಚ್ಚು ನಡೆದು ಧರ್ಮದ ಬಗ್ಗೆ ಜಾಗೃತಿ ನೀಡುವಂತಹ ಕೆಲಸವಾಗಬೇಕೆಂದರು.
ಹೊಸಕೆರೆ ಲಕ್ಷ್ಮಿದೇವಿ ಅಮ್ಮನವರ ಟ್ರಸ್ಟಿನ ಅಧ್ಯಕ್ಷರಾದ ಟಿ.ಆರ್.ಉಮಾಪತಿ, ಜಿಲ್ಲಾ ದೇವಾಂದ ಸಮಾಜದ ಅಧ್ಯಕ್ಷ ರಾಮ ಕೃಷ್ಣಯ್ಯ, ಕಾಮಗ್ರೆಸ್ ಮುಖಂಡ ಸಿ.ಬಿ.ಶಶೀಧರ್, ವಕೀಲ ತ್ಯಾಗರಾಜು, ಕಾರ್ಯದರ್ಶಿ ಮತ್ತು ಗ್ರಾಪಂ ಸದಸ್ಯ ಪ್ರಕಾಶ್, ಉಪಾಧ್ಯಕ್ಷ ಚಂದ್ರಶೇಖರ್, ಖಜಾಂಚಿ ಗವಿ ರಂಗಯ್ಯ, ಜಂಟಿ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ್, ನಿರ್ದೇಶಕ ಜಗದೀಶ್, ದೇವಸ್ಥಾನದ ಪೂಜಾರಿ ಗವಿರಂಗಯ್ಯ ಸೇರಿದಂತೆ ಟ್ರಸ್ಟ್ನ ಸದಸ್ಯರು, ಗ್ರಾಮಸ್ಥರು, ಭಕ್ತರು ಸೇರಿದಂತೆ ಭಾಗವಹಿಸಿದ್ದರು.
ದೇವಸ್ಥಾನದ ಕಾರ್ಯಕ್ರಮಕ್ಕೆ ಸಹಾಯ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು.