Tuesday, 26th November 2024

ಡಿವೈಎಸ್‌ಪಿಗಳಿಗೆ ಮುಂಬಡ್ತಿ ನೀಡಿ ವರ್ಗಾವಣೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಪೊಲೀಸ್ ಇಲಾಖೆಯಲ್ಲಿ ಡಿವೈಎಸ್‌ಪಿ (ಸಿವಿಲ್) ವೃಂದದಲ್ಲಿ ಸೇವೆ  ಸಲ್ಲಿಸುತ್ತಿರುವ ಅಧಿಕಾರಿಗಳಿಗೆ ಎಸ್.ಪಿ. (ಸಿವಿಲ್, ನಾನ್ ಐಪಿಎಸ್) ವೃಂದಕ್ಕೆೆ  ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.

ಎಸ್.ಟಿ.ಸಿದ್ದಲಿಂಗಪ್ಪ ಅವರನ್ನು ರಾಜ್ಯ  ಗುಪ್ತವಾರ್ತೆಯ ಪೊಲೀಸ್ ಅಧೀಕ್ಷಕರಾಗಿ, ಮುಹಮ್ಮದ್ ಹುಸೇನ್ ಕರ್ನಾಟಕ
ಲೋಕಾಯುಕ್ತ ಪೊಲೀಸ್  ಅಧೀಕ್ಷಕರಾಗಿ, ಬಸಪ್ಪ ಎಸ್.ಅಂಗಡಿ ಅವರನ್ನು ಬೆಂಗಳೂರು ನಗರ ಅಪರಾಧ-2ರ ಉಪ ಪೊಲೀಸ್
ಆಯುಕ್ತರಾಗಿ ವರ್ಗಾಯಿಸಲಾಗಿದೆ. ಬಿ.ಎಲ್.ವೇಣುಗೋಪಾಲ್ ಅವರನ್ನು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ, ಗುರುನಾಥ್ ಬಿ.ಮತ್ತೂರು ಅವರನ್ನು ಬಳ್ಳಾರಿ ಭ್ರಷ್ಟಾಚಾರ ನಿಗ್ರಹ ದಳದ  ಪೊಲೀಸ್ ಅಧೀಕ್ಷಕರಾಗಿ, ಸಿ.ಎನ್.ಭೋಪಯ್ಯ ಅವರನ್ನು ಮಂಗಳೂರು ಭ್ರಷ್ಟಾಚಾರ ನಿಗ್ರಹ ದಳದ  ಪೊಲೀಸ್ ಅಧೀಕ್ಷಕರಾಗಿ , ಎಂ.ಮಂಜುನಾಥ್ ಅವರನ್ನು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ  ವರ್ಗಾಯಿಸಲಾಗಿದೆ.

ಆರ್.ಆರ್. ಕಲ್ಯಾಣಶೆಟ್ಟಿ ಅವರನ್ನು ಬೆಳಗಾವಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕರಾಗಿ, ಸಿ.ಡಬ್ಲ್ಯು ಪೂವಯ್ಯ ಅವರನ್ನು ರಾಜ್ಯ ಗುಪ್ತ ವಾರ್ತೆ  ಪೊಲೀಸ್ ಅಧೀಕ್ಷಕರಾಗಿ, ಎನ್.ಜನಾರ್ದನ್‌ರನ್ನು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ, ಚಂದ್ರಶೇಖರ್ ಆರ್. ನೀಲಗಾರ್ ಅವರನ್ನು ಬೆಳಗಾವಿ ನಗರದ ಅಪರಾಧ ಮತ್ತು ಸಂಚಾರ ಉಪ ಪೊಲೀಸ್ ಆಯುಕ್ತರಾಗಿ, ವಿನಯ್  ಅನಂತ್ ಗಾಂವಕರ್‌ರನ್ನು ಮಂಗಳೂರು ನಗರ ಅಪರಾಧ ಮತ್ತು ಸಂಚಾರ ಉಪ ಪೊಲೀಸ್ ಆಯುಕ್ತ, ವಿನಯ್  ಕುಮಾರ್ ಆರ್.ಬಿಸ್‌ನಳ್ಳಿ ಅವರನ್ನು ಧಾರವಾಡ ಲೋಕಾಯುಕ್ತ ಪೊಲೀಸ್ ಅಧೀಕ್ಷಕ,  ಟಿ.ವೆಂಕಟೇಶ್ ಅವರನ್ನು ಬೆಂಗಳೂರು ಸಿಐಡಿ ಪೊಲೀಸ್ ಅಧೀಕ್ಷಕ, ವಿ.ಧನಂಜಯ್ಯರನ್ನು ಗುಪ್ತವಾರ್ತೆ ಪೊಲೀಸ್  ಅಧೀಕ್ಷಕ, ಎಸ್.ಬದ್ರಿನಾಥ್ ಅವರನ್ನು ಕಾರವಾರ ಜಿಲ್ಲೆ ಹೆಚ್ಚುವರಿ ಪೊಲೀಸ್  ಅಧೀಕ್ಷಕರಾಗಿ ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ.