Thursday, 28th November 2024

ಅರಿವು ಮೂಡಿಸುವ ಕೆಲಸಕ್ಕೆ ವೇಗ ಸಿಗಬೇಕಿದೆ

ತುಮಕೂರು: ಬೆಸ್ಟ್ & ಬ್ಯಾಂಟಿಂಗ್  ಇನ್ಸುಲಿನ್ ಕಂಡು ಹಿಡಿದು ಇಂದಿಗೆ ನೂರು ವರ್ಷಗಳ ಕಳೆದಿದ್ದು ಇವತ್ತಿಗೂ ಜಾಗತಿಕ ವಾಗಿ ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಬಾರದಿರುವುದು ಆತಂಕಕಾರಿಯಾಗಿದೆ. ಈ ವರ್ಷದ ಸಂದೇಶದಂತೆ, ಎಲ್ಲರಿಗೂ ಸಕ್ಕರೆ ಖಾಯಿಲೆಯ ಶಿಕ್ಷಣ ಹಾಗೂ ಅರಿವು ಮೂಡಿಸುವ ಕೆಲಸಕ್ಕೆ ವೇಗ ಸಿಗಬೇಕಿದೆ ಎಂದು ಸಿದ್ಧಗಂಗಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಶಾಲಿನಿ ಎಂ. ರವರು ತಿಳಿಸಿದರು.

ಸಿದ್ಧಗಂಗಾ ಆಸ್ಪತ್ರೆಯಲ್ಲಿ ಮಧುಮೇಹ ದಿನಾಚರಣೆ ಹಾಗೂ ಮಕ್ಕಳ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ ಗ್ರಾಮೀಣ ಪ್ರದೇಶಗಳಿಗೆ ಆರೋಗ್ಯ ಸೇತುವೆಯಾದ ಆರೋಗ್ಯ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಸ್ತರದವರು ಸಕ್ಕರೆ ಖಾಯಿಲೆ ಮತ್ತು ಅದರ ಪರಿಣಾಮಗಳ ಬಗ್ಗೆ ತಾವು ಅರಿತುಕೊಂಡು ಇತರಿಗೂ ಅರಿವು ಮೂಡಿಸ ಬೇಕು.  ಆರೋಗ್ಯದ ವಿಚಾರದಲ್ಲಿ ಪೋಷಕರು ಮೊದಲು ಮಾದರಿಯಾಗಿರಬೇಕು.ಪೌಷ್ಠಿಕ ಆಹಾರ ಹಾಗೂ ಸ್ವಚ್ಛತೆಯ ಪ್ರಜ್ಞೆ,ಶಿಸ್ತಿನ ಜೀವನ ಕಲಿಸಿ ಭವಿಷ್ಯದಲ್ಲಿ ಮಕ್ಕಳು ಖಾಯಿಲೆ ಯಿಂದ ಬಳಲುವುದನ್ನು ತಪ್ಪಿಸಿ ಎಂದರು.

ಮಧುಮೇಹ ಅಪಾಯ ತಪ್ಪಿಸಲು ಸಿದ್ಧಗಂಗಾ ಆಸ್ಪತ್ರೆ ಕೇಂದ್ರದಲ್ಲಿ ಹಾಗೂ ಬಸ್ ನಿಲ್ದಾಣದ ಸಮೀಪವಿರುವ ನಗರ ಆರೋಗ್ಯ ಕೇಂದ್ರದಲ್ಲಿ ನವೆಂಬರ್ ೩೦ ರವರೆಗೆ ಪ್ರತಿನಿತ್ಯ ಉಚಿತ ಮಧುಮೇಹ ಪರೀಕ್ಷೆ ನಡೆಸಲಾಗುತ್ತಿದೆ. ಮಧುಮೇಹ ಲಕ್ಷಣಗಳು ಕಂಡು ಬಂದಾಗಲೇ ಪರೀಕ್ಷಿಸಿಕೊಂಡರೆ ಭವಿಷ್ಯ ಬಹು ಅಂಗಾಂಗ   ವೈಫಲ್ಯಕ್ಕೆ ತುತ್ತಾಗುವುದು ತಪ್ಪುತ್ತದೆ ಎಂದರು.

ಮಕ್ಕಳ ತಜ್ಞ ಡಾ.ಈಶ್ವರ್ ಮಾಕಂ ಮಾತನಾಡಿ, ಪ್ರಪಂಚದ ಒಂದು ಮಿಲಿಯನ್ ಮಕ್ಕಳು ಪ್ರತಿ ವರ್ಷ ಟೈಪ್ ೧ ಮಾದರಿಯ ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ ಇತ್ತೀಚಗೆ ಟೈಪ್ ೨ ಡಯಾಬಿಟಿಸ್ ಗೂ ಒಳಗಾಗುತ್ತಿರುವುದು ಕಳವಳಕಾರಿ, ಮಕ್ಕಳಲ್ಲಿ ಅತಿಯಾದ ಬಾಯಾರಿಕೆ, ಅನಿಯಮಿತ ಮೂತ್ರವಿಸರ್ಜನೆ, ದೃಷ್ಟಿದೋಷ ಕಂಡು ಬಂದಲ್ಲಿ ಕೂಡಲೇ ವೈದ್ಯರ ಬಳಿ ಸಂದರ್ಶನ ಪಡೆಯುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಮಧುಮೇಹ ತಜ್ಞೆ ಡಾ.ನಳಿನಿ, ಫಿಸಿಷಿಯನ್ ಡಾ.ಆದಿತ್ಯ ಮುಂತಾದವರಿದ್ದರು.