Saturday, 21st December 2024

ಆರ್.ಎಮ್. ಶಹಾ ಪಬ್ಲಿಕ್‌ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಇಂಡಿ: ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಆರ್.ಎಮ್. ಶಹಾ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಸಂಭ್ರಮದಿ0ದ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಂತರಾಷ್ಟಿçÃಯಯೋಗಪಟು ಆನಂದ. ಎಸ್ ವiಕ್ಕಳಿಗೆ ಯೋಗದ ಪ್ರಾತಕ್ಷಿಕೆಯನ್ನು ನೀಡಿ ಮಾತನಾಡುತ್ತಾ ಮಕ್ಕಳು ಸ್ವಾಮಿ ವಿವೇಕಾ ನಂದರ ನುಡಿಯಂತೆ“ಮುAದೆಗುರಿ ಇರಲಿ ಹಿಂದೆ ಗುರುವಿರಲಿ”ಎಂಬ ತತ್ವವನ್ನು ವಿವರಿಸುತ್ತಾ“ಆರೋಗ್ಯವೇ ಮಹಾಭಾಗ್ಯ” ವಾಗಿದ್ದುಅದಕ್ಕಾಗಿ ವಿದ್ಯಾರ್ಥಿಗಳು ಪ್ರತಿದಿನ ಯೋಗ ಮತ್ತು ಧ್ಯಾನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಹಾನ್ ವ್ಯಕ್ತಿಗಳ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಛಲದಿಂದ ಮುನ್ನುಗ್ಗಿದಾಗ ಮಾತ ್ರತಮ್ಮ ಗುರಿತಲುಪಲು ಸಾಧ್ಯವಾಗುತ್ತದೆ.ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಂಸ್ಥಾಪಕ ಅಧ್ಯಕ್ಷ ಡಿ.ಆರ್.ಶಹಾ ಅವರು ಮಾತನಾಡುತ್ತಾ ವಿಶ್ವದಲ್ಲಿ ಜನಿಸಿದ ನಾವು ಆತ್ಮ ಸ್ಥೆöÊರ್ಯ, ಶಿಸ್ತು-ಸಂಯಮ ದಿ0ದ ಒಳ್ಳೆಯ ಶಿಕ್ಷಣವನ್ನು ಪಡೆದುಕೊಂಡು ಸಮಾಜಕ್ಕೆಏನಾದರೂಕೊಡುಗೆಯನ್ನು ನೀಡಿದಾಗ ಮಾತ್ರ ನಮ್ಮಜೀವನ ಸಾರ್ಥಕ ವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಎಮ್. ಜೆ. ಉಸ್ತಾದ, ವಿನಯ ಅಯ್ಯರ್, ಸವಿತಾ ಸಾಲಿ ಅವರು ಪಂಡಿತಜವಾಹರ್ ಲಾಲ್ ನೆಹರು ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ದೇಶ ಸೇವೆಗೆ ಕಂಕಣಬದ್ಧರಾಗಬೇಕೆ0ದು ತಿಳಿ ಹೇಳಿದರು.

ಸಂಸ್ಥೆ ಆಡಳಿತಾಧಿಕಾರಿ ಕಲ್ಪನಾ ಶಹಾ ಪದವಿಪೂರ್ವ ವಿಭಾಗದ ಪ್ರಾಂಶುಪಾಲ ಪರವೀಣ ಜಮಾದಾರ, ಪ್ರಾಚಾರ್ಯ ಪ್ರಕಾಶ ಪಾಟೀಲ್ ವೇದಿಕೆಯಲ್ಲಿದ್ದರು. ಶಿಕ್ಷಕಿ ಸರೋಜನಿ ದಂಡಾವತಿ ಹಾಗೂ ಅಶ್ವಿನಿ ಗಾಯಕವಾಡ ನಿರೂಪಿಸಿ, ಶಿಕ್ಷಕ ಅಲ್ಲಭಕ್ಷ ಉಕಲಿ ವಂದಿಸಿದರು.