ತಿಪಟೂರು: ಆಧುನಿಕ ಪ್ರಪಂಚದಲ್ಲಿ ಮನುಷ್ಯರು ಅತಿ ವೇಗದಲ್ಲಿ ಓಡುತ್ತಿದ್ದು ಮಾನವನ ಉತ್ತಮ ಆರೋಗ್ಯಕ್ಕೆ ನಮ್ಮಲ್ಲಿರುವ ನಾಟಿ ಹಾಗೂ ದೇಶಿ ಹಸುವಿನ ಉತ್ಪನ್ನಗಳನ್ನು ಉಪಯೋಗಿಸಿದ್ದರೆ ಆರೋಗ್ಯ ವೃದ್ದಿಯಾಗುತ್ತದೆ ಎಂದು ಕೊನೇಹಳ್ಳಿ ಆಯುರ್ವೇದ ಆಸ್ವತ್ರೆಯ ವೈದ್ಯಾಧಿಕಾರಿ ಡಾ ಸುಮುನಾ ತಿಳಿಸಿದರು.
ರಂಗಾಪುರದ ನಿವೃತ್ತ ದೈಹಿಕ ಶಿಕ್ಷಕ ಷಡಾಕ್ಷರಯ್ಯನವರ ತೋಟದಲ್ಲಿ ಆಯೋ ಜನೆ ಮಾಡಿದ್ದ ದೇಶಿ ಗವ್ಯೋತ್ಪನ್ನ ಪರಿವಾರದ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಮನುಷ್ಯನು ಇಂದು ನಾನಾ ರೀತಿಯ ಉದ್ಯೋಗಳನ್ನು ಸೃಷ್ಟಿಸಿಕೊಂಡು ಹಣ ದುಡಿಯುವ ಭರದಲ್ಲಿ ತನ್ನ ಆರೋಗ್ಯದ ಕಡೆ ನಿರ್ಲಕ್ಷö್ಯ ಮಾಡಿ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾನೆ. ಅದ್ದರಿಂದ ಮನುಷ್ಯನಿಗೆ ಆರೋಗ್ಯವು ಅತಿ ಮುಖ್ಯವಾಗಿದ್ದು ದೇಶಿ ಹಸುವಿನಿಂದ ಬರುವ ಹಾಲು-ಮೋಸರು, ತುಪ್ಪ-ಬೆಣ್ಣೆಯನ್ನು ಮಾರಾಟ ಮಾಡದೆ ಅತಿ ಹೆಚ್ಚಾಗಿ ಉಪಯೋಗಿಸಿದರೆ ಸಧೃಡ ದೇಹ ಹಾಗೂ ಉತ್ತಮ ಆರೋಗ್ಯವನ್ನು ಪಡೆಯ ಬಹುದು ಎಂದರು.
ಇತ್ತೀಚಿನ ದಿನಗಳಲ್ಲಿ ದೇಶಿ ಹಸುಗಳು ಕಡಿಮೆ ಆಗುತ್ತಿರವುದು ಆತಂಕದ ವಿಚಾರವಾಗಿದ್ದು ಪ್ರತಿ ಗ್ರಾಮಗಳಲ್ಲಿ ದೇವಾಸ್ಥಾನದ ಆರ್ಚಕರು ದೇಶಿ ಹಸುಗಳನ್ನು ಪಾಲನೆ ಮಾಡುವುದರ ಮೂಲಕ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ ಎಂದರು.
ಪರಿವಾರದ ರೇಣುಕಾರಧ್ಯ ಮಾತನಾಡಿ ನಮ್ಮಗಳ ಪರಿಸರವು ಪ್ಲಾಸ್ಟಿಕ್ ಮುಕ್ತತತೆಯಿಂದ ಕೊಡಿರಬೇಕಾಗಿದೆ. ಇಂದು ನಾವು ಬಳಸುವ ಎಲ್ಲಾ ವಸ್ತುಗಳು ಪ್ಲಾಸ್ಟಿಕ್‌ನಿಂದ ನಿರ್ಮಾಣ ವಾಗುತ್ತಿದೆ ಮುಂದಿನ ಪೀಳಿಗೆಗಾಗಿ ಅದಷ್ಟೂ ಕಡಿಮೆ ಪ್ಲಾಸ್ಟಿಕ್ ಬಳಕೆ ಮಾಡಬೇಕೆಂದು ತಿಳಿಸಿದರು.
ತಾಲ್ಲೂಕು ಭಾರತೀಯ ಕಿಸಾನ್ ಸಂಘದ ಗೌರವಧ್ಯಕ್ಷ ಶಂಕರಮೂರ್ತಿ ರಂಗಾಪುರ ಮಾತ ನಾಡಿ ನಮ್ಮ ರೈತರು ಅತಿ ಹೆಚ್ಚು ಇಳುವರಿ ಕೊಡುವ ತಳಿಗಳನ್ನು ಉಪಯೋಗಿಸಿ ರಾಸಾಯನಿಕ ಗೊಬ್ಬರವನ್ನು ಬಳಸಿ ಭೂಮಿಯನ್ನು ವಿಷಯುಕ್ತವಾಗಿ ಮಾಡಿದ್ದಾರೆ ನಮ್ಮ ಭೂಮಿಗೆ ಇಂದು ನಾಟಿ ಹಸುವಿನ ಸಗಣಿ ಅತಿ ಅವಶ್ಯಕತೆ ಇದೆ ಎಂದು ತಿಳಿಸಿದರು.
ಗೋಪರಿವಾರದ ಶ್ರೀಗುರುಜೀ ಮಾತನಾಡಿ ಗೋವಿನ ಸಗಣಿಯಿಂದ ಸುಗಂಧ ದ್ರವ್ಯ, ವಿಭೂತಿ, ದೀಪ, ಹಲ್ಲಿನ ಪುಡಿ, ಸಾಬೂನು ಮುಂತಾದ ವಸ್ತುಗಳನ್ನು ತಯಾರು ಮಾಡಿ ದಿನ ನಿತ್ಯ ಬಳಕೆಗೆ ಬಳಸಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಾವಯವ ಕೃಷಿಕ ಜಗನ್ನಾಥ್‌ಗೌಡನಕಟ್ಟೆ, ಶಿವಗಂಗಷಡಾಕ್ಷರಯ್ಯ, ರಾಜಶೇಖರ್‌ಕೆರಗೋಡಿ, ಗ್ರಾ ಪಂ ಸದಸ್ಯ ಜಯಣ್ಣ, ತಡಸೂರು ಯೋಗನಂದ್, ಅನಗೊಂಡನಹಳ್ಳಿ ಶಶಿಧರ್, ವಿನಾಯಕ್, ಷಣ್ಮುಖ ಮತ್ತಿತ್ತರು ಹಾಜರಿದ್ದರು.