Wednesday, 30th October 2024

ಪ್ರಭುತ್ವಗಳಿಂದ ದಮನಕಾರಿ ನೀತಿಗಳ ಜಾರಿ – ದೊರೈರಾಜ್

ಪ್ರಭುತ್ವಗಳು ಕರೊನ ಸೋಂಕು ಭೀತಿ ಹುಟ್ಟಿಸಿ ದಮನಕಾರಿ ಕಾನೂನುಗಳ ಜಾರಿಗೆ ತರುತ್ತಿವೆ. ಇದು ರೈತ, ಕರ‍್ಮಿಕ ಮತ್ತು ಜನ ವಿರೋಧಿಯಾಗಿದ್ದು ಜನತೆಗೆ ದ್ರೋಹ ಬಗೆಯುತ್ತಿವೆ ಎಂದು ಪ್ರಗತಿಪರ ಚಿಂತಕ ಕೆ. ದೊರೈರಾಜ್ ಆರೋಪಿಸಿದರು.

ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಾವು ಭಾರತೀಯರು ವತಿಯಿಂದ ಭಾರತ ಉಳಿಸಿ ಅಂಗವಾಗಿ ಕ್ವಿಟ್ ಇಂಡಿಯಾ ದಿನದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕರೊನ ಕಾಯಿಲೆಯನ್ನು ಭಯೋತ್ಪಾದನೆ ಎಂಬಂತೆ ಬಿಂಬಿಸಲಾಗುತ್ತಿದೆ. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ರ‍್ಕಾರಗಳು ಬಂಡವಾಳಶಾಹಿ, ಶ್ರೀಮಂತರೊಂದಿಗೆ ಸೇರಿಕೋಂಡು ಕೋಮುವಾದಿ ಮತ್ತು ಜನ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿವೆ. ಇಂತಹ ಸಂರ‍್ಭದಲ್ಲಿ ಐಕ್ಯಹೋರಾಟಗಳು ಅಗತ್ಯ ಎಂದು ಪ್ರತಿಪಾದಿಸಿದರು.

ಸಮಾಜ ಸೇವಕ ತಾಜುದ್ದೀನ್ ಷರೀಫ್ ಮಾತನಾಡಿ ದೇಶದಲ್ಲಿ ಪ್ರತಿಪರ ಚಿಂತಕರನ್ನು ಬಂಧಿಸುವ, ಅವರನ್ನು ಸುಳ್ಳು ಮೊಕದ್ದಮೆಗಳಲ್ಲಿ ಸಿಲುಕಿಸಿ ಜೈಲಿಗೆ ಕಳೆಸುವ ಸೇಡಿನ ಕ್ರಮವನ್ನು ರ‍್ಕಾರಗಳು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಈ ಸಂರ‍್ಭದಲ್ಲಿ ರೈತ ಮುಖಂಡ ಬಿ. ಉಮೇಶ್, ಪರಿಸರವಾದಿ ಸಿ. ಯತಿರಾಜು, ಖಲೀಲ್ ಅಹಮದ್, ಇತರರು ಉಪಸ್ಥಿತರಿದ್ದರು.