ಅಧಿವೇಶನದಲ್ಲಿ ರಚನಾತ್ಮಕ ಮತ್ತು ಫಲಪ್ರದ ಚರ್ಚೆಗೆ ಆದ್ಯತೆ ನೀಡೋಣ ಎಂದೂ ಕರೆಕೊಟ್ಟಿದ್ದಾರೆ. ಚಳಿಗಾಲದ ಅಧಿವೇಶನ ರಾಜ್ಯಸಭೆಯಲ್ಲಿ ತುಸು ವಿಶೇಷ ಅನ್ನಿಸಲು ಕಾರಣ, ಇದು ಜಗದೀಪ್ ಧನಕರ್ ಅವರಿಗೆ ಮೊದಲ ಅಧಿವೇಶನ. ಉಪರಾಷ್ಟ್ರಪತಿ ಆದವರೇ ರಾಜ್ಯಸಭೆ ಅಧ್ಯಕ್ಷರಾಗಿರುತ್ತಾರೆ. ಅವರ ನೇತೃತ್ವದಲ್ಲೇ ಕಲಾಪಗಳು ನಡೆಯು ತ್ತವೆ. ಇದೇ ವರ್ಷದ ಆಗಸ್ಟ್ನಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಜಗದೀಪ್ ಧನಕರ್ ಅವರಿಗೆ ಇದೇ ಮೊದಲ ಅಧಿವೇಶನ ಆಗಿದೆ.
ಹಿಮಾಚಲ ಪ್ರದೇಶದಲ್ಲಿ ಈಗಾಗಲೇ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದೆ. ಗುಜರಾತ್ನಲ್ಲಿ ಡಿಸೆಂಬರ್ 1 ಮತ್ತು 5ರಂದು ಚುನಾವಣೆ ನಡೆಯಲಿದೆ. ಎರಡೂ ರಾಜ್ಯಗಳ ಚುನಾವಣಾ ಮತ ಎಣಿಕೆ ಡಿಸೆಂಬರ್ 8ರಂದು ನಡೆಯಲಿದೆ. ಅದಕ್ಕೂ ಒಂದು ದಿನ ಮೊದಲು ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದೆ.
ಕಳೆದ ಎರಡು ವರ್ಷ ಕೊವಿಡ್ 19 ಕಾರಣಕ್ಕೆ ಸಂಸತ್ತಿನ ಅಧಿವೇಶನವೂ ಕಟ್ಟುನಿಟ್ಟಾಗಿ ನಡೆದಿತ್ತು.