ತುಮಕೂರು: ನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 21,990 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದ್ದು ಕೂಲಂಕುಷ ತನಿಖೆ ನಡೆಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳನ್ನು ಮಾಜಿ ಶಾಸಕ ಡಾ.ರಫೀಕ್ ಅಹಮದ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರ ವಿಧಾನಸಭಾ ಕ್ಷೇತ್ರದಲ್ಲಿ 2008 ರಲ್ಲಿ ಒಟ್ಟು 1,99,842 ಮತದಾರರಿದ್ದರು, 2013 ರಲ್ಲಿ ಒಟ್ಟು ಮತದಾರರು 2,10,412 2018 ರಲ್ಲಿ ಒಟ್ಟು 2,59,542 2013 ರಲ್ಲಿ ಒಟ್ಟು ಮತದಾರರು 2,10,412 2018 ರಲ್ಲಿ ಒಟ್ಟು ಮತದಾ ರರು 2,59,542, ಆದರೆ 2023 ರಲ್ಲಿ ಒಟ್ಟು ಮತದಾರರ ಸಂಖ್ಯೆ 2,40,165 ಮತದಾರರು ಎಂದು ಕರಡು ಪಟ್ಟಿಯಲ್ಲಿ ಬಿಡುಗಡೆ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.
2019 ರಿಂದ 2022 ರವರೆಗೂ ಸೇರ್ಪಗೊಂಡ ಮತದಾರರ ಸಂಖ್ಯೆ 9277, 2019 ರಿಂದ 2022 ರವರೆಗೂ ಬಿಟ್ಟಿರುವ ಮತದಾರರ ಸಂಖ್ಯೆ ಕೇವಲ 6661 ಮತದಾರರಾಗಿರುತ್ತಾರೆ ಎಂದ ಅವರು, ಆಗಿರುವ ಲೋಪ-ದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ ದರು.
ಕಳೆದ ಅವಧಿಯಲ್ಲಿ ಸುಮಾರು 21,990 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಇಷ್ಟೊಂದು ಮಂದಾರರನ್ನು ಕೈಬಿಡಲು ಕಾರಣವೇನು? ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯಲ್ಲಿ ಆಧಾರ್ ಲಿಂಕ್ ಮಾಡಿಸ ದವರನ್ನು ಪಟ್ಟಿಯಿಂದ ಡಿಲಿಟ್ ಮಾಡಲಾ ಗಿದೆಯೇ? ಸರಿಯಾದ ರೀತಿಯಲ್ಲಿ ಮಾಡಿಲ್ಲದಿರುವ ಕಾರಣವೇನು? 18 ವರ್ಷ ತುಂಬಿದ ಯುವಕ ಯುವತಿಯರಿಗೆ ಮತದಾನದ ಅರಿವು ಮೂಡಿಸಿ ಕಳೆದ ಎರಡು ವರ್ಷಗಳಲ್ಲಿ ಮಾಡಿರುವ ಮತದಾರರ ಪಟ್ಟಿಯ ಪರಿಷ್ಕರಣೆ ಅಸಮರ್ಪಕವಾಗಿ ನಡೆದಿರುತ್ತದೆ ಎಂದು ಆರೋಪಿಸಿದರು. ಸುದ್ದಿಗೋಷ್ಟಿಯಲ್ಲಿ ಮೇಯರ್ ಪ್ರಭಾವತಿ, ಕುಮಾರ್, ರಾಮಕೃಷ್ಣ ಇತರರಿದ್ದರು.