Friday, 29th November 2024

ಆರೋಗ್ಯವಂತರಾಗಲು ಕ್ರೀಡೆ ಸಹಕಾರಿ: ಶಾಸಕ‌ ಗೌರಿಶಂಕರ್

ತುಮಕೂರು: ಕ್ರೀಡೆಯಲ್ಲಿ ದಿನನಿತ್ಯ ತಪ್ಪದೇ ಭಾಗವಹಿಸುವುದರಿಂದ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯ ವಂತರಾಗುವುದರ ಜತೆಗೆ ಸಮಾಜದ ಗೌರವಕ್ಕೆ ಪಾತ್ರರಾಗುತ್ತೀರ ಎಂದು ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ಹೇಳಿದರು.
ತಾಲ್ಲೂಕಿನ ಹೊನ್ನುಡಿಕೆಯ ಶ್ರೀ ಸ್ವರ್ಣಾಂಬ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಿದ್ದ 17 ವರ್ಷದೊಳಗಿನ ಬೆಂಗಳೂರು ವಿಭಾಗೀಯ ಮಟ್ಟದ ಹಾಗೂ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆ ಎಂದರೆ ನನಗೆ ಬಹಳ ಆಸಕ್ತಿ. ಎಷ್ಟೇ ಒತ್ತಡವಿದ್ದರೂ ವಾರದಲ್ಲಿ ಎರಡು ದಿನ ನಾನು ಕ್ರಿಕೆಟ್ ಆಡುತ್ತೇನೆ. ಇದರಿಂದ ನನ್ನ ಆರೋಗ್ಯ ಚೆನ್ನಾಗಿದೆ ಮತ್ತು ನಾನು ಸಕ್ರಿಯ ವಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ ಎಂದರು.
ಡಿಡಿಪಿಐ ಸಿ. ನಂಜಯ್ಯ ಮಾತನಾಡಿ, ಸದೃಢ ದೇಹದಲ್ಲಿ ಸದೃಢ ಆರೋಗ್ಯ ಇರುತ್ತದೆ. ಪಠ್ಯ ಚಟುವಟಿಕೆಗಳಿಗೆ ಕೊಡುವ ಮಾನ್ಯತೆ ಪಠ್ಯೇತರಕ್ಕೂ ನೀಡಬೇಕು ಎಂದು ಹೇಳಿ ದರು.
ಜಿ.ಪಂ. ಮಾಜಿ ಸದಸ್ಯ ರಾಮಚಂದ್ರಯ್ಯ ಮಾತನಾಡಿ, ಹೊನ್ನುಡಿಕೆ ಸ್ವರ್ಣಾಂಭ ಶಾಲೆ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಯಲ್ಲಿ ರಾಷ್ಟçಮಟ್ಟದಲ್ಲಿ ಆಡಿ ಬಂದಿರುವ ಕ್ರೀಡಾಪಟುಗಳಿಗೆ ಅಭಿನಂದನೆಗಳು. ಹಾಗೆಯೇ ಈಗಲೂ ಸಹ ವಿದ್ಯಾರ್ಥಿಗಳು ಜಿಲ್ಲಾ, ರಾಜ್ಯ ಮಟ್ಟದಲ್ಲಿ ಗೆದ್ದು ರಾಷ್ಟçಮಟ್ಟದ ಬಾಲ್ ಬ್ಯಾಡ್ಮಿಂಟನ್‌ಗೆ ಆಯ್ಕೆಯಾಗಿ ಅಲ್ಲೂ ಸಹ ಗೆದ್ದು ತುಮಕೂರು ಜಿಲ್ಲೆ, ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ಹೊನ್ನುಡಿಕೆ ಗ್ರಾ.ಪಂ. ಅಧ್ಯಕ್ಷ ವೆಂಕಟೇಶ್, ಜಿ.ಪಂ. ಮಾಜಿ ಸದಸ್ಯ ರಾಮಚಂದ್ರಯ್ಯ, ಜೆಡಿಎಸ್ ಕಾರ್ಯಾಧ್ಯಕ್ಷ ಹಾಲನೂರು ಅನಂತ್, ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಕೃಷ್ಣಮೂರ್ತಿ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್ ಬಿ.ಎನ್., ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಗಂಗಾಧರ್ ಎಚ್.ಆರ್., ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಾನಾಯಕ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ (ಪ್ರಭಾರಿ) ಪರಮೇಶ್ವರಪ್ಪ ಎಂ.ಬಿ., ದೈಹಿಕ ಶಿಕ್ಷಣ ಶಿಕ್ಷಕರಾದ ಅನಿಲ್‌ಕುಮಾರ್ ಜಿ.ಎಂ, ಸತ್ಯನಾರಾಯಣ್ ಎ. ಕುಣಿಗಲ್ ಟಿಪಿಒ ಗೋಪಾಲಕೃಷ್ಣ, ತಿಪಟೂರು ಟಿಪಿಒ ಶಮಂತಾ ,ಗುಬ್ಬಿ ಟಿಪಿಒ ಚಂದ್ರಮ್ಮ ಮತ್ತಿತರರು ಉಪಸ್ಥಿತರಿದ್ದರು.