Friday, 20th September 2024

ಮಧುಮೇಹಕ್ಕೆ ಜೀವನಶೈಲಿ ಬದಲಾವಣೆ ಅನಿವಾರ್ಯ

ಸ್ವಾಸ್ಥ್ಯ ಸಂಪದ

yoganna55@gmail.com

ಸಕ್ಕರೆಕಾಯಿಲೆ, ಸೂಕ್ತ, ನಿರಂತರ ಚಿಕಿತ್ಸಾ ವಿಧಾನಗಳಿಂದ ಸಮರ್ಥವಾಗಿ ನಿಯಂತ್ರಿಸಿಕೊಂಡು ಅವಘಡಗಳು ಸಂಭವಿಸ ದಂತೆ ನೆಮ್ಮದಿಯಿಂದ ಜೀವಾವಽ ಪೂರ್ಣ ಬದುಕಲು ಸಾಧ್ಯವಿರುವ ದೇಹಸ್ನೇಹಿ ಕಾಯಿಲೆ. ಹಲವಾರು ವಿಧಗಳ ಸಕ್ಕರೆ ಕಾಯಿಲೆಗಳಿದ್ದರೂ ಎರಡನೇ ವಿಧದ ಸಕ್ಕರೆ ಕಾಯಿಲೆ ಸಮುದಾಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾಯಿಲೆ ಯಾದುದರಿಂದ ಈ ಲೇಖನದಲ್ಲಿ 2ನೇ ವಿಧದ ಸಕ್ಕರೆ ಕಾಯಿಲೆಯನ್ನು ಪ್ರಧಾನವಾಗಿ ಪರಿಗಣಿಸಲಾಗಿದೆ.

ಚಿಕಿತ್ಸಾ ವಿಧಾನಗಳನ್ನು ಅರ್ಥಮಾಡಿಕೊಳ್ಳಲು ಸಕ್ಕರೆಕಾಯಿಲೆಯ ಕಾರಣ ಮತ್ತು ಅದನ್ನು ಪ್ರಚೋದಿಸುವ ಜೀವನಶೈಲಿ ಅಂಶಗಳ ಅರಿವು ಅತ್ಯವಶ್ಯಕ.

ವಂಶವಾಹಿ ನ್ಯೂನತೆ: 2ನೇ ವಿಧದ ಸಕ್ಕರೆ ಕಾಯಿಲೆ ಮೂಲತಃ ವಂಶ ವಾಹಿ (ಜೀನ್) ನ್ಯೂನತೆಯ ಕಾಯಿಲೆ. ಗ್ಲುಕೋಸ್ ಚಯಾಪಚಯ ಮತ್ತು ಇನ್ಸುಲಿನ್‌ಗಳ ಸಮತೋಲನವನ್ನು ನಿಯಂತ್ರಿಸುವ ವಂಶವಾಹಿ ಯಲ್ಲಾಗುವ ನ್ಯೂನತೆಯಿಂದ ಉಂಟಾಗುವ ಅನುವಂಶೀಯ ಕಾಯಿಲೆ ಯಿದು.

ಪೂರ್ವಜರಲ್ಲಿ ಈ ಸಂಬಂಧ ವಂಶವಾಹಿಯ ನ್ಯೂನತೆಯಿದ್ದಲ್ಲಿ ಆ ನ್ಯೂನತೆ ಮುಂದಿನ ಪೀಳಿಗೆಗೂ ವರ್ಗಾವಣೆ ಯಾಗುತ್ತದೆ. ತಂದೆ ತಾಯಿಗಳಿಬ್ಬರೂ ಈ ನ್ಯೂನತೆ ಇರುವ ವಂಶಸ್ಥರಾಗಿದ್ದಲ್ಲಿ ಅವರಿಗೆ ಹುಟ್ಟುವ ಮಕ್ಕಳಲ್ಲಿ ಕಾಯಿಲೆ ಬರುವ ಸಾಧ್ಯತೆ ಖಚಿತವಾಗಿರುತ್ತದೆ. ಗಂಡ ಹೆಂಡತಿಯರಲ್ಲಿ ಯಾರಿಗಾದರೊಬ್ಬರಿಗೆ ಈ ವಂಶವಾಹಿ ನ್ಯೂನತೆ ಇದ್ದಲ್ಲಿ ಅವರ ಮಕ್ಕಳಿಗೆ ಬರುವ ಸಾಧ್ಯತೆ ಕಡಿಮೆ. ವಂಶವಾಹಿ ನ್ಯೂನತೆ ಇದ್ದರೂ ಆ ನ್ಯೂನತೆಯನ್ನು ಪ್ರಚೋದಿಸುವ ಅಂಶಗಳ ಪ್ರಭಾವ ತೀವ್ರ ವಾಗಿದ್ದಲ್ಲಿ ಕಾಯಿಲೆ ವ್ಯಕ್ತವಾಗುತ್ತದೆ.

ಪ್ರಚೋದಕ ಅಂಶಗಳು: ಪ್ರಚೋದಿಸುವ ಅಂಶಗಳು ನಿಯಂತ್ರಣದಲ್ಲಿದ್ದಲ್ಲಿ ವಂಶವಾಹಿ ನ್ಯೂನತೆ ಇದ್ದರೂ ಕಾಯಿಲೆ ವ್ಯಕ್ತ ವಾಗುವುದಿಲ್ಲ. ವಯಸ್ಸು, ದೇಹದ ತೂಕ, ವ್ಯಾಯಾಮ, ಮಾನಸಿಕ ಒತ್ತಡ, ಕುಳಿತು ಕೆಲಸಮಾಡುವಿಕೆ, ಧೂಮಪಾನ,
ಮದ್ಯಪಾನ, ಸ್ಟೀರಾಯ್ಡ್ ಔಷಧಗಳ ಸೇವನೆ, ಅಸಮತೋಲನ ಆಹಾರ ಸೇವನೆ, ಇವು ವಂಶವಾಹಿ ನ್ಯೂನತೆಯನ್ನು ಕೆರಳಿಸುವ ಪ್ರಮುಖ ಅಂಶಗಳು. ಈ ಎಲ್ಲ ಪ್ರಚೋದಕ ಅಂಶಗಳ ಏರಿಳಿತಗಳು, ಅವರವರು ಪಾಲಿಸುವ ಜೀವನಶೈಲಿಯನ್ನು
ಅವಲಂಬಿಸಿರುವುದರಿಂದ ಇದನ್ನು ಜೀವನಶೈಲಿ ಆಧಾರಿತ ಸಕ್ಕರೆಕಾಯಿಲೆ ಎಂದು ಕರೆಯಲಾಗುತ್ತದೆ.

ಚಿಕಿತ್ಸಾ ವಿಧಾನಗಳು: ಲಭ್ಯವಿರುವ ಚಿಕಿತ್ಸಾ ವಿಧಾನಗಳನ್ನು ಜೀವನಶೈಲಿಯ ಮತ್ತು ಔಷಧ ಚಿಕಿತ್ಸೆಯ ವಿಧಾನಗಳೆಂದು
ವರ್ಗೀಕರಿಸಲಾಗಿದೆ. ಕಾಯಿಲೆ ಅಲ್ಪ ಹಂತದಲ್ಲಿ ಅಥವಾ ಪೂರ್ವ ಹಂತದಲ್ಲಿ ಇದ್ದಲ್ಲಿ ಜೀವನಶೈಲಿಯ ಬದಲಾವಣೆ
ಮಾರ್ಗಗಳಿಂದಲೇ ಔಷಧಗಳಿಲ್ಲದೆ ಕಾಯಿಲೆಯನ್ನು ತಡೆಗಟ್ಟಬಹುದು ಅಥವಾ ನಿಯಂತ್ರಿಸ ಬಹುದು. ಕಾಯಿಲೆ ಮಧ್ಯಮ ಮತ್ತು ತೀವ್ರ ಹಂತದಲ್ಲಿದ್ದು, ಈಗಾಗಲೇ ಹೃದಯ, ನರಮಂಡಲ, ಕಿಡ್ನಿ, ಕಣ್ಣು ಇತ್ಯಾದಿ ಅಂಗಗಳ ಅವಘಡಗಳು
ಉಂಟಾಗಿದ್ದಲ್ಲಿ ಜೀವನಶೈಲಿಯ ಬದಲಾವಣೆಗಳ ಜೊತೆಗೆ ಔಷಧ ಚಿಕಿತ್ಸೆಗಳು ಅನಿವಾರ್ಯ.

ಜೀವನಶೈಲಿ ಬದಲಾವಣೆ: ಸಕ್ಕರೆಕಾಯಿಲೆ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಯಾದುದ ರಿಂದ, ಆರೋಗ್ಯಕರ
ಜೀವನಶೈಲಿಯ ಪಾಲನೆ ಕಾಯಿಲೆಯ ನಿಯಂತ್ರಣಕ್ಕೆ ಅತ್ಯವಶ್ಯಕ. ಔಷಧಗಳಿಗಿಂತಲೂ ಜೀವನಶೈಲಿಯ ಮಾರ್ಪಾಡು
ಅತಿಮುಖ್ಯ. ಔಷಧಗಳನ್ನು ಗರಿಷ್ಠ ಪ್ರಮಾಣದಲ್ಲಿ ಸೇವಿಸಿದರೂ ಜೀವನಶೈಲಿಯಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಿ ಕೊಳ್ಳದಿದ್ದಲ್ಲಿ ಕಾಯಿಲೆ ನಿಯಂತ್ರಣಕ್ಕೆ ಬಾರದಿರಬಹುದು.

ಆಹಾರ ನಿಯಮಗಳ ಪಾಲನೆ, ದೈನಂದಿನ ವ್ಯಾಯಾಮ, ದೇಹದ ತೂಕ ನಿಯಂತ್ರಣ, ಧೂಮಪಾನ ಮತ್ತು ಮದ್ಯಪಾನಗಳ ವರ್ಜನೆ, ನೆಮ್ಮದಿಯ ಬದುಕು, ಸಕಾಲಿಕ ನಿದ್ರೆ, ಕ್ರಿಯಾಶೀಲ ಬದುಕು ಇವುಗಳ ನ್ನೊಳಗೊಂಡ ದೈನಂದಿನ ಸಂತೃಪ್ತಿಯ ಬದುಕು ಸಕ್ಕರೆಕಾಯಿಲೆಯನ್ನಲ್ಲದೆ ಇನ್ನಿತರ ಘೋರ ಕಾಯಿಲೆಗಳಾದ ಹೃದಯಾಘಾತ, ಏರು ರಕ್ತ ಒತ್ತಡ, ಕ್ಯಾನ್ಸರ್, ಮನೋರೋಗಗಳು, ಸ್ಟ್ರೋಕ್‌ಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಆಹಾರದ ನಿಯಮಗಳು: ಆಹಾರ ದೇಹದ ಜೈವಿಕ ಯಂತ್ರಕ್ಕೆ ಶಕ್ತಿ ಒದಗಿಸುತ್ತದೆ. ಪ್ರತಿಯೊಬ್ಬರು ಅವರ ವಯಸ್ಸು, ಎತ್ತರ,
ತೂಕ ಮತ್ತು ದೈಹಿಕ ಚಟುವಟಿಕೆಗಳಿಗನುಗುಣವಾಗಿ ಅವರವರಿಗೆ ಅವಶ್ಯಕವಿರುವ ಶಕ್ತಿಯ ಪ್ರಮಾಣ, ಪ್ರೋಟೀನ್,
ಜಿಡ್ಡು, ವಿಟಮಿನ್‌ಗಳು ಮತ್ತು ಲವಣಾಂಶಗಳ ನ್ನುಳ್ಳ, ಪ್ರತಿನಿತ್ಯ ಅವಶ್ಯಕವಿರುವ ನಿರ್ದಿಷ್ಟ ಪ್ರಮಾಣದಲ್ಲಿ ಒಳಗೊಂಡ
ಸಮತೋಲನ ಆಹಾರವನ್ನು ನಿರ್ಧರಿಸಿಕೊಳ್ಳಬೇಕು.

ಹಾಗಲ್ಲದೆ ನಾಲಿಗೆ ರುಚಿಗಾಗಿ ಆಹಾರ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳುವುದು ಮಾರಕ. “ಬದುಕಿಗಾಗಿ ಆಹಾರವೇ ವಿನಃ
ಆಹಾರಕ್ಕಾಗಿ ಬದುಕಲ್ಲ” ಎಂಬ ನಾಣ್ಣುಡಿ ಅನುಕರಣೀಯ. ಸಕ್ಕರೆಕಾಯಿಲೆ ಆಹಾರಕ್ಕೆ ಸಂಬಂಧಿಸಿದ ಕಾಯಿಲೆಯಾದು ದರಿಂದ ಆಹಾರ ಸೇವನೆಯ ಬಗ್ಗೆ ಕಟ್ಟುನಿಟ್ಟಾದ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಗ್ಲುಕೋಸ್ ಅಧಿಕವಾಗಿರುವ ಮತ್ತು ಗ್ಲುಕೋಸ್ ಅಂಶ ಬಹುಬೇಗ ರಕ್ತಗತವಾಗುವ ಆಹಾರ ಪದಾರ್ಥಗಳನ್ನು ಮಿತಿಯಾಗಿ ಸೇವಿಸಬೇಕು. ನೀರನ್ನು ಹೊರತು ಪಡಿಸಿ ಇನ್ನುಳಿದ ಎಲ್ಲಾ ಆಹಾರಪದಾರ್ಥಗಳಲ್ಲೂ ಗ್ಲುಕೋಸ್ ಅಂಶ ಇರುವುದರಿಂದ ಯಾವುದರಲ್ಲಿ ಹೆಚ್ಚಿದೆ, ಯಾವುದರಲ್ಲಿ ಕಡಿಮೆ ಇದೆ ಎಂದು ತಿಳಿದು ಸೇವಿಸುವುದು ಅತ್ಯವಶ್ಯಕ.

ಅಕ್ಕಿ, ರಾಗಿ, ಗೋಧಿ, ಜೋಳ, ನವಣೆ, ಸಜ್ಜೆ, ಸಕ್ಕರೆ ಇವುಗಳಲ್ಲಿ ಗ್ಲುಕೋಸ್ ಅಂಶ ಇನ್ನಿತರವುಗಳಿಗಿಂತ ಹೆಚ್ಚಾಗಿದ್ದು, ಅಕ್ಕಿ ಮತ್ತು ಸಕ್ಕರೆಗಳ ಗ್ಲುಕೋಸ್ ಬಹುಬೇಗ ರಕ್ತ ಗ್ಲುಕೋಸ್‌ಅನ್ನು ಏರಿಸುತ್ತವೆ. ಈ ಆಹಾರ ಪದಾರ್ಥಗಳನ್ನು ರೊಟ್ಟಿ, ಮುದ್ದೆ ರೂಪದಲ್ಲಿ ಸೇವಿಸಿದಲ್ಲಿ ನಿಧಾನವಾಗಿ ಗ್ಲುಕೋಸ್ ಏರಿಕೆಯಾಗುತ್ತದೆ. ಗಂಜಿ ಅಥವಾ ದ್ರವ ರೂಪದಲ್ಲಿ ಸೇವಿಸಿದಲ್ಲಿ ಬಹುಬೇಗ ಗ್ಲುಕೋಸ್ ಏರಿಕೆಯಾಗುತ್ತದೆ.

ಹಣ್ಣುಗಳ ಸೇವನೆ ಅತ್ಯವಶ್ಯಕ. ಎಲ್ಲ ಹಣ್ಣುಗಳಲ್ಲೂ ಗ್ಲುಕೋಸ್ ಮತ್ತು -ಕ್ಟೋಸ್ ಇದ್ದು, ಮಾವಿನಹಣ್ಣು, ದ್ರಾಕ್ಷಿ, ಸಪೋಟ, ಹಲಸು ಇವುಗಳಲ್ಲಿ ಗ್ಲುಕೋಸ್ ಅಂಶ ಅಧಿಕವಾಗಿರುವುದ ರಿಂದ ಇವುಗಳ ಸೇವನೆ ರಕ್ತ ಗ್ಲುಕೋಸ್ ಅನ್ನು ಬಹುಬೇಗ ಹೆಚ್ಚಿಸುತ್ತದೆ. ಸಿಹಿತಿಂಡಿಗಳನ್ನು, ಸಕ್ಕರೆಯನ್ನು ತಿನ್ನಲೇಬೇಕಾದಲ್ಲಿ ಮಿತಿಯಾದ ಪ್ರಮಾಣದಲ್ಲಿ ಆಹಾರದ ನಂತರ ಸೇವಿ ಸುವುದು ಸೂಕ್ತ.

ಹಣ್ಣು ಮತ್ತು ತರಕಾರಿಗಳಲ್ಲಿ ನಾರಿನಾಂಶ ಅಧಿಕವಾಗಿರುವುದರಿಂದ ಇವುಗಳನ್ನು ಸೇವಿಸುವುದರಿಂದ ರಕ್ತ ಗ್ಲುಕೋಸ್ ನಿಯಂತ್ರಿತವಾಗುತ್ತದೆ. ಎಲ್ಲ ಪಾನೀಯಗಳು ರಕ್ತ ಗ್ಲುಕೋಸನ್ನು ಹೆಚ್ಚಿಸುತ್ತವೆ. ಹಣ್ಣುಗಳನ್ನು ಸಿಪ್ಪೆ ಸಹಿತ ತಿನ್ನವುದು ಒಳ್ಳೆಯದು. ಉಪ್ಪು ಮತ್ತು ಜಿಡ್ಡಿನ ಅಂಶಗಳನ್ನು ಮಿತಿಯಾಗಿಟ್ಟುಕೊಳ್ಳಬೇಕು.

ಕಾಯಿಲೆಯವರು ಸೇವಿಸುವ ಅವಶ್ಯಕ ದೈನಂದಿನ ಆಹಾರದ ಪ್ರಮಾಣವನ್ನು ೩-೫ ಸಣ್ಣ ಸಣ್ಣ ಕಂತುಗಳಲ್ಲಿ ಸೇವಿಸುವು ದರಿಂದ ಉಂಟಾಗುವ ಅಲ್ಪ ಪ್ರಮಾಣದ ಗ್ಲುಕೋಸನ್ನು ಶಕ್ತಿಯಾಗಿ ಪರಿವರ್ತಿಸಲು ಕಡಿಮೆ ಇರುವ ಇನ್ಸುಲಿನ್ನೇ ಸಾಕಾ ಗುತ್ತದೆ.

ಸಕ್ಕರೆ ಕಾಯಿಲೆಯವರು ಸಿಹಿ ಯನ್ನೂ ಒಳಗೊಂಡಂತೆ ಯಾವ ಆಹಾರ ಪದಾರ್ಥವನ್ನಾದರೂ ಮಿತಿಯಾಗಿ ಸೇವಿಸಬ ಹುದು. ಅತಿ ಗ್ಲುಕೋಸ್ ಉಳ್ಳ ಆಹಾರ ಪದಾರ್ಥಗಳ ಜೊತೆ ಸೊಪ್ಪು ಮತ್ತು ತರಕಾರಿಗಳನ್ನು ಮಿಶ್ರಿತವಾಗಿ ಸೇವಿಸುವು ದರಿಂದ ರಕ್ತ ಗ್ಲುಕೋಸ್ ನಿಧಾನವಾಗಿ ಏರಿಕೆಯಾಗುತ್ತದೆ. ಸಿಹಿ ತಿಂಡಿಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದಲ್ಲಿ ರಕ್ತ ಗ್ಲುಕೋಸ್ ಬಹುಬೇಗ ಏರಿಕೆಯಾಗುವುದರಿಂದ ಊಟದ ಕೊನೆಯ ಹಂತದಲ್ಲಿ ಸೇವಿಸುವುದು ಸೂಕ್ತ.

ಸಕ್ಕರೆಕಾಯಿಲೆಯವರು ನಿಯಮಿತವಾಗಿ, ಕಾಲಾನುಕಾಲಕ್ಕೆ ಆಹಾರ ಸೇವಿಸುವುದು ಅತ್ಯವಶ್ಯಕ. ಹಸಿದ ಹೊಟ್ಟೆಯಲ್ಲಿ ದೀರ್ಘಕಾಲ ವಿರಬಾರದು. ಒಂದೇ ಬಗೆಯ ಆಹಾರ ಪದಾರ್ಥವನ್ನು ಸೇವಿಸುವುದಕ್ಕಿಂತ ವಿವಿಧ ಬಗೆಯ ಆಹಾರ ಪದಾರ್ಥಗಳಿರುವುದು ಅತ್ಯವಶ್ಯಕ.

ಉದಾ: ಪ್ರತಿನಿತ್ಯ ಸೇವಿಸಲು ಆಹಾರದಲ್ಲಿ ಅಕ್ಕಿ, ರಾಗಿ, ಗೋಧಿ, ನವಣೆ, ಜೋಳ, ಹಣ್ಣು ಮತ್ತು ತರಕಾರಿಗಳಿರಬೇಕು. ಪ್ರತಿನಿತ್ಯ ವೈವಿಧ್ಯಮಯ ಆಹಾರ ಪದಾರ್ಥಗಳನ್ನುಳ್ಳ ಆಹಾರಸೇವನೆಯಿಂದ ದೇಹಕ್ಕೆ ಅವಶ್ಯಕವಿರುವ ಎಲ್ಲ ಅಂಶಗಳು ಲಭಿಸುತ್ತವೆ.

ವ್ಯಾಯಾಮ: ದೈನಂದಿನ ದೈಹಿಕ ವ್ಯಾಯಾಮ ಇನ್ಸುಲಿನ್ ಕಾರ್ಯ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ ಇನ್ಸುಲಿನ್
ಇಲ್ಲದೆ ಗ್ಲುಕೋಸ್ ಅನ್ನು ದೇಹ ಉಪಯೋಗಿಸಿಕೊಳ್ಳುವ ಪರ್ಯಾಯ ಮಾರ್ಗಗಳನ್ನು ಪ್ರಚೋದಿಸುವುದರಿಂದ
ವ್ಯಾಯಾಮದಿಂದ ರಕ್ತ ಗ್ಲುಕೋಸ್ ನಿಯಂತ್ರಿತವಾಗುತ್ತದೆ. ಪ್ರತಿನಿತ್ಯದ ಕನಿಷ್ಠ ೨ಕಿ.ಮೀ ನಡಿಗೆ, ಸೈಕಲಿಂಗ್, ಈಜು, ಓಟ
ಯಾವುದಾದರೊಂದು ಉಪಯೋಗಕಾರಿ.

ಭಾರ ಎತ್ತುವ ಜಿಮ್ನಾಷಿಯಂ ವ್ಯಾಯಾಮಗಳಿಗಿಂತ ನಡಿಗೆ ಮತ್ತು ಓಟ ಹೆಚ್ಚು ಪ್ರಯೋಜನಕಾರಿ. ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದಕ್ಕಿಂತ ಆಹಾರ ಸೇವಿಸಿ ಇನ್ಸುಲಿನ್ ಮತ್ತಿತರ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದಲ್ಲಿ ಅವುಗಳನ್ನು
ತೆಗೆದುಕೊಂಡು ವ್ಯಾಯಾಮ ಮಾಡುವುದು ಸುರಕ್ಷಿತ. ಇಲ್ಲದಿದ್ದಲ್ಲಿ ರಕ್ತ ಗ್ಲುಕೋಸ್ ಇಳಿಕೆಯಾಗುವ ಸಾಧ್ಯತೆ ಇರುತ್ತದೆ.
ದೇಹದ ತೂಕ: ಎತ್ತರ ಮತ್ತು ತೂಕಗಳ ಅನುಪಾತ (ಬಿಎಂಐ) ೨೫ಕ್ಕಿಂತಲೂ ಜಾಸ್ತಿ ಇದ್ದಲ್ಲಿ ಸ್ಥೂಲಕಾಯ ಎಂದು
ಪರಿಗಣಿಸಲಾಗುತ್ತದೆ.

ಅಧಿಕ ದೇಹದ ತೂಕ ಇನ್ಸುಲಿನ್ ಕಾರ್ಯ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ವ್ಯಾಯಾಮವಿಲ್ಲದ ಬದುಕು ಅವಶ್ಯಕತೆಗಿಂತ ಹೆಚ್ಚು ಶಕ್ತಿಪ್ರಮಾಣದ ಆಹಾರಸೇವನೆ ಮತ್ತು ವಂಶವಾಹಿ ನ್ಯೂನತೆ ಸ್ಥೂಲಕಾಯಕ್ಕೆ ಪ್ರಮುಖ ಕಾರಣಗಳು. ಕೇವಲ ಶೇ೧೦ರಷ್ಟು ದೇಹದ ತೂಕ ಕಡಿಮೆಯಾದಲ್ಲಿ ಔಷಧಗಳ ಪ್ರಮಾಣ ಕಡಿಮೆಯಾಗುವುದಲ್ಲದೆ ಸಕ್ಕರೆಕಾಯಿಲೆ ನಿಯಂತ್ರಣಕ್ಕೂ ಬರುತ್ತದೆ.

ಕೆಲವರಲ್ಲಿ ದೇಹದ ತೂಕ ಕಡಿಮೆಯಾಗದಿದ್ದಲ್ಲಿ ಇನ್ನಿತರ ಚಿಕಿತ್ಸಾ ಕ್ರಮಗಳು ಪರಿಣಾಮಕಾರಿಯಾಗವು. ಕೆಲವು ಸಕ್ಕರೆಕಾಯಿಲೆ ನಿಯಂತ್ರಕ ಮಾತ್ರೆಗಳು (ಸಲನಿಲ್ ಯೂರಿಯಾ ಗಳು-ಗ್ಲಿಮಿಪ್ರೈಡ್) ಮತ್ತು ಇನ್ಸ್ಯುಲಿನ್‌ಗಳಿಂದಲೇ ದೇಹದ ತೂಕ ಅಧಿಕವಾಗುತ್ತದೆ. ಕೆಲವು ಸಕ್ಕರೆಕಾಯಿಲೆ ನಿಯಂತ್ರಕ ಮಾತ್ರೆಗಳು ದೇಹದ ತೂಕವನ್ನೂ ಕಡಿಮೆ ಮಾಡುತ್ತವೆ
(ಡಿಪೊ-ಜಿನ್).

ಧೂಮಪಾನ: ಹೊಗೆಸೊಪ್ಪಿನಲ್ಲಿರುವ ನಿಕೋಟಿನ್ ರಕ್ತಗ್ಲುಕೋಸನ್ನು ಏರಿಸುತ್ತದೆ ಮತ್ತು ಇನ್ಸ್ಯುಲಿನ್ ಕಾರ್ಯಸಾಮರ್ಥ್ಯ ವನ್ನು ಕುಗ್ಗಿಸುವುದರಿಂದ ಧೂಮಪಾನಿಗಳಲ್ಲಿ ಸಕ್ಕರೆಕಾಯಿಲೆ ನಿಯಂತ್ರಣಕ್ಕೆ ಬರುವುದಿಲ್ಲ. ಧೂಮಪಾನ ವರ್ಜನೆ ಅತ್ಯವಶ್ಯಕ.

ಮದ್ಯಪಾನ: ಮದ್ಯಪಾನವೂ ಸಹ ರಕ್ತಗ್ಲುಕೋಸನ್ನು ಏರಿಸುತ್ತದೆ. ಮೆಟ್-ರ್ಮಿನ್ ಇತ್ಯಾದಿ ಸಕ್ಕರೆಕಾಯಿಲೆ ನಿಯಂತ್ರಕ ಮಾತ್ರೆಗಳನ್ನು ಮದ್ಯದೊಡನೆ ಸೇವಿಸಿದಲ್ಲಿ ಸುಸ್ತು, ಸಂಕಟ, ವಾಂತಿಗಳುಂಟಾಗಿ ಗಂಭೀರ ಸ್ವರೂಪದ ಅವಘಡ ಗಳುಂಟಾಗುತ್ತವೆ.

ಸಂತೃಪ್ತಿಯ ಬದುಕು: ಅತಿಯಾದ ಮಾನಸಿಕ ಒತ್ತಡ ದೇಹದೊಳಗೆ ಅಡ್ರಿನಲಿನ್, ನಾರ್ ಅಡ್ರಿನಲಿನ್ ಮತ್ತು ಕಾರ್ಟಿಕೋ ಸ್ಟೀರಾಯ್ಡ್ ಹಾರ್ಮೋನ್‌ಗಳ ಪ್ರಮಾಣವನ್ನು ಹೆಚ್ಚಿಸಿ ರಕ್ತಗ್ಲುಕೋಸ್ ಹೆಚ್ಚಿಸುವುದಲ್ಲದೆ ಇನ್ಸುಲಿನ್ ಸಾಮರ್ಥ್ಯವನ್ನು ಸಹ ಕುಗ್ಗಿಸಿ ಕಾಯಿಲೆ ಉಲ್ಬಣಗೊಳ್ಳುತ್ತದೆ.

ಆಧುನಿಕ ಮಾನವ ಟಾರ್ಗೆಟ್ ಹಾಕಿಕೊಂಡು ಕಾರ್ಯನಿರ್ವಹಿಸುತ್ತಿದ್ದು, ಅವನು ಅತಿಯಾದ ದೈಹಿಕ ಮತ್ತು ಮಾನಸಿಕ ಒತ್ತಡಕ್ಕೀಡಾಗುತ್ತಿರುವುದು ಸಕ್ಕರೆ ಕಾಯಿಲೆಯ ಉಗಮ ಮತ್ತು ಉಲ್ಬಣಗಳಿಗೆ ಅತಿಮುಖ್ಯವಾದ ಕಾರಣಗಳಾಗಿವೆ. ಇನ್ನಿತರ ಎಲ್ಲ ಪ್ರಚೋದಕ ಅಂಶಗಳು ನಿಯಂತ್ರಣದಲ್ಲಿದ್ದರೂ ಅತಿಯಾದ ಮಾನಸಿಕ ಒತ್ತಡ ಮತ್ತು ತಳಮಳ ಒಂದೇ ಸಕ್ಕರೆ ಕಾಯಿಲೆಯ ಉಲ್ಬಣಕ್ಕೆ ಕಾರಣವಾಗ ಬಹುದು.

ಮಾನವ ದೇಹ ಟಾರ್ಗೇಟ್‌ಗಳ ಸಾಧನೆ ಗಾಗಿ ನಿರ್ಮಿತವಾದುದಲ್ಲ. ಬದುಕಿಗೆ ಅವಶ್ಯಕವಾ ದಷ್ಟು ಶ್ರಮವನ್ನು ಮಾತ್ರ ಸಹಿಸುವ ಶಕ್ತಿ ಸೃಷ್ಟಿಕರ್ತ ದಯಪಾಲಿಸಿದ್ದಾನೆ. ನೆಮ್ಮದಿಯಿಂದ ಬದುಕುವ ಆಧ್ಯಾತ್ಮಿಕ ಜೀವನಶೈಲಿಯಿಂದ ಮಾತ್ರ ಸಂತೃಪ್ತಿಯ ಬದುಕು ಸಾಧ್ಯ. ಸಂತೃಪ್ತಿ ಬದುಕಿನಿಂದ ಮಾತ್ರ ಸಕ್ಕರೆಕಾಯಿಲೆ ನಿಯಂತ್ರಣವಾಗುತ್ತದೆ.

ಮೇಲಿನ ಅಂಶಗಳೆಲ್ಲವನ್ನೂ ಬದುಕಿನಲ್ಲಿ ಚಾಚೂತಪ್ಪದೆ ಪ್ರತಿನಿತ್ಯ ಅಳವಡಿಸಿಕೊಳ್ಳಬೇಕು. ಒಂದನ್ನು ಬಿಟ್ಟು ಇನ್ನಿತರ
ಅಂಶಗಳನ್ನು ಪಾಲನೆಮಾಡುವುದರಿಂದ ಪ್ರಯೋಜನವಾಗದಿರಬಹುದು. ಧೂಮಪಾನ ಮಾಡಿ ವ್ಯಾಯಾಮ ಮಾಡಿದರೆ
ಪ್ರಯೋಜನವಿಲ್ಲ. ಸಮಗ್ರ ದೃಷ್ಟಿಕೋನದ ದೈನಂದಿನ ಜೀವನಶೈಲಿಯಿಂದ ಮಾತ್ರ ಸಕ್ಕರೆ ಕಾಯಿಲೆ ನಿಯಂತ್ರಿಸಬ ಹುದಲ್ಲದೆ ತಡೆಗಟ್ಟುವುದು ಸಾಧ್ಯ. ಇಲ್ಲದಿದ್ದಲ್ಲಿ ಔಷಧಗಳನ್ನು ಜೊತೆಗೂಡಿಸುವುದು ಅನಿವಾರ್ಯವಾಗುತ್ತದೆ.