ಮಲಯಾಳಂನಿಂದ ಹಿಂದಿಗೆ ರಿಮೇಕ್ ಆದ ಸಿನಿಮಾ. ಒಟಿಟಿಯಲ್ಲಿ ಮಲಯಾಳಂ ‘ದೃಶ್ಯಂ 2’ಚಿತ್ರವನ್ನು ಪ್ರೇಕ್ಷಕರು ಈ ಮೊದಲೇ ನೋಡಿದ್ದರು. ಹಾಗಿದ್ದರೂ ಹಿಂದಿ ರಿಮೇಕ್ ನೋಡಲು ಉತ್ತರ ಭಾರತದ ಮಂದಿ ಮುಗಿ ಬಿದ್ದಿದ್ದಾರೆ. ಪರಿಣಾಮ ವಾಗಿ ಈ ಚಿತ್ರಕ್ಕೆ ಭರ್ಜರಿ ಕಲೆಕ್ಷನ್ ಆಗುತ್ತಿದೆ. 4 ದಿನಕ್ಕೆ ಬರೋಬ್ಬರಿ 76 ಕೋಟಿ ರೂಪಾಯಿ ಹರಿದುಬಂದಿದೆ.
ಶೀಘ್ರವೇ ನೂರು ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ಈ ಸಿನಿಮಾದಿಂದ ನಟ ಅಜಯ್ ದೇವಗನ್ ಮತ್ತೆ ಮೊದಲಿನ ಚಾರ್ಮ್ ಪಡೆದುಕೊಂಡಿದ್ದಾರೆ. ಮೊದಲ ವೀಕೆಂಡ್ನಲ್ಲಿಯೇ ‘ದೃಶ್ಯಂ 2’ ನಿರ್ಮಾಪಕರ ಜೇಬು ತುಂಬಿದೆ.
ನ.18ರಂದು ತೆರೆಕಂಡ ಈ ಚಿತ್ರದಲ್ಲಿ ಅಜಯ್ ದೇವಗನ್ ಜೊತೆ ಶ್ರೀಯಾ ಶರಣ್, ಟಬು, ಅಕ್ಷಯ್ ಖನ್ನಾ, ಇಶಿತಾ ದತ್ತ ಮುಂತಾದವರು ನಟಿಸಿದ್ದಾರೆ. ಮೊದಲ ದಿನ ಸಂಗ್ರಹ ಆಗಿದ್ದು 15.38 ಕೋಟಿ ರೂಪಾಯಿ. ಎರಡನೇ ದಿನ ಕಲೆಕ್ಷನ್ ಹೆಚ್ಚಿತು. ಶನಿವಾರ (ನ.19) ಬರೋಬ್ಬರಿ 21.59 ಕೋಟಿ ರೂಪಾಯಿ ಆದಾಯ ಹರಿದು ಬಂತು.
ಭಾನುವಾರ (ನ.20) 27.17 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಸೋಮವಾರ (ನ.21) 11.87 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಒಟ್ಟು ನಾಲ್ಕು ದಿನಕ್ಕೆ 76 ಕೋಟಿ ರೂಪಾಯಿ ಸಂಗ್ರಹ ಆಗಿದೆ.