ಆಕ್ಲೆಂಡ್: ಟಿ20 ಸರಣಿಯನ್ನು 1-0 ಅಂತರದಿಂದ ಗೆದ್ದ ಪ್ರವಾಸಿ ಭಾರತ ತಂಡ, ಇದೀಗ ಏಕದಿನ ಸರಣಿಯತ್ತ ಗಮನ ಹರಿಸ ಲಿದೆ. ಶುಕ್ರವಾರ ಆಕ್ಲೆಂಡ್ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಗೆಲುವಿನೊಂದಿಗೆ ಶುಭಾರಂಭ ಪಡೆಯಲು ಎದುರು ನೋಡುತ್ತಿದೆ.
21 ಪಂದ್ಯಗಳಲ್ಲಿ 33 ವಿಕೆಟ್ಗಳೊಂದಿಗೆ 2022ರ ಋತುವಿನಲ್ಲಿ ಟಿ20 ಪಂದ್ಯಗಳಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಎಡಗೈ ವೇಗಿ ಅರ್ಶ್ದೀಪ್ ಸಿಂಗ್ ಅವರು ತಮ್ಮ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.
ಬೆನ್ನುನೋವಿನಿಂದಾಗಿ 2022ರ ಟಿ20 ವಿಶ್ವಕಪ್ನಿಂದ ಹೊರಗುಳಿದಿರುವ ಆಲ್ ರೌಂಡರ್ ದೀಪಕ್ ಚಹಾರ್ ಅವರ ಫಿಟ್ನೆಸ್ ಕುರಿತು ಅನುಮಾನಗಳಿವೆ.
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಸೂಪರ್ಪಾಸ್ಟ್ ಬೌಲರ್ ಉಮ್ರಾನ್ ಮಲಿಕ್ ಅವರನ್ನು ಬೆಂಚ್ ಕಾಯಿಸುವಂತೆ ಮಾಡಲಾಗಿತ್ತು. ಇದೀಗ ಶಿಖರ್ ನಾಯಕತ್ವದ ಭಾರತ ತಂಡ ಅತಿಥೇಯ ಕಿವೀಸ್ ಪಡೆಯನ್ನು ನಿಯಂತ್ರಿಸಲು ಈ ಯುವ ವೇಗಿಯನ್ನು ಬಳಸಿಕೊಳ್ಳಬಹುದು. ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರ ಬದಲಾಗಿ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಏಕದಿನ ಸರಣಿ ಯಲ್ಲಿ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
2023ರಲ್ಲಿ ಭಾರತದಲ್ಲಿ ನಡೆಯುವ 50 ಓವರ್ಗಳ ವಿಶ್ವಕಪ್ಗಾಗಿ ತಂಡವನ್ನು ಕಟ್ಟುತ್ತಿರುವಾಗ ಪಂಜಾಬ್ ಮೂಲದ ಆರಂಭಿಕ ಬ್ಯಾಟ್ಸ್ಮನ್ ಉತ್ತಮ ಫಾರ್ಮ್ ಮುಂದುವರಿಸಲು ಎದುರು ನೋಡುತ್ತಿದ್ದಾನೆ.ಇನ್ನು ಶಿಖರ್ ಧವನ್ ಕೂಡ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದು, ಈ ಸರಣಿಯಲ್ಲಿ ತಮ್ಮ ಶತಕದ ಬರವನ್ನು ಕೊನೆಗಾಣಿಸಲು ನೋಡಲಿದ್ದಾರೆ.
ಸಂಭಾವ್ಯ ಆಡುವ 11ರ ಬಳಗ
ಭಾರತ: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್
ನ್ಯೂಜಿಲೆಂಡ್: ಡೆವೊನ್ ಕಾನ್ವೇ, ಫಿನ್ ಅಲೆನ್, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಟಿಮ್ ಸೌಥಿ, ಲಾಕಿ ಫರ್ಗುಸನ್, ಮೈಕೆಲ್ ಬ್ರೇಸ್ವೆಲ್