Wednesday, 30th October 2024

ರಾಜ್ಯದಲ್ಲಿ ಮಂಗಳವಾರ 8,161 ಹೊಸ ಕರೋನಾ ಪ್ರಕರಣ

ವಿಶ್ವವಾಣಿ‌ ‌ಸುದ್ದಿಮನೆ
ಬೆಂಗಳೂರು:
ರಾಜ್ಯದಲ್ಲಿ ಮಂಗಳವಾರ 8,161 ಹೊಸ ಕರೋನಾ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 2,91,826ಕ್ಕೆ ಏರಿಕೆಯಾಗಿದೆ.
 ಕರೋನಾಗೆ 148 ಸೋಂಕಿತರು ಸಾವನ್ನಪ್ಪಿದ್ದು, 751 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸೋಂಕಿನಿಂದ ಗುಣಮುಖರಾಗಿ 6,814 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 81,410 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ.
ರಾಜಧಾನಿ ಬೆಂಗಳೂರಿನಲ್ಲಿ ಕರೋನಾ ಶರವೇಗದಲ್ಲಿ ಸಾಗುತ್ತಿದ್ದು ಮಂಗಳವಾರ 2,294 ಮಂದಿಗೆ ಸೋಂಕು ತಗುಲಿದೆ.  ಒಟ್ಟು ಸೋಂಕಿತರ ಸಂಖ್ಯೆ 1,12,087ಕ್ಕೆ ಏರಿಕೆಯಾಗಿದ್ದು, 35,4330 ಸಕ್ರಿಯ ಪ್ರಕರಣಗಳಿವೆ. ಒಂದೇ ದಿನ ಸಿಲಿಕಾನ್ ಸಿಟಿಯ 61 ಜನರನ್ನ ಕರೋನಾ ಬಲಿ ಪಡೆದಿದ್ದು, ಸಾವನ್ನಪ್ಪಿದವರ ಸಂಖ್ಯೆ 1,755ಕ್ಕೆ ಏರಿಕೆಯಾಗಿದೆ.
ಬಳ್ಳಾರಿಯಲ್ಲಿ 551 ಪ್ರಕರಣಗಳು ವರದಿಯಾಗಿದ್ದು, 1,004 ಮಂದಿ ಗುಣಮುಖ ಹಾಗೂ 6 ಜನ ಸಾವಿಗೀಡಾಗಿದ್ದಾರೆ. ದಾವಣೆಗೆರೆಯಲ್ಲಿ 318 ಪ್ರಕರಣಗಳು,600 ಜನ ಗುಣಮುಖ ಹಾಗೂ ಐವರು ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ 1,331 ಪ್ರಕರಣಗಳು (4 ದಿನಗಳ ಬ್ಯಾಕ್‌ಲಾಗ್‌ ಪ್ರಕರಣಗಳು ಸೇರಿ) ಹಾಗೂ 469 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ 16 ಮಂದಿ ಸಾವಿಗೀಡಾಗಿದ್ದಾರೆ.
ಪ್ರಸ್ತುತ 82,410 ಸಕ್ರಿಯ ಪ್ರಕರಣಗಳಿದ್ದು, ಒಟ್ಟು  ಪ್ರಕರಣಗಳ ಸಂಖ್ಯೆ 2,91,826 ತಲುಪಿದೆ. ಈ ಪೈಕಿ  2,04,439 ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಕರೋನಾ ವೈರಸ್‌ ಸೋಂಕಿನಿಂದ 148 ಮಂದಿ ಸಾವಿಗೀಡಾಗಿದ್ದಾರೆ ಹಾಗೂ ಈವರೆಗೂ 4,958 ಮಂದಿ ಮೃತಪಟ್ಟಿದ್ದಾರೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 83, ಬಳ್ಳಾರಿ 551, ಬೆಳಗಾವಿ 298, ಬೆಂಗಳೂರು ಗ್ರಾಮಾಂತರ 63, ಬೆಂಗಳೂರು ನಗರ 2294, ಬೀದರ್ 61, ಚಾಮರಾಜನಗರ 17, ಚಿಕ್ಕಬಳ್ಳಾಪುರ 93, ಚಿಕ್ಕಮಗಳೂರು 88, ಚಿತ್ರದುರ್ಗ 114, ದಕ್ಷಿಣ ಕನ್ನಡ 247, ದಾವಣಗೆರೆ 318, ಧಾರವಾಡ 204, ಗದಗ 175, ಹಾಸನ 205, ಹಾವೇರಿ 78, ಕಲಬುರಗಿ 227, ಕೊಡಗು 8, ಕೋಲಾರ 47, ಕೊಪ್ಪಳ 238, ಮಂಡ್ಯ 153, ಮೈಸೂರು 1,331 (ಜಿಲ್ಲೆಯ ನಾಲ್ಕು ದಿನಗಳ ಸಂಖ್ಯೆ), ರಾಯಚೂರು 88, ರಾಮನಗರ 56, ಶಿವಮೊಗ್ಗ 276, ಉಡುಪಿ 217, ಉತ್ತರ ಕನ್ನಡ 141, ವಿಜಯಪುರ 135 ಮತ್ತು ಯಾದಗಿರಿ 132 ಹೊಸ ಪ್ರಕರಣಗಳ ವರದಿ ಆಗಿವೆ.