Wednesday, 27th November 2024

ಮದ್ಯ ಸಾಗಿಸಿ ಸಿಕ್ಕಿಬಿದ್ದ ಪ್ರಕರಣ: ಎಸಿಬಿಯಲ್ಲಿ ಎಫ್‌ಐಆರ್

ವಿಶ್ವವಾಣಿ ಸುದ್ದಿಮನೆ ಬೆಂಗಳೂರು :

ಲಾಕ್‌ಡೌನ್ ಸಂದರ್ಭದಲ್ಲಿ ವಾಹನದಲ್ಲಿ ಮದ್ಯ ಸಾಗಿಸಿ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇನ್‌ಸ್‌‌ಪೆಕ್ಟರ್ ಕಿಶೋರ್ ಕುಮಾರ್ ಹಾಗೂ ಕಾನ್‌ಸ್‌‌ಟೇಬಲ್ ಜನಾರ್ದನ್ ಅವರ ಮೇಲೆ ಎಸಿಬಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಅಲ್ಲದೇ ಎಸಿಪಿ ಮೇಲೆ ಎಫ್‌ಐಆರ್ ದಾಖಲಿಸಲು ಸರಕಾರದ ಅನುಮತಿಗಾಗಿ ಕಾಯುತ್ತಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಲಾಕ್‌ಡೌನ್ ವೇಳೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವಾಹನ ಜಪ್ತಿ ಮಾಡಲಾಗಿತ್ತು. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಿಶೋರ್‌ಕುಮಾರ್ ಹಾಗೂ ಎಸಿಪಿ ವಾಸು ಆರೋಪಿಯನ್ನು ಬಿಡಲು 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪ ಕೇಳಿ ಬಂದಿತ್ತು.

ಹಣ ಕೊಡದಿದ್ದರೆ ಎಫ್‌ಐಆರ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇನ್ನು ಆರೋಪಿ ಕುಟುಂಬಸ್ಥರು ಡಿಜಿಐಜಿಪಿಗೆ ದೂರು ನೀಡಿದ ಹಿನ್ನೆಲೆ, ವಿಚಾರಣೆ ನಡೆಸುವಂತೆ ಎಸಿಬಿ ಅಧಿಕಾರಿಗಳಿಗೆ ಡಿಜಿ-ಐಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದರು. ಇನ್‌ಸ್‌‌ಪೆಕ್ಟರ್‌ಗೆ ಹಾಗೂ ಪೊಲೀಸ್ ಕಾನ್‌ಸ್‌‌ಟೇಬಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಎಸಿಪಿ ವಾಸು ಮೇಲೆ ಎಫ್‌ಐಆರ್ ದಾಖಲಿಸಲು ಸರಕಾರದ ಅನುಮತಿ ಅಗತ್ಯ ಹಿನ್ನೆಲೆ ಸದ್ಯ ಇನ್‌ಸ್‌‌ಪೆಕ್ಟರ್ ಹಾಗೂ ಕಾನ್‌ಸ್‌‌ಟೇಬಲ್ ವಿರುದ್ಧ ಪ್ರಕರಣ ದಾಖಲಾಗಿದೆ.