Wednesday, 27th November 2024

ಕಳ್ಳತನ ವಾಹನ 60 ದಿನಗಳಲ್ಲಿ ಪತ್ತೆ

 ಬೆಂಗಳೂರು:

ಕಳ್ಳತನವಾದ ವಾಹನಗಳನ್ನು 60 ದಿನಗಳಲ್ಲಿ ಪತ್ತೆ ಹಚ್ಚಿ ವಾಹನ ಮಾಲೀಕರಿಗೆ ಹಿಂದಿರುಗಿಸಬೇಕು, ಒಂದು ವೇಳೆ ಇದು ಸಾಧ್ಯವಾಗದಿದ್ದಲ್ಲಿ ’ಪತ್ತೆಯಾಗದ ಪ್ರಕರಣ’ ಎಂದು ಪರಿಗಣಿಸಿ ತನಿಖೆ ಆರಂಭವಾದ 75 ದಿನಗಳಲ್ಲಿ ಹಿಂಬರಹವನ್ನು ನೀಡಿ ಮಾಲೀಕರು ವಿಮಾ ಹಣ ಪಡೆದುಕೊಳ್ಳಲು ಅನುಕೂಲ ಆಗುವಂತೆ ವಾಹನದ ಮಾಲೀಕರಿಗೆ ಪತ್ರ ಕೊಡಬೇಕು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಲ್ಲಾ ಡಿಸಿಪಿಗಳಿಗೆ ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಮನೆ ಮುಂದೆ, ರಸ್ತೆ ಬದಿ ನಿಲ್ಲಿಸಿದ ಒಂದಲ್ಲ ಒಂದು ವಾಹನಗಳು ಪ್ರತಿನಿತ್ಯ ಕಳ್ಳತನವಾಗುತ್ತಿವೆ. ಮಾಲೀಕರು ವಾಹನದ ವಿವರಗಳು ಮತ್ತು ಸಿಸಿ ಕ್ಯಾಮರಾಗಳ ದೃಶ್ಯಗಳ ಸಮೇತ ಠಾಣೆಗಳಿಗೆ ದೂರು ನೀಡುತ್ತಾರೆ. ಆದರೆ 6 ತಿಂಗಳು ಕಳೆದರೂ ಬಹಳಷ್ಟು ವಾಹನ ಸಿಗುತ್ತಿರಲಿಲ್ಲ. ಇದರಿಂದ ಸಾವಿರಾರು ವಾಹನ ಮಾಲೀಕರು ಈ ಸಮಸ್ಯೆಗೆ ಸಿಲುಕಿದ್ದರು. ಸದ್ಯ ಆಯುಕ್ತರು ಸೂಚನೆ ನೀಡಿದ ಕಾರಣ ವಾಹನ ಮಾಲೀಕರು ನಿಟ್ಟುಸಿರು ಬಿಡುವಂತಾಗಿದೆ. ಈ ಬಗ್ಗೆ ಎಲ್ಲಾ ಡಿಸಿಪಿಗಳೂ ಗಮನ ಹರಿಸಬೇಕು ಎಂದು ಕಮಲ್ ಪಂತ್ ಟ್ವೀಟ್ ಮಾಡಿ ತಿಳಿಸಿದ್ದಾರೆ.