Wednesday, 30th October 2024

883 ಮಕ್ಕಳಿಗೆ ಆರ್‌ಟಿಇ ಸೀಟು ಲಭ್ಯ

ವಿಶ್ವವಾಣಿ ಸುದ್ದಿಮನೆ

ಬೆಂಗಳೂರು

ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಗೆ 2ನೇ ಸುತ್ತಿನಲ್ಲಿ  883 ಮಕ್ಕಳು ಸೀಟು ಪಡೆದಿದ್ದಾರೆ.
ಶಿಕ್ಷಣ ಇಲಾಖೆಯಲ್ಲಿ ನಡೆದ ಎರಡನೇ ಸುತ್ತಿನ ಲಾಟರಿ ಪ್ರಕ್ರಿಯೆಯಲ್ಲಿ 5118 ಅರ್ಹ ಮಕ್ಕಳು ಭಾಗವಹಿಸಿದ್ದು, ಅದರಲ್ಲಿ 883 ಮಕ್ಕಳು ಸೀಟು ಪಡೆದಿದ್ದಾರೆ.
2ನೇ ಸುತ್ತಿನಲ್ಲಿ ಸೀಟು ಪಡೆದ ಮಕ್ಕಳು ಸಂಬಂಧಪಟ್ಟ ಶಾಲೆಗಳಿಗೆ ಪ್ರವೇಶ ಪಡೆಯಲು ಸೆ.10 ಕೊನೆಯ ದಿನಾಂಕ. ಪಾಲಕರ ಮೊಬೈಲ್‌ಗೆ ಬಂದಿರುವ ಸಂದೇಶ ಅಥವಾ ಇಲಾಖೆ ವೆನ್‌ಸೈಟ್‌ನಲ್ಲಿ ಆಯ್ಕೆಯಾಗಿರುವ ಪ್ರತಿಯನ್ನು ಪಡೆದು ಶಾಲೆಗಳಿಗೆ ಹೋಗಿ ಪ್ರವೇಶ ಪಡೆದುಕೊಳ್ಳಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.