Sunday, 22nd December 2024

೬೧ ಶಿಕ್ಷಕ, ಶಿಕ್ಷಕಿಯರಿಗೆ ಅಕ್ಷರಸಿರಿ ಪ್ರಶಸ್ತಿ ಪ್ರಧಾನ ಕಾರ‍್ಯಕ್ರಮ

ತಿಪಟೂರು: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಗೌರವಾನ್ವಿತ ೬೧ ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ಅಕ್ಷರಸಿರಿ ಪ್ರಶಸ್ತಿ ಪ್ರಧಾನ ಕಾರ‍್ಯಕ್ರಮವನ್ನು ತಿಪಟೂರಿನ ಸರ್ಕಾರಿ ಬಾಲಕರ ಪ್ರೌಢಶಾಲಾ ಆವರಣದಲ್ಲಿ ನವಂಬರ್ ೩೦ ರಂದು ನೆಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿ0ಗಗೌಡ ಪಾಟೀ ತಿಳಿಸಿದರು.

ನಗರದ ಕಲ್ಪತರು ಗ್ರಾಂಡ್ ಹೋಟೆಲ್‌ನಲ್ಲಿ ಆಯೋಜನೆ ಮಾಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದ ೩೫ ಶೈಕ್ಷಣಿಕ ಜಿಲ್ಲೆಗಳಿಂದ ಪ್ರಾಥಮಿಕ ಶಿಕ್ಷಣದಲ್ಲಿ ಅವಿರತವಾಗಿ ಶ್ರಮಿಸಿದ ಶಿಕ್ಷಕರಿಗೆ ಸನ್ಮಾಸಿಸುವ ಕರ‍್ಯಕ್ರಮದ ದಿವ್ಯ ಸಾನಿಧ್ಯವನ್ನು ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಪರಮಪೂಜ್ಯ ಸಿದ್ದಗಂಗಾ ಸ್ವಾಮಿಜಿ, ಹಾಗೂ ಕೆರಗೋಡಿ ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಗುರುಪರದೇಶಿಕೇಂದ್ರ ಮಹಾ ಸ್ವಾಮಿಜಿ ವಹಿಸಲಿದ್ದಾರೆ.

ಉದ್ಗಾಟನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಬಿ.ಸಿ ನಾಗೇಶ್ ಉದ್ಗಾಟಿಸಲಿದ್ದಾರೆ ಎಂದು ತಿಳಿಸಿದರು.

ಕಾರ‍್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರಮುಖ ೨೬ ಬೇಡಿಕೆಗಳನ್ನು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗುವುದು. ಹಾಗೂ ಶಿಕ್ಷಕರ ಶೈಕ್ಷಣಿಕ ಗುಣಮಟ್ಟದ ಬಗ್ಗೆ, ರಾಷ್ಟಿçÃಯ ಶಿಕ್ಷಣ ನೀತಿ ಯೋಜನೆಯ ಬಗ್ಗೆ ಕಾರ್ಯಗಾರವನ್ನು ಹಮ್ಮಿ ಕೊಂಡಿದ್ದು ಕರ‍್ಯಕ್ರಮಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೀಶ್‌ಕುಮಾರ್‌ಸಿಂಗ್, ಆಯುಕ್ತರಾದ ಡಾ.ಆರ್ ವಿಶಾಲ್, ಸಮಗ್ರ ಶಿಕ್ಷಣ ರಾಜ್ಯ ಯೋಜನಾ ನಿರ್ಧೇಶಕ ಶ್ರೀಮತಿ ಕಾವೇರಿ, ಪ್ರಾಥಮಿಕ ಶಿಕ್ಷಣ ನಿರ್ಧೇಶಕ ಪ್ರಸನ್ನ ಕುಮಾರ್, ನಗರಸಭೆಯ ಅಧ್ಯಕ್ಷರಾದ ರಾಮ್ ಮೋಹನ್, ತುಮಕೂರು ಜಿಲ್ಲೆಯ ಉಪನಿರ್ಧೇಶಕ ನಂಜಯ್ಯ, ಅಖಿಲ ಭಾರತ ಶಿಕ್ಷಕರ ಫೆಡರೇಷನ್ ಕಾರ್ಯದರ್ಶಿ ಬಸವರಾಜು ಗುರಿಕಾರ, ರಾಜ್ಯ ನಿಕಟಪೂರ್ವ ಅದ್ಯಕ್ಷ ನಾರಾಯಣಸ್ವಾಮಿ ಹಾಗೂ ರಾಜ್ಯ, ಜಿಲ್ಲೆ, ತಾಲ್ಲೂಕು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ, ಜಿಲ್ಲಾ ಅದ್ಯಕ್ಷ ಪರಶಿವ ಮೂರ್ತಿ, ತಾಲ್ಲೂಕು ಅದ್ಯಕ್ಷ ಜಯರಾಂ ಜಿ.ಆರ್, ಪ್ರಧಾನ ಕಾರ್ಯದರ್ಶಿ ಪಟ್ಟಿಭಿರಾಮು, ಗುಬ್ಬಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಸಹಕಾರ್ಯದರ್ಶಿ ನಾಗರಾಜು, ಸೋಮಶೇಖರ್, ತಿಮ್ಮೆಗೌಡ, ಗೌರವಧ್ಯಕ್ಷ ಓಂಕಾರ್‌ಮೂರ್ತಿ, ಚಿಕ್ಕಣ್ಣ, ಬಸವರಾಜು, ಕೆಂಪೇಗೌಡ, ಮತ್ತಿತ್ತರು ಹಾಜರಿದ್ದರು.