Wednesday, 27th November 2024

ವಾಸ್ತವಾಂಶ ಅರಿಯದೆ ಹೇಳಿಕೆ ಶೋಭೆ ತರಲ್ಲ: ಡಾ. ಕೆ. ಸುಧಾಕರ್  

ಬೆಂಗಳೂರು:
ರಾಜಧಾನಿ ಬೆಂಗಳೂರಿನ ಕರೋನಾ ಪರಿಸ್ಥಿತಿ ಗಣನೀಯ ಸುಧಾರಣೆ ಕಂಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಜುಲೈ ತಿಂಗಳಿನಲ್ಲಿ ಶೇ. 1.85 ರಷ್ಟಿದ್ದ ಮರಣ ಪ್ರಮಾಣ ಶೇ. 1.50ಕ್ಕೆ  ಇಳಿಕೆಯಾಗಿದೆ. ಜುಲೈ ತಿಂಗಳಲ್ಲಿ ಶೇ. 24 ಇದ್ದ ಪಾಸಿಟಿವ್ ದರ ಶೇ. 14.74ಕ್ಕೆ ಇಳಿಕೆಯಾಗಿದೆ. ಜುಲೈ ಆರಂಭದಲ್ಲಿ ಪ್ರತೀ ದಿನ ನಡೆಸುತ್ತಿದ್ದ 4,000 ಟೆಸ್ಟಿಂಗ್ ಸಂಖ್ಯೆ ಈಗ 25,000ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಎಚ್.ಕೆ. ಪಾಟೀಲ್ ಅವರೆ, ತಾವು ಹಿರಿಯರಿದ್ದೀರಿ. ವಾಸ್ತವಾಂಶ ಅರಿಯದೆ ಜನರ ದಿಕ್ಕು ತಪ್ಪಿಸುವ ಹೇಳಿಕೆ ಕೊಡುವುದು ನಿಮಗೆ ಶೋಭೆ ತರುವುದಿಲ್ಲ. ಕರ್ನಾಟಕದ ಕರೋನಾ ಮರಣ ಪ್ರಮಾಣ ಶೇ
 1.64 ಮತ್ತು ಬೆಂಗಳೂರಿನ ಕೋವಿಡ್ ಮರಣ ಪ್ರಮಾಣ ಶೇ. 1.50 ರಷ್ಟಿದ್ದು, ರಾಷ್ಟ್ರೀಯ ಮರಣ ಪ್ರಮಾಣ ಶೇ. 1.76ಕ್ಕಿಂತ ಕಡಿಮೆಯಿದೆ ಎಂದು ಡಾ. ಕೆ. ಸುಧಾಕರ್ ತಿರುಗೇಟು ನೀಡಿದ್ದಾರೆ.