ನ್ಯೂಯಾರ್ಕ್: ಕಂಪನಿಯ ಗಾತ್ರವನ್ನು ಕಿರಿದುಗೊಳಿಸುವುದಕ್ಕಾಗಿ ನೂರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾ ಗೊಳಿಸುವುದಾಗಿ ತಿಂಡಿ ಮತ್ತು ಪಾನೀಯ ತಯಾರಿಕಾ ಕಂಪನಿ ಪೆಪ್ಸಿಕೊ ತಿಳಿಸಿದೆ.
ಪ್ರಧಾನ ಕಚೇರಿ ಚಿಕಾಗೊ ಮತ್ತು ನ್ಯೂಯಾರ್ಕ್, ಟೆಕ್ಸಾಸ್ನ ಕಚೇರಿಗಳಿಂದಲೂ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಕಂಪನಿ ತಿಳಿಸಿದೆ.
ಕಂಪನಿಯ ಗಾತ್ರವನ್ನು ಸಣ್ಣ ಮಾಡಿ ದಕ್ಷತೆ ಹೆಚ್ಚಿಸುವ ಸಲುವಾಗಿ ವಜಾಕ್ಕೆ ಮುಂದಾ ಗಿರುವ ಬಗ್ಗೆ ಪೆಪ್ಸಿಕೊ ತನ್ನ ಉದ್ಯೋಗಿ ಗಳಿಗೆ ಕಳುಹಿಸಿರುವ ಪತ್ರದ ಪ್ರತಿ ದೊರೆತಿದೆ ಎಂದು ವರದಿ ಮಾಡಿದೆ. ತಿಂಡಿ ತಯಾರಿ ಮತ್ತು ಮಾರಾಟ ಘಟಕ ಕ್ಕಿಂತಲೂ ಪಾನೀಯ ತಯಾರಿಕಾ ಘಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಡಿತ ಮಾಡಲಾಗುವುದು.
ಪೆಪ್ಸಿಕೊ ವಿಶ್ವದಾದ್ಯಂತ 3,09,000 ಮಂದಿ ಉದ್ಯೋಗಿಗಳನ್ನು ಹೊಂದಿದೆ. ಈ ಪೈಕಿ 1.29,000 ಉದ್ಯೋಗಿಗಳು ಅಮೆರಿಕದ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಚ್ಚಾ ವಸ್ತುಗಳ ಬೆಲೆ ಹೆಚ್ಚಳ, ಸಾಗಾಟ ವೆಚ್ಚ, ಕೂಲಿ ಹೆಚ್ಚಳದ ಕಾರಣ ವೆಚ್ಚ ಸರಿದೂಗಿಸುವುದಕ್ಕಾಗಿ ಪೆಪ್ಸಿಕೊ ಮತ್ತು ಇತರ ಕಂಪನಿಗಳು ತಿಂಡಿಗಳು ಮತ್ತು ಪಾನೀಯ ಗಳ ದರ ಹೆಚ್ಚಳ ಮಾಡುತ್ತಿವೆ.
ಮೂರನೇ ತ್ರೈಮಾಸಿಕದಲ್ಲಿ ದರ ಹೆಚ್ಚಳದ ಹೊರತಾಗಿಯೂ ಆದಾಯ ಗಳಿಕೆ ಉತ್ತಮವಾಗಿರುವ ನಿರೀಕ್ಷೆ ಇದೆ ಎಂದು ಪೆಪ್ಸಿಕೊ ಸಿಎಫ್ಒ ಹಗ್ ಜಾನ್ಸ್ಟನ್ ಹೂಡಿಕೆದಾರರಿಗೆ ಮಾಹಿತಿ ನೀಡಿದ್ದರು. ಆದಾಗ್ಯೂ ಕಂಪನಿಯು ಈಗ ಉದ್ಯೋಗ ಕಡಿತದ ಮೊರೆ ಹೋಗುವುದಾಗಿ ತಿಳಿಸಿದೆ.
ಈ ನಿರ್ಧಾರದೊಂದಿಗೆ ಪೆಪ್ಸಿಕೊ ಸಹ ಅಮೆಜಾನ್, ಮೆಟಾ, ಟ್ವಿಟರ್ ಸಾಲಿಗೆ ಸೇರಿದೆ. ಅಮೆಜಾನ್, ಮೆಟಾ ಹಾಗೂ ಟ್ವಿಟರ್ ಇತ್ತೀಚೆಗಷ್ಟೇ ಸಾವಿರಾರು ಸಂಖ್ಯೆಯ ಉದ್ಯೋಗಿಗಳನ್ನು ವಜಾಗೊಳಿಸಿವೆ. ಅಮೆಜಾನ್ ಭಾರತದಲ್ಲಿಯೂ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ.