Monday, 6th January 2025

ನೂತನ ಶಿಲಾ ದೇಗುಲ ಪ್ರಾರಂಭೋತ್ಸವ

ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಚೌಲಿಹಳ್ಳಿ ಗ್ರಾಮದ ಗ್ರಾಮ ದೇವತೆ ಶ್ರೀ ಆದಿಶಕ್ತಿ ಕರಿಕಲ್ಲಮ್ಮದೇವಿ ಯವರ ನೂತನ ಶಿಲಾ ದೇಗುಲ ಪ್ರಾರಂಭೋತ್ಸವ ಹಾಗೂ ಗೋಪುರ ಕಳಸ ಕಾರ್ಯ ಕ್ರಮವನ್ನು ನಾಳೆ ಭಾನುವಾರ ಹಾಗೂ ಸೋಮವಾರ ಜರಗಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಚೌಲಿಹಳ್ಳಿ ಕೃಷ್ಣಪ್ಪ ತಿಳಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ಕೆರೆಗೊಡಿ ರಂಗಾಪುರ ಸುಕ್ಷೇತ್ರದ ಶ್ರೀ ಶ್ರೀ ಗುರುಪರದೇಶೀ ಕೇಂದ್ರ ಸ್ವಾಮಿಜೀಯವರು ನೆರವೇರಿಸಲಿದ್ದು ಡಿ. ೧೦ ಹಾಗೂ ೧೧ ರಂದು ಸುತ್ತಮುತ್ತಲಿನ ಎಲ್ಲಾ ಗ್ರಾಮದ ಗ್ರಾಮ ದೇವತೆಗಳ ಆಗಮನದೊಂದಿಗೆ ದಶಗ್ರಂಥಿ ಎಂ.ವಿ.ಕೃಷ್ಣ ಮೂರ್ತಿ ಘನಪಾಟಿ ಗಳು ಮತ್ತು ಸಂಗಡಿಗರು ಹಾಸನ ಇವರ ನೇತೃತ್ವದಲ್ಲಿ ಬೆಳಗ್ಗೆ ೮ ಗಂಟೆಗೆ ಗಣಪತಿ ಪೂಜೆ, ಪುಣ್ಯಾಹ ವಾಚನ, ದೇವನಾಂದಿ, ಪಂಚಗವ್ಯ ಮೇಳನ, ಜಲದಿವಾಸಿ, ಕ್ಷಿರದಿವಾಸಿ, ಧಾನ್ಯ ದಿವಾಸಿ, ಪುಷ್ಪ ದಿವಾಸಿ, ರತ್ನ ದಿವಾಸಿ, ನವಗ್ರಹ ಹೋಮ, ನಂತರ ಪೂರ್ಣಾಹುತಿ.

ಸಂಜೆ ೫.೩೦ರಿಂದ ಮಂಡಲ ರಚನೆ, ಅಷ್ಟೋತ್ತರ ಹೋಮ, ವಾಸ್ತು ಹೋಮ, ಶಿಖರ ಪ್ರತಿ ಸ್ಟಾಂಗ ಹೋಮ, ದಿಗ್ಬಲಿ, ಕಳಸ ಸ್ಥಾಪನೆ, ನಡೆಯಲಿದೆ.ರಾತ್ರಿ .೯.೩೦ಕ್ಕೆ ರಸ ಸಂಜೆ ಕಾರ್ಯ ಕ್ರಮ ಹಾಗೂ ಅನ್ನ ದಾಸೋಹ ನಡೆಯಲಿದೆ.

ಡಿ.೧೨ ರಂದು ಬೆಳಗ್ಗೆ ೬ ಗಂಟೆಗೆ ಗಂಗಾಪೂಜೆ, ಗೋ ಪೂಜೆಯೊಂದಿಗೆ ಮದ್ಯಾಹ್ನ ೧೨.೦೫ ರಿಂದ ೧೨.೩೦ರವರೆಗೆ ಕುಂಭ ಲಗ್ನದಲ್ಲಿ ಕೆರೆಗೊಡಿ ರಂಗಾಪುರ ಗುರುಪರದೇಶಿ ಕೇಂದ್ರ ಶ್ರೀಗಳ ಅಮೃತ ಅಸ್ತದಿಂದ ದೇವಾಲಯಕ್ಕೆ ಕಳಸ ಸ್ಥಾಪನೆ ನಡೆಯ ಲಿದೆ.

ನಂತರ ಪೂರ್ಣಾಹುತಿ ಮಹಾಮಂಗಳಾರತಿ ಮಹಾ ಅನ್ನ ದಾಸೋಹ ನಡೆಯಲಿದೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯ ನಿರ್ಮಾಣ ಸೇವಾ ಸಮಿತಿಯ ಅಧ್ಯಕ್ಷರು,ಹಾಗೂ ಧರ್ಮದರ್ಶಿಗಳು, ಗ್ರಾಮಸ್ಥರ ಪರವಾಗಿ ತಿಳಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಕರಾದ ರಂಗಸ್ವಾಮಿ ಮೊದಲಾದವರು ಹಾಜರಿದ್ದರು.