Thursday, 28th November 2024

ಕರುಳಿನ ಜಂತು ಮೆದುಳಿನಲ್ಲಿ !

ವೈದ್ಯ ವೈವಿಧ್ಯ

drhsmohan@gmail.com

ಆಗಾಗ ಹೊಟ್ಟೆ ನೋವು, ಸುಸ್ತಾಗುವುದು – ಈ ಲಕ್ಷಣಗಳು ದೀರ್ಘಕಾಲವಿದ್ದರೆ ವ್ಯಕ್ತಿಯ ತೂಕ ಕಡಿಮೆಯಾಗುತ್ತಾ ಹೋಗು ತ್ತದೆ. ಇವು ಸಾಮಾನ್ಯವಾಗಿ ಜಂತುಹುಳು ಮನುಷ್ಯನಲ್ಲಿ ಕಂಡು ಬಂದಾಗ ಗೋಚರಿಸುವ ಲಕ್ಷಣಗಳು.

ಆದರೆ ಒಬ್ಬ ವ್ಯಕ್ತಿ ತೀವ್ರ ಸ್ವರೂಪದ ತಲೆನೋವು, ಅಪಸ್ಮಾರ (ಫಿಟ್ಸ್) ರೀತಿಯ ಲಕ್ಷಣಗಳು, ಆತನ ವಾಸನಾಗ್ರಹಿಕೆಯ ಶಕ್ತಿ ವ್ಯತ್ಯಾಸ ವಾಗಿರುವುದು, ನೆನಪಿನ ಶಕ್ತಿ ತೀವ್ರವಾಗಿ ಕುಂದಿರುವುದು – ಈ ರೀತಿಯ ಲಕ್ಷಣದೊಂದಿಗೆ ವೈದ್ಯರಲ್ಲಿಗೆ ಹೋದರೆ ಅವರು ಮೆದುಳಿಗೆ ಸಂಬಂಧಿಸಿದ ಕಾಯಿಲೆಯ ಬಗ್ಗೆ ಯೋಚಿಸಿ ಆ ದಿಸೆಯಲ್ಲಿ ಕಾಯಿಲೆ ಪತ್ತೆಹಚ್ಚುವಿಕೆಯಲ್ಲಿ ನಿರತರಾಗು  ತ್ತಾರೆ.

ಅಂತಹುದೇ ಒಂದು ಉದಾಹರಣೆ ಕೆಲವು ತಿಂಗಳ ಹಿಂದೆ ಇಂಗ್ಲೆಂಡಿನಲ್ಲಿ ಜರುಗಿದೆ. ೫೦ ವರ್ಷದ ವ್ಯಕ್ತಿಯೊಬ್ಬ ಮೇಲೆ ತಿಳಿಸಿದ ತಲೆನೋವು ಮತ್ತು ಇತರ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ಹೋದ. ವೈದ್ಯರು ಮಾಮೂಲಿಯಂತೆ ಮೆದುಳಿನ ಸ್ಕ್ಯಾನ್ ಮಾಡಿದಾಗ ಅವರಿಗೆ ಅತೀವ ಅಚ್ಚರಿ ಕಾದಿತ್ತು. ಅವರ ನಿರೀಕ್ಷೆಗೆ ವಿರುದ್ಧವಾಗಿ ಸ್ಕ್ಯಾನ್ ನಲ್ಲಿ ಮೆದುಳಿನಲ್ಲಿ ಲಾಡಿಹುಳು (Tapeworm) ಕಂಡುಬಂದಿತು. ಸುದೀರ್ಘ ಶಸಕ್ರಿಯೆ ಮಾಡಿ ಅದನ್ನು ಹೊರತೆಗೆಯಲಾಯಿತು.

ಇದು ಇಂಗ್ಲೆಂಡಿನಂತಹ ಮುಂದುವರಿದ ದೇಶದಲ್ಲಿ ತುಂಬಾ ಅಪರೂಪವಾದ್ದರಿಂದ ವೈದ್ಯರು ಆ ಲಾಡಿಹುಳುವಿನ ವಂಶವಾಹಿಯ ನಕ್ಷೆಯನ್ನು ಬಿಡಿಸುವ ಸಂಶೋಧನೆಯನ್ನು ನಂತರ ಕೈಗೊಂಡರು. ಭವಿಷ್ಯದಲ್ಲಿ ಈ ತರಹದ ಲಾಡಿಹುಳು ಇತರರಲ್ಲಿ ಕಂಡುಬಂದರೆ ಸೂಕ್ತ ಚಿಕಿತ್ಸೆ ಕೊಡುವಲ್ಲಿ ಅನುಕೂಲವಾಗುತ್ತದೆ ಎಂಬುದು ಇದರ ಉದ್ದೇಶ.

ಮುಂದುವರಿದ ದೇಶಗಳಲ್ಲಿ ಲಾಡಿಹುಳುವಿನ ಸೋಂಕು ತುಂಬ ಅಪರೂಪ. ಮೇಲೆ ತಿಳಿಸಿದ ವ್ಯಕ್ತಿಯಲ್ಲಿ ಕಂಡುಬಂದ ಲಾಡಿಹುಳು ತುಂಬಾ ಅಪರೂಪದ ಜಾತಿಗೆ ಸೇರಿದ್ದು, ಅಂತಹವು ಸಾಮಾನ್ಯವಾಗಿ ಚೀನಾ, ಜಪಾನ್, ದಕ್ಷಿಣ ಕೊರಿಯಾ
ಮತ್ತು ಥೈಲ್ಯಾಂಡ್‌ಗಳಲ್ಲಿ ಕಂಡುಬರುತ್ತವೆ. ಲಾಡಿಹುಳುಗಳು ಜಂತುಹುಳುವಿನ ಒಂದು ಪ್ರಬೇಧವಾಗಿದ್ದು ಮನುಷ್ಯರಲ್ಲಿ ಅಲ್ಲದೆ ಮೀನು, ಹಕ್ಕಿ ಮತ್ತು ಇನ್ನೂ ಅನೇಕ ಪ್ರಾಣಿಗಳಲ್ಲಿ ಕಂಡುಬರುತ್ತವೆ. ಈ ಲಾಡಿಹುಳು ರಿಬ್ಬನ್ ತರಹದ ಅಗಲವಾದ ದೇಹ ಹೊಂದಿದ್ದು, ಒಂದೇ ರೀತಿಯ ಹಲವು ತುಂಡುಗಳನ್ನು ಹೊಂದಿವೆ.

ಇದರ ಒಂದು ತುದಿಯಲ್ಲಿ ತಲೆಯ ರೀತಿಯ ಆಕೃತಿ ಸ್ಕೋಲೆಕ್ಸ್ ಇರುತ್ತದೆ. ವಿಶೇಷ ಎಂದರೆ ಈ ತಲೆಗೆ ಕಣ್ಣು, ಬಾಯಿ, ಮೆದುಳು ಯಾವುವೂ ಇರುವುದಿಲ್ಲ. ತಾನು ವಾಸಿಸುವ ಪ್ರಾಣಿಯ ಕರುಳಿನಲ್ಲಿ ತನ್ನ ಚಲನೆಗೆ ಅನುಕೂಲವಾಗುವಂತೆ ಅದು ಒಂದು ರೀತಿಯ ಕಪ್ ಮತ್ತು ಕೊಂಡಿಗಳನ್ನು ಹೊಂದಿದೆ. ತುಂಬಾ ಆಶ್ಚರ್ಯಕರವಾದ ಮತ್ತೊಂದು ವಿಚಾರ ಎಂದರೆ ಇದಕ್ಕೆ ಬಾಯಿ ಮಾತ್ರವಲ್ಲ, ಕರುಳೂ ಇಲ್ಲ, ಗುದದ್ವಾರವೂ ಇಲ್ಲ.

ಹಾಗಾಗಿ ಇದು ಜೀವಂತವಾಗಿರಲು ತನಗೆ ಬೇಕಾದ ಆಹಾರ ಪದಾರ್ಥಗಳನ್ನು ಅದು ವಾಸವಾಗಿರುವ ಪ್ರಾಣಿಯ ಕರುಳಿ ನಿಂದ ತನ್ನ ಚರ್ಮದ ಮೂಲಕ ಸಾರವನ್ನು ಹೀರಿಕೊಳ್ಳುತ್ತದೆ. ಮುಖ್ಯವಾಗಿ ಮನುಷ್ಯರ ಕರುಳಿನಿಂದ ಬಿ ೧೨ ಅನ್ನಾಂಗವನ್ನು ಯಥೇಚ್ಛವಾಗಿ ಹೀರಿಕೊಳ್ಳುತ್ತದೆ. ಪರಿಣಾಮ ಎಂದರೆ ಇಂತಹ ಜಂತುಹುಳು ಕರುಳಿನಲ್ಲಿ ಗಮನಾರ್ಹ ಪ್ರಮಾಣದಲ್ಲಿ ಇದ್ದಾಗ ಅಂತಹ ವ್ಯಕ್ತಿಗೆ ವಿಪರೀತ ಸುಸ್ತು, ರಕ್ತಹೀನತೆ ಅಥವಾ ಅನೀಮಿಯಾ ಲಕ್ಷಣಗಳು ಕಾಣಿಸಿಕೊಂಡು, ಹಲವು ದಿವಸಗಳ ನಂತರ ವ್ಯಕ್ತಿ ಕೃಶನಾಗುತ್ತಾ ಹೋಗುತ್ತಾನೆ ಅಥವಾ ತೂಕ ಕಳೆದುಕೊಳ್ಳುತ್ತಾ ಹೋಗುತ್ತಾನೆ.

ಪ್ರಾಣಿಗಳ ವಿಕಾಸದ ಹಂತದಲ್ಲಿ ಈ ಲಾಡಿಹುಳುಗಳು ತನ್ನ ದೇಹದಲ್ಲಿ ಹೆಚ್ಚಿನ ಅಂಗಾಂಗ ಅಥವಾ ಅಂಗಗಳನ್ನು ಪಡೆಯುವ ಬದಲು, ತನ್ನ ಕರುಳು ಮತ್ತು ಸಂವೇದನಾ ಅಂಗಗಳನ್ನು ಕಳೆದುಕೊಂಡು ತುಂಬಾ ಸಾಮಾನ್ಯ ಜಂತುವಾಗಿ ಮಾರ್ಪಾಡಾ ಗುತ್ತವೆ. ಹಾಗಾಗಿ ವಿಜ್ಞಾನಿಗಳ ಪ್ರಕಾರ ಯಾವುದೇ ಪ್ರಾಣಿಗಳಿಗಿಂತಲೂ ಹೆಚ್ಚು ಈ ಲಾಡಿಹುಳುಗಳು ಬೆಳವಣಿಗೆಯ ವಂಶ ವಾಹ ಗಳನ್ನು ಕಳೆದುಕೊಂಡಿವೆ. ಅದೇ ಸಂದರ್ಭದಲ್ಲಿ ತನ್ನ ಇರುವಿಕೆಗೆ ಸವಾಲೆಸಗುವ ಪ್ರಾಣಿಗಳ ಸವಾಲನ್ನು ಸಮರ್ಥ ವಾಗಿ ಎದುರಿಸಲು ಬೇಕಾದ ಪ್ರತಿರೋಧ ಶಕ್ತಿ ಹೆಚ್ಚು ಹೊಂದಿರುವ ವಂಶವಾಹಿಯನ್ನು ರೂಪಿಸಿಕೊಳ್ಳುತ್ತದೆ.

ಈ ಲಾಡಿಹುಳು ತನ್ನ ಜೀವಿತಕ್ಕೆ ಅಗತ್ಯ ಬಿದ್ದಾಗ ತನ್ನ ತಲೆಯ ಭಾಗ ಸ್ಕೋಲೆಕ್ಸ್ ಗಿಂತ ಕೆಳಭಾಗದಲ್ಲಿ ಪ್ರೋಗ್ಲಾಟಿಡ್ಸ್ ತುಂಡುಗಳನ್ನು ಹೊಸದಾಗಿ ತನ್ನ ದೇಹಕ್ಕೆ ಸೇರಿಸಿಕೊಳ್ಳುತ್ತಾ ಎಷ್ಟು ಬೇಕಾದರೂ ಉದ್ದವಾಗುವ ಸಾಮರ್ಥ್ಯ ಹೊಂದಿದೆ.
ಹೊಸದಾದ ಪ್ರೋಗ್ಲಾಟಿqಗಳನ್ನು ಸೇರಿಸಿಕೊಂಡಂತೆ ತನ್ನ ಬಾಲದ ಭಾಗದ ಹಳೆಯ ಪ್ರೋಗ್ಲಾಟಿಡ್ಸ್ ಗಳನ್ನು ವರ್ಜ್ಯ ಮಾಡುತ್ತಾ ಹೋಗುತ್ತದೆ. ಉದ್ದೇಶಪೂರ್ವಕವಾಗಿ ಅದರ ಪ್ರೋಗ್ಲಾಟಿಡ್ಸ್ ತುಂಡನ್ನು ನಾವು ಕತ್ತರಿಸಿದರೆ ಎರೆಹುಳುವಿನಂತೆ ಕತ್ತರಿಸಿದ ತುಂಡಿನಿಂದಲೇ ಹೊಸ ದೇಹವನ್ನು ಹೊಂದುವ ಸಾಮರ್ಥ್ಯ ಜಂತುವಿಗಿದೆ.

ಪ್ರತಿಯೊಂದು ಪ್ರೋಗ್ಲಾಟಿಡ್ಸ್ ತುಂಡಿನಲ್ಲೂ ಪುರುಷ ಲೈಂಗಿಕ ಅಂಗಗಳಾದ ವೃಷಣ, ಸೀ ಲೈಂಗಿಕ ಅಂಗಗಳಾದ ಅಂಡಾಶಯ ಗಳು ಹಾಗೂ ಗರ್ಭಕೋಶಗಳಿರುತ್ತವೆ. ಹಾಗಾಗಿ ಇದು ಮನುಷ್ಯರ ಕರುಳಿನಲ್ಲಿ ತನ್ನ ಮರಿಗಳನ್ನು ಹುಟ್ಟು ಹಾಕಬಲ್ಲದು. ಆಶ್ಚರ್ಯಗೊಳ್ಳಬೇಡಿ, ಈ ಜಂತುಹುಳು ದಿನ ಒಂದಕ್ಕೆ ೫೦ ಸಾವಿರದಿಂದ ಒಂದು ಮಿಲಿಯನ್‌ವರೆಗೂ ಮೊಟ್ಟೆಗಳನ್ನು ಇಡಬಲ್ಲದು !

ಮನುಷ್ಯನಲ್ಲಿ ಹೆಚ್ಚು ಕಂಡುಬರುವ ಟೀನಿಯ ಸೋಲಿಯಂ ಜಾತಿಯ ಲಾಡಿಹುಳು ಹೆಚ್ಚಾಗಿ ದಕ್ಷಿಣ ಅಮೇರಿಕಾ, ಚೀನಾ, ಪೂರ್ವ ಏಷ್ಯಾದ ರಾಷ್ಟ್ರಗಳಲ್ಲಿ ಕಂಡು ಬರುತ್ತವೆ. ಮನುಷ್ಯನ ಮಲದ ಮೂಲಕ ಹೊರಬಂದ ಈ ಜಂತು ಹುಳುವಿನ
ಮೊಟ್ಟೆಗಳನ್ನು ಹಂದಿಗಳು ಭಕ್ಷಿಸುತ್ತವೆ. ಹಂದಿಗಳ ಕರುಳಿನಲ್ಲಿ ’ಲಾರ್ವ’ಗಳು ಹೊರಬರುತ್ತವೆ. ಅವು ಆ ಪ್ರಾಣಿಯ ರಕ್ತನಾಳಕ್ಕೆ ಲಗ್ಗೆ ಇಟ್ಟು ಅದರ ಒಳ ಹೋಗುತ್ತವೆ. ಅಲ್ಲಿ ಅವು ಸಿ ಅನ್ನು ಉತ್ಪಾದಿಸುತ್ತವೆ. ಅನಂತರ ಮಾನವನು ಹಂದಿಯ
ಮಾಂಸವನ್ನು ತಿಂದಾಗ, ಈ ಜಂತು ಆತನ ಕರುಳಿಗೆ ಮರಳಿ ಬರುತ್ತದೆ.

ಅನಂತರ ಇದೇ ಚಕ್ರ ಪುನರಾವರ್ತನೆಯಾಗುತ್ತ ಹೋಗುತ್ತದೆ. ಟೀನಿಯ ಸೋಲಿಯಂ ಜಂತುವು ಲಾರ್ವ ಹಂತದಲ್ಲಿ ದೇಹದ ಎಲ್ಲಾ ಕಡೆ ತಿರುಗಾಡುವ ಸಾಮರ್ಥ್ಯ ಹೊಂದಿದೆ. ಮೆದುಳಿಗೆ ತೆರಳಿ ಅಲ್ಲಿ ಸಿ ಎನ್ನುವ ಗಂಟನ್ನು ಉಂಟು ಮಾಡುತ್ತದೆ. ಈ
ಗಂಟು ನಿಧಾನವಾಗಿ ಬೆಳೆಯುತ್ತಾ ಹೋದ ಹಾಗೆ ಮೆದುಳಿನಲ್ಲಿ ಹರಿಯುತ್ತಿರುವ ದ್ರವ ಸೆರೆಬ್ರೋಸ್ಪೈನಲ್ ದ್ರವದ ಚಲನೆಗೆ ಅಡಚಣೆ ಉಂಟುಮಾಡುತ್ತದೆ. ಪರಿಣಾಮ ಎಂದರೆ ಮೆದುಳಿನಲ್ಲಿ ದ್ರವದ ಅಥವಾ ನೀರಿನ ಒತ್ತಡ ಹೆಚ್ಚುತ್ತಾ ಹೋಗುತ್ತದೆ.
ಅದರ ಮುಂದಿನ ಗಂಭೀರ ಪರಿಣಾಮ ಎಂದರೆ ಪ್ರಜ್ಞೆ ತಪ್ಪುವುದು, ಕೋಮಾ ಹಂತ, ಕೊನೆಯಲ್ಲಿ ವ್ಯಕ್ತಿ ಮರಣ ಹೊಂದುತ್ತಾನೆ.

ಜಂತುವಿನ ಎಲ್ಲ ಲಾರ್ವಗಳು ವಯಸ್ಕ ಜಂತುವಾಗಿ ಮಾರ್ಪಾಡಾಗುವುದಿಲ್ಲ. ಹಾಗೆ ಮಾರ್ಪಾಡಾಗದ ಲಾರ್ವಗಳು ಅದೇ ಹಂತದಲ್ಲಿ ಸಾವನ್ನಪ್ಪುತ್ತವೆ. ಆದರೆ ಹೀಗೆ ಸಾವನ್ನಪ್ಪಿದ ಲಾರ್ವಗಳು ಮನುಷ್ಯನ ಮೆದುಳಿನಲ್ಲಿ ಭಯಂಕರವಾದ ಉರಿಯೂತ (ಐZಞಞZಠಿಜಿಟ್ಞ) ವನ್ನು ಉಂಟುಮಾಡುತ್ತವೆ. ಅದೂ ಸಹಿತ ಅಪಸ್ಮಾರ ಅಥವಾ ಕೋಮಾ ಉಂಟುಮಾಡಬಹುದು.

ಹೆಚ್ಚು ಕಂಡು ಬರುವ ಲಾಡಿಹುಳು ಟೀನಿಯ ಸೋಲಿಯಂ, ಸ್ವಚ್ಛತೆ ಹೆಚ್ಚಿಲ್ಲದ ಅಥವಾ ಮಲಿನವಾದ ವಾತಾವರಣದಲ್ಲಿ ಹೆಚ್ಚು ಕಂಡು ಬರುತ್ತದೆ. ಆದರೆ ಮೀನಿನ ಲಾಡಿಹುಳು ಎಂಬ ಮತ್ತೊಂದು ಪ್ರಭೇದವಿದ್ದು ಅದು ಮುಂದುವರಿದ ದೇಶಗಳ ಮತ್ತು ಜ್ಯೂ ಮತ್ತು ಸ್ಕ್ಯಾಂಡಿನೇವಿಯನ್ ಜನಾಂಗಗಳಲ್ಲಿ ಕಂಡುಬರುತ್ತದೆ. ಮನುಷ್ಯನಲ್ಲಿನ ಅತಿ ದೊಡ್ಡ ಪರಾವಲಂಬಿ ಜೀವಿ ಈ ಮೀನಿನ ಲಾಡಿ ಹುಳುವಾಗಿದ್ದು ಇದು ೮೨ ಅಡಿಗಳಷ್ಟು ಉದ್ದ ಬೆಳೆಯಬಲ್ಲದು. ಒಂದು ದಿನದಲ್ಲಿ ೨೨ ಸೆಂಟಿ ಮೀಟರ್‌ನಷ್ಟು ಬೆಳೆಯಬಲ್ಲದು. ಕೆಲವು ವರ್ಷಗಳ ಮೊದಲು ಚೀನಾದ ಒಬ್ಬ ಮನುಷ್ಯನಲ್ಲಿಯೇ ನೂರಾರು ರೀತಿಯ ಪ್ರಭೇದದ ಲಾಡಿಹುಳು ಇದ್ದುದು ವರದಿಯಾಗಿದೆ.

ಈ ಲಾಡಿ ಹುಳುವಿಗೆ ಸೂಕ್ತ ಚಿಕಿತ್ಸೆ ಇದೆಯಾದರೂ, ಪೂರ್ಣವಾಗಿ ಬೇಯಿಸದ ಹಂದಿ ಮಾಂಸ ತಿನ್ನುವುದರಿಂದ ಇದು ಮನುಷ್ಯನಲ್ಲಿ ಕಂಡುಬರುತ್ತದೆ. ಹಾಗಾಗಿ ಇಂತಹ ಆಹಾರ ಸೇವಿಸುವವರು ಹೆಚ್ಚು ಎಚ್ಚರಿಕೆ ವಹಿಸಬೇಕು.

ಲಾಡಿಹುಳು ಯಕೃತ್ತಿನೆಡೆಗೆ : ಇನ್ನೊಂದು ರೀತಿಯ ಲಾಡಿ ಹುಳು ಬಗ್ಗೆ ಗಮನಿಸೋಣ. ೨೦ ವರ್ಷದ ಯುವತಿಯ ಬಲಗಣ್ಣು ದೊಡ್ಡದಾ ಗುತ್ತಿದೆ. ಆ ಕಣ್ಣಿನಲ್ಲಿ ಕಳೆದ ಆರು ತಿಂಗಳುಗಳಿಂದ ದೃಷ್ಟಿ ಮಂಜಾಗುತ್ತಿದೆ, ಕಣ್ಣಿನ ಗುಡ್ಡೆಯನ್ನು ಆಚೀಚೆ ಚಲಿಸಲು ಕಷ್ಟವಾಗುತ್ತಿದೆ ಎಂಬ ಲಕ್ಷಣದೊಂದಿಗೆ ನೇತ್ರ ವೈದ್ಯರಲ್ಲಿಗೆ ಪರೀಕ್ಷಿಗೆ ಬಂದಳು.

ವೈದ್ಯರು ಪರೀಕ್ಷಿಸಿದಾಗ ಇಡೀ ಕಣ್ಣುಗುಡ್ಡೆಯೇ ಹೊರ ಬಂದಿದೆಯೇನೋ ಎಂಬಂತೆ ತೋರುತ್ತಿತ್ತು. ಜತೆಯಲ್ಲಿ ಕಣ್ಣಿನ ಗುಡ್ಡೆಯ ಮೂಳೆಯ ಭಾಗ ಬೆಳೆದಂತಾಗಿ ಮೇಲೆ ಮತ್ತು ಬಲಭಾಗಕ್ಕೆ ತಳ್ಳಲ್ಪಟ್ಟಿತ್ತು. ವೈದ್ಯರು ರೋಗಿಯನ್ನು ಸಿ.ಟಿ
ಸ್ಕ್ಯಾನ್ ಪರೀಕ್ಷೆಗೆ ಒಳಪಡಿಸಿದಾಗ ಗೆಡ್ಡೆಯ ಅಂಶ ಸಾಬೀತಾಯಿತು. ಅದನ್ನು ಪರೀಕ್ಷೆ ಮಾಡಿ ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಿದರು.

ಒಂದು ರೀತಿಯ ಜಂತು ಈ ಕಾಯಿಲೆಗೆ ಕಾರಣ ಎಂದು ದೃಢಪಟ್ಟಿತು. ಹೈಡಾಟಿಡ್ ಕಾಯಿಲೆ ಎಂದು ನಾವು ಕರೆಯುವ ಈ ಕಾಯಿಲೆ ಸಾಮಾನ್ಯವಾಗಿ ಈ ರೀತಿ ತನ್ನ ಲಕ್ಷಣ ತೋರಿಸುತ್ತದೆ. ಕಣ್ಣಿನ ಭಾಗದಲ್ಲಿ ಲಾಡಿಹುಳು ಗಂಟುಗಳನ್ನು ಉಂಟು ಮಾಡಿದಾಗ ಕಾಣಿಸಿಕೊಳ್ಳುವ ರೀತಿ ಇದು.

ಕಾಯಿಲೆ ಪತ್ತೆ: ರೋಗದ ಲಕ್ಷಣಗಳ ಜೊತೆ ರೋಗಿಯನ್ನು ಪರೀಕ್ಷಿಸಿದಾಗ ಹೊಟ್ಟೆಯ ಭಾಗದಲ್ಲಿ ಯಕೃತ್ತು ಅಥವಾ ಲಿವರ್
ಅಸಾಮಾನ್ಯವಾಗಿ ದೊಡ್ಡದಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ವಿವಿಧ ಸ್ಕ್ಯಾನ್ ಗಳು- ಸಿ ಟಿ ಸ್ಕ್ಯಾನ್, ಅಲ್ಟ್ರಾ ಸೌಂಡ್, ಎಂಆರ್‌ಐ ಸ್ಕ್ಯಾನ್ ಗಳು ಕಾಯಿಲೆಯನ್ನು ನಿರ್ದಿಷ್ಟವಾಗಿ ಪತ್ತೆಹಚ್ಚಲು ಸಹಕಾರಿಯಾಗುತ್ತವೆ. ಜೊತೆಗೆ ವಿವಿಧ ರಕ್ತ
ಪರೀಕ್ಷೆಗಳಿಂದ ಸಿಗಳ ಇರವನ್ನು ದೃಢೀಕರಿಸಬಹುದು.

ನಾಯಿಯ ಲಾಡಿಹುಳುವಿನ ಮರಿ ಹುಳುವಿನಿಂದ ಉಂಟಾಗುವ ಸೋಂಕಿನ ಕಾಯಿಲೆಯೇ ಹೈಡಾಟಿಡ್ ಕಾಯಿಲೆ. ಮೇಲೆ ತಿಳಿಸಿದ ಟೀನಿಯ ಸೋಲಿಯಂ ಲಾಡಿಹುಳುಗಿಂತ ಹೈಡಾಟಿಡ್ ಕಾಯಿಲೆ ಉಂಟು ಮಾಡುವ ಈ ಲಾಡಿಹುಳು ಅದಕ್ಕಿಂತ ಭಿನ್ನವಾದದ್ದು. ಎಕಿನೋಕಾಕಸ್ ಗ್ರಾನುಲೋಸಸ್ ಜಾತಿಗೆ ಸೇರಿದ ಲಾಡಿಹುಳು ಇದು. ಸೋಂಕಿಗೆ ಒಳಗಾದ ನಾಯಿಯ ಮಲದಲ್ಲಿ ವಿಸರ್ಜನೆಗೊಳ್ಳುವ ಲಾಡಿ ಹುಳುವಿನ ಮೊಟ್ಟೆಗಳು ಆಕಸ್ಮಾತಾಗಿ ಮಾನವನ ಹೊಟ್ಟೆ ಸೇರಿದಾಗ ಈ ಸೋಂಕು ಕಾಣಿಸಿಕೊಳ್ಳುತ್ತದೆ.

ಜಗತ್ತಿನ ಎಲ್ಲ ದೇಶಗಳಲ್ಲಿ ಕಂಡು ಬರುವ ಈ ಕಾಯಿಲೆಯ ಲಾಡಿ ಹುಳುವಿನ ಮೂಲ ಆವಾಸಸ್ಥಾನ ನಾಯಿ, ತೋಳ
– ಈ ತರಹದ ಪ್ರಾಣಿಗಳು. ಮಾನವನಿಗೆ ತುಂಬಾ ಅಕಸ್ಮಾತಾಗಿ ಸೋಂಕು ಉಂಟಾಗುವುದರಿಂದ ಈತ ಮಧ್ಯಂತರ ಸ್ಥಳ ದೊರಕಿಸುವ ಪ್ರಾಣಿ. ಸಾಮಾನ್ಯವಾಗಿ ೫ ಮಿ.ಮೀ.ನಷ್ಟು ಉದ್ದವಿರುವ ಲಾಡಿಹುಳು ಮೇಲೆ ತಿಳಿಸಿದ ಪ್ರಾಣಿಗಳ ಕರುಳಿನಲ್ಲಿ ವಾಸವಾಗಿರುತ್ತದೆ. ಇದರ ಮೊಟ್ಟೆಗಳು ಈ ಪ್ರಾಣಿಗಳ ಮಲದಲ್ಲಿ ಹೊರಗೆ ಬರುತ್ತವೆ.

ನಂತರ ಕುರಿ, ಒಂಟೆ, ಹಂದಿ – ಈ ತರಹದ ಪ್ರಾಣಿಗಳ ಉದರವನ್ನು ಸೇರುತ್ತವೆ. ಅಲ್ಲಿ ಮರಿ ಹುಳು (ಲಾರ್ವ) ಹೊರಬಂದು ಆಯಾಯ ಪ್ರಾಣಿಯ ಕರುಳನ್ನು ಮೀರಿ ಅಥವಾ ದಾಟಿ ಹೊರ ಬರುತ್ತವೆ. ಹಾಗೆ ಬಂದ ಈ ಜಂತುಗಳು ಯಕೃತ್ತು, ಶ್ವಾಸಕೋಶ, ಮೆದುಳು, ಕೆಲವೊಮ್ಮೆ ಕಣ್ಣಿನಲ್ಲಿ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಸೋಂಕಿಗೆ ಒಳಗಾದ ನಾಯಿಯ ಹತ್ತಿರದ ಒಡನಾಟದಿಂದ ಮಾನವನಿಗೆ ಸೋಂಕು ಬರುತ್ತದೆ.

ಅಂದರೆ ಜಂತು ಮನುಷ್ಯನ ದೇಹವನ್ನು, ಸರಿಯಾಗಿ ಬೇಯಿಸದ ಪ್ರಾಣಿಗಳ ಮಾಂಸದ ಮೂಲಕ (ಆಹಾರದ ಮೂಲಕವೇ) ಸೇರುತ್ತದೆ. ಜಗತ್ತಿನ ಹೆಚ್ಚಿನ ಎಲ್ಲ ದೇಶಗಳಲ್ಲಿ ಈ ಹೈಡಾಟಿಡ್ ಸಿ ಕಾಯಿಲೆ ಕಂಡುಬರುವುದಾದರೂ ಕುರಿಗಳನ್ನು ಹೆಚ್ಚಾಗಿ ಸಾಕುವ ದೇಶಗಳಲ್ಲಿ ಇದು ಜಾಸ್ತಿ ಎಂದು ಹೇಳಲಾಗಿದೆ. ಹಾಗಾಗಿ ಇದು ಏಷ್ಯಾ, ಉತ್ತರ ಆಫ್ರಿಕಾ, ಅಮೇರಿಕಾ, ಯುರೋಪ್ ನ ಹಲವು ಭಾಗಗಳು (ಗ್ರೀಸ್ ಮತ್ತು ಟರ್ಕಿಗಳಲ್ಲಿ ಬಹಳ ಹೆಚ್ಚು) ಮತ್ತು ಆಸ್ಟ್ರೇಲಿಯಾಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಲಕ್ಷಣಗಳು: ಮರಿ ಜಂತುವಿನ ಸೋಂಕು ಉಂಟಾಗಿ ಎಷ್ಟೋ ದಿನಗಳ ನಂತರ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಗಂಟು ಕಾಣಿಸಿಕೊಂಡಾಗ ಹೊಟ್ಟೆ ನೋವು, ಭೇದಿ ಉಂಟಾಗುತ್ತವೆ. ಕಾರಣ ಗೊತ್ತಿಲ್ಲದೆ ವ್ಯಕ್ತಿಯ ತೂಕ ಇಳಿಯುತ್ತಾ
ಹೋಗುವುದು. ಹೊಟ್ಟೆ ನಿಧಾನವಾಗಿ ದೊಡ್ಡದಾಗುತ್ತಾ ಬರುತ್ತದೆ. ರಕ್ತದಲ್ಲಿ ನಿಶ್ಯಕ್ತತೆ ಉಂಟಾಗಿ ಅನೀಮಿಯಾ ಲಕ್ಷಣ ಕಾಣಿಸಿಕೊಳ್ಳಬಹುದು.

ವಿಪರೀತ ಸುಸ್ತು,ಕೆಮ್ಮು, ಕೆಲವೊಮ್ಮೆ ಕಫದಲ್ಲಿ ರಕ್ತದ ಅಂಶ ಕಾಣಿಸಿಕೊಳ್ಳುವುದು, ಜಾಂಡಿಸ್‌ನ ಲಕ್ಷಣಗಳು – ಮೈಯಲ್ಲ ಹಳದಿ ಬಣ್ಣಕ್ಕೆ ತಿರುಗುವುದು. ಶ್ವಾಸಕೋಶದಲ್ಲಿ ಸಿ ಕಾಣಿಸಿಕೊಂಡರೆ ಅಂತಹ ವ್ಯಕ್ತಿಗೆ ತೀವ್ರ ರೀತಿಯ ಕೆಮ್ಮು, ಕಫದಲ್ಲಿ
ರಕ್ತ ಕಾಣಿಸಿಕೊಳ್ಳುವುದು, ಉಸಿರು ಕಟ್ಟುವುದು, ವಿಪರೀತ ಜ್ವರ ಕಾಣಿಸಿಕೊಳ್ಳುತ್ತವೆ. ಮೆದುಳಿನಲ್ಲಿ ಗಂಟು ಕಾಣಿಸಿಕೊಂಡರೆ ಮೆದುಳಿನ ಭಾಗದಲ್ಲಿ ಒತ್ತಡ ಜಾಸ್ತಿ ಮಾಡಿ ವಿವಿಧ ಲಕ್ಷಣ ತೋರಿಸುತ್ತದೆ.

ಅಂತಹ ವ್ಯಕ್ತಿಗೆ ಅಪಸ್ಮಾರ ಅಥವಾ ಫಿಟ್ಸ್ ಬರುತ್ತದೆ. ಕಣ್ಣಿನಲ್ಲಿ ಗಂಟು ಕಾಣಿಸಿಕೊಂಡರೆ ಕಣ್ಣುಗುಡ್ಡೆ ವಿಪರೀತ ದೊಡ್ಡದಾಗಿ ಕಣ್ಣಿನ ಗೂಡಿನ ಮೂಳೆಗಳು ಊದಿಕೊಳ್ಳಲಾರಂಭಿಸಿ ದೊಡ್ಡದಾಗುತ್ತಾ ಬರುತ್ತವೆ. ಕ್ಯಾನ್ಸರ್ ಕಾಯಿಲೆಯೇನೋ ಎಂಬ
ಅನುಮಾನವನ್ನು ಹುಟ್ಟಿಸುತ್ತದೆ.

ಚಿಕಿತ್ಸೆ: ಈ ಕಾಯಿಲೆಗೆ ಹೆಚ್ಚಿನ ಸಂದರ್ಭ ಲಾಡಿಹುಳು ಉಂಟು ಮಾಡುವ ಗಂಟುಗಳೇ ಕಾರಣವಾಗುವುದರಿಂದ ಆ ಗಂಟುಗಳನ್ನು ಶಸ್ತ್ರಕ್ರಿಯೆ ಮಾಡಿ ತೆಗೆಯುವ ಕ್ರಮವೇ ಸರಿಯಾದ ರೀತಿಯ ಚಿಕಿತ್ಸೆ. ಜೊತೆಯಲ್ಲಿ ಆಲ್ ಬೆಂಡಜೋಲ್ ಅಥವಾ ಮೆಬೆಂಡಜೋಲ್ ಔಷಧಿಗಳನ್ನು ಮಾತ್ರೆಯ ರೂಪದಲ್ಲಿ ಉಪಯೋಗಿಸಲಾಗುತ್ತದೆ.