Monday, 16th September 2024

ಕೊಬ್ಬರಿ ಬೆಲೆಯನ್ನು ಹೆಚ್ಚಿಸುವಂತೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಗೆ ಮನವಿ

ತೆಂಗು ಬೆಳೆಗಾರರ ಕಷ್ಟಕ್ಕೆ ಕೇಂದ್ರ ಸರ್ಕಾರ ಶೀಘ್ರವೇ ಧಾವಿಸಬೇಕು. 
ತಿಪಟೂರು: ಕುಸಿತ ಕಂಡಿರುವ ಕೊಬ್ಬರಿ ಬೆಲೆ ಹೆಚ್ಚಳ ಮಾಡುವಂತೆ ಲೋಕಸಭೆಯಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಮನವ ರಿಕೆ ಮಾಡಿ ಕೊಡಬೇಕೆಂದು ತಿಪಟೂರು ಮಾಜಿ ಶಾಸಕ ಕೆ ಷಡಕ್ಷರಿ ಅಭಿಮಾನಿ ಬಳಗ ಮತ್ತು ಸಮಸ್ತ ತೆಂಗು ಬೆಳೆಗಾರರ ಒಕ್ಕೂಟವು ಕೇಂದ್ರ ಸರ್ಕಾರದ ವಿರೋಧ ಪಕ್ಷದ ನಾಯಕ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ತಾಲ್ಲೋಕು ಪಂಚಾಯಿತಿ ಮಾಜಿ ಅಧ್ಯಕ್ಷ ನ್ಯಾಕೆನಹಳ್ಳಿ ಸುರೇಶ್ ರೈತರು ಕೊಬ್ಬರಿ ಉತ್ಪಾದನೆ ಯನ್ನು ಮಾಡಲು ಕನಿಷ್ಠ 16000 ದಿoದ 18 ಸಾವಿರ ಉತ್ಪಾದನಾ ಖರ್ಚು ಬರುತ್ತಿದ್ದು. ಈಗಿನ ಕೇಂದ್ರ ಸರ್ಕಾರವು ಕೊಬ್ಬರಿಗೆ 11 ಸಾವಿರ ರೂಪಾಯಿಯನ್ನು ವೈಜ್ಞಾನಿಕ ನಿಗದಿಪಡಿಸಲಾಗಿದೆ. ಇದರಿಂದ ತಿಂಗಳು ರೈತರು ಕಂಗ ಲಾಗುವ ಸ್ಥಿತಿಯಲ್ಲಿ ಬದುಕು ತ್ತಿದ್ದಾರೆ.
ರಾಜ್ಯದಲ್ಲಿ ಸುಮಾರು 16 ರಿಂದ 18 ಜಿಲ್ಲೆಗಳಲ್ಲಿ ತೆಂಗು ಬೆಳೆಯುತ್ತಿದ್ದು ತೆಂಗು ಬೆಳೆಗಾರರ ಮಕ್ಕಳ ವಿದ್ಯಾಭ್ಯಾಸ ಹಾಗೂ ಜೀವನ ನಡೆಸಲು ಕಷ್ಟಕರವಾದ ಪರಿಸ್ಥಿತಿ ನಿರ್ಮಾಣ ವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರವು ಕೂಡಲೇ ತೆಂಗು ಬೆಳೆಗಾರರ ಸಂಕಷ್ಟಕ್ಕೆ ನೆರವಾಗ ಬೇಕೆಂದು ತಿಳಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ್ದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಅವರು ತೆಂಗು ಬೆಳೆಗಾರರ ಕಷ್ಟ ಮತ್ತು ಉತ್ಪಾದನೆ ವೆಚ್ಚು ನನಗೆ ಅರಿತಿದ್ದು ಸಂಸತನಲ್ಲಿ ಇದರ ಬಗ್ಗೆ ಮಾತನಾಡಿ ಕನಿಷ್ಟ 15000 ಬೆಂಬಲ ಬೆಲೆ ಹೆಚ್ಚಳಕ್ಕೆ ಸಹಕರಿಸು ತ್ತೇನೆ ಎಂದು ಭರವಸೆ ನೀಡಿದರು. ಸಂದರ್ಭದಲ್ಲಿ ವಕೀಲರಾದ ವಸಂತ್, ಕೃಷ್ಣಮೂರ್ತಿ ಭಾಗಿಯಾಗಿದ್ದರು.
*
ತಿಪಟೂರು ತಾಲ್ಲೂಕನ್ನು ಕಲ್ಪತರು ನಾಡು ಎಂದು ಕರೆದಿದ್ದರು ತೆಂಗು ಸಂಬಂಧಿಸಿದಂತೆ ಯಾವುದೇ ರೀತಿಯ ಸಂಶೋಧನೆಯ ಕೇಂದ್ರಗಳು ಹಾಗೂ ಸಂಬಂಧಿಸಿದ ಕಚೇರಿಗಳು ಇಲ್ಲದೆ ಬೆಂಗಳೂರು, ಕೊಚ್ಚಿಯಲ್ಲಿ ಇರುವುದು ತೆಂಗು ಬೆಳೆಗಾರರಿಗೆ ತುಂಬಾ ನೋವಿನ ಸಂಗತಿಯಾಗಿದೆ.

Read E-Paper click here