Saturday, 23rd November 2024

ನಾನು ಟ್ವಿಟರ್‌ನ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ? ಫಲಿತಾಂಶಗಳಿಗೆ ಬದ್ಧ: ಮಸ್ಕ್ ಟ್ವೀಟ್

ನ್ಯೂಯಾರ್ಕ್‌: ನಾನು ಟ್ವಿಟರ್‌ನ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ? ನಾನು ಈ ಸಮೀಕ್ಷೆಯ ಫಲಿತಾಂಶಗಳಿಗೆ ಬದ್ಧ ನಾಗಿರುತ್ತೇನೆ” ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.

ಮಸ್ಕ್ ಅವರು ನೆಟ್ಟಿಗರ ಮುಂದೆ ನಿರ್ಣಾಯಕ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದು, ಇದು ಅವರ ಟ್ವಿಟರ್​ನಲ್ಲಿನ ಅವರ ಸ್ಥಾನಕ್ಕೆ ಸಂಬಂಧಿಸಿದ್ದಾಗಿದೆ. “ನಾನು ಟ್ವಿಟರ್‌ನ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ? ನಾನು ಈ ಸಮೀಕ್ಷೆಯ ಫಲಿತಾಂಶ ಗಳಿಗೆ ಬದ್ಧನಾಗಿರು ತ್ತೇನೆ” ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಎಲಾನ್ ಮಸ್ಕ್ ಮಾಡಿದ ‘ಹೌದು’ ‘ಬೇಡ’ ಆಯ್ಕೆಗಳ ಟ್ವೀಟ್​ಗೆ ಭರ್ಜರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

ಟ್ವಿಟರ್ ಸಿಇಓ ಸ್ಥಾನದಿಂದ ಕೆಳಗಿಳಿಯಬೇಕೇ? ಎಂದು ಮಸ್ಕ್ ಅವರ ಕೇಳಿದ ಪ್ರಶ್ನೆಗೆ ಈವರೆಗೆ 68,63041 ಮತ ಚಲಾವಣೆ ಯಾಗಿದ್ದು, ಈ ಪೈಕಿ ಕೆಲವರು ಸಿಇಓ ಸ್ಥಾನದಿಂದ ಕೆಳಗಿಳಿಯುವುದು ಬೇಡ ಎಂದರೆ ಇನ್ನೂ ಕೆಲವರು ಸ್ಥಾನದಿಂದ ಕೆಳಗಿಳಿಯುವಂತೆ ಹೇಳಿದ್ದಾರೆ. 1.14 ಲಕ್ಷಕ್ಕೂ ಅಧಿಕ ರೀಟ್ವೀಟ್​​ಗಳು ಆಗಿದ್ದು, 89 ಸಾವಿರಕ್ಕೂ ಅಧಿಕ ಕಾಮೆಂಟ್​ ಗಳು ಬಂದಿವೆ. 1.16 ಲಕ್ಷಕ್ಕೂ ಹೆಚ್ಚು ಲೈಕ್​ಗಳು ಬಂದಿವೆ.

ಎಲಾನ್ ಮಸ್ಕ್ ಅವರು ನೆಟ್ಟಿಗರಿಗೆ ಕೇಳಿದ ನಿರ್ಣಾಯಕ ಪ್ರಶ್ನೆಗೆ ಉತ್ತರಿಸಲು ಡೆಡ್​ಲೈನ್ ಕೂಡ ಇದ್ದು, ಇನ್ನು ಕೇವಲ 9 ಗಂಟೆಗಳಷ್ಟೇ ಓಟಿಂಗ್ ಅವಕಾಶ ಇರಲಿದೆ. ಕೇವಲ ಮೂರು ಗಂಟೆಗಳಲ್ಲಿ 68 ಲಕ್ಷಕ್ಕೂ ಅಧಿಕ ಮತಗಳು ಚಲಾವಣೆಯಾಗಿದ್ದು, ಮತಗಳ ಸಂಖ್ಯೆಯಲ್ಲಿ ಹೆಚ್ಚುತ್ತಲೇ ಇದೆ.

ಅಕ್ಟೋಬರ್‌ನಲ್ಲಿ ಟ್ವಿಟ್ಟರ್ ಅನ್ನು ಖರೀದಿಸಿದ್ದ ಎಲೋನ್ ಮಸ್ಕ್, ಸಾಮಾಜಿಕ ಮಾಧ್ಯಮ ಸೈಟ್‌ನಲ್ಲಿ ಹಿಂದೆ ನಿಷೇಧಿತ ಬಳಕೆ ದಾರರನ್ನು ಮರಳಿ ಅನುಮತಿಸುವುದು ಸೇರಿದಂತೆ ಸಾಮೂಹಿಕ ವಜಾಗಳು ಮತ್ತು ಇತ್ತೀಚಿನ ನೀತಿ ಬದಲಾವಣೆಗಳಿಗೆ ಸಂಬಂಧಿಸಿದಂತೆ ಮೊದಲ ದಿನದಿಂದ ಟೀಕೆಗೆ ಒಳಗಾಗಿದ್ದಾರೆ.