ಪಾವಗಡ: ಪುರಸಭೆ ಅಧ್ಯಕ್ಷರ ಹುದ್ದೆ ತೆರವಾದ ಸ್ಥಾನಕ್ಕೆ ಸೋಮವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅವಿರೋಧವಾಗಿ ಧನಲಕ್ಷ್ಮಿ ಅವರ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಧನಲಕ್ಮೀ ರವರಿಗೆ ಶುಭಕೋರಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಹೆಚ್.ವಿ.ವೆಂಕಟೇಶ್ ಸಮಾಜಿಕ ನ್ಯಾಯದ ಆಡಿಯಲ್ಲಿ ಪುರಸಭೆಯ ಎರಡು ವರೆ ವರ್ಷದಲ್ಲಿ ನಾಲ್ಕು ಮಂದಿಗೆ ಅಧ್ಯಕ್ಷರ ಸ್ಥಾನಕ್ಕೆ ಇಬ್ಬರನ್ನೂ ದಲಿತ ಸಮುದಾಯಕ್ಕೆ ನೀಡಿ ಆ ಸಮುದಾಯಕ್ಕೆ ಗೌರವ ತಂದು ಕೊಟ್ಟ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷ ಎಂದು ಗೌರವ ದಿಂದ ಹೇಳಬಹುದು.
ಇತಿಹಾಸದಲ್ಲೇ ಜಿಲ್ಲಾ ಪಂಚಾಯಿತಿ.ತಾಲೂಕು ಪಂಚಾಯಿತಿ ಮತ್ತು ಪುರಸಭೆಗಳಲ್ಲಿ ಎಡಗೈ ಸಮುದಾಯಕ್ಕೆ ಸ್ಥಾನ ಕಲ್ಪಿಸ ಲಾಗಿದೆ ಎಂದರು. ನೂತನ ಅಧ್ಯಕ್ಷರು ಉತ್ತಮ ಕೆಲಸ ಮಾಡಿ ಬರುವ ಯೋಜನೆಗಳು ಬಡವರಿಗೆ ಗುರ್ತಿಸಿ ಕೆಲಸ ಮಾಡಿಕೊಡುತ್ತಾರೆ ಎಂಬುದಾಗಿ ನಾನು ಭಾವಿಸುತ್ತೇನೆ ಎಂದರು.
ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸುದೇಶ್ ಬಾಬು ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ವರ್ಗದವರಿಗೂ ಸಮಾನತೆ ಕಲ್ಪಸುವ ನಿಟ್ಟಿನಲ್ಲಿ ಧನಲಕ್ಮೀ ಯವರಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಅವರ ಉತ್ತಮ ಆಡಳಿತ ನಡೆಸುವಲ್ಲಿ ನಾವೆಲ್ಲರೂ ಸಹಾಕರಿಸುತ್ತೇವೆ ಎಂದರು.
ಈ ವೇಳೆ ಚಿತ್ರದುರ್ಗ ಮಾಜಿ ಸಂಸದ ಬಿ.ಚಂದ್ರಪ್ಪ, ಮಾಜಿ ಶಾಸಕ ಸೂಮ್ಲಾನಾಯ್ಕ್, ಮಾಜಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಗಾಯಿತ್ರಿಬಾಯಿ, ಎ.ಶಂಕರರೆಡ್ಡಿ, ಜಿ.ಪಿ.ಪ್ರಮೋದ್, ಕೇಶವಚಂದ್ರದಾಸ್, ಜ್ಞಾನೇಶ್ ಬಾಬು, ಪುರಸಭೆ ಸದಸ್ಯರಾದ ರಾಜೇಶ್, ರವಿ.ಬಾಲಸುಬ್ರಮಣ್ಯಂ, ಅವಿನಾಶ್, ರಿಜ್ವಾನ್ ಷ ಬಾಬು ಇತರೆ ನೂರಾರು ಮಂದಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ ಆಚರಣೆ ಮಾಡಿದರು.
Read E-Paper click here