Saturday, 23rd November 2024

ಜನವರಿ ೬ ರಂದು ಸಾಧನಾ ಪಯಣ ಪುಸ್ತಕ ಬಿಡುಗಡೆ

ಇಂಡಿ: ಜನವರಿ ೬ ರಂದು ಬೆಳಿಗ್ಗೆ ೧೧ ಗಂಟೆಗೆ ಗುರುಬಸವ ಸಭಾ ಭವನ ಚವುಡಿಹಾಳ ದಲ್ಲಿ ಬಸವೇಶ್ವರ ಗ್ರಾಮೀಣಾಭಿವೃದ್ದಿ ಸಂಘ ಹಾಗೂ ಗುರುಬಸವ ಶಿಕ್ಷಣ ಸಂಕುಲಗಳ ಚವುಡಿಹಾಳ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಮತ್ತು ನಿವೃತ್ತ ಪ್ರಾಚಾರ್ಯ ಎಮ್.ಬಿ ಬಿರಾದಾರ ರವರ ೮೧ನೇ ಜನ್ಮದಿನ ಹಾಗೂ ೮೦ ವರ್ಷಗಳ ಸಾಧನಾ ಪಯಣ ಪುಸ್ತಕ ಬಿಡುಗಡೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಸಮಾರಂಭ ಜರುಗಲಿದೆ.

ಕಾರ್ಯಕ್ರಮದ ಪಾವನ ಸಾನಿಧ್ಯ ಶಿವಬಸವರಾಜೇಂದ್ರ ಮಹಾಸ್ವಾಮಿಗಳು ವಿರಕ್ತಮಠ ಖೇಡಗಿ, ಶಾಸಕ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸಲ್ಲಿದ್ದು ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ, ಸಾಹಿತಿ ಮಲ್ಲಿಕಾರ್ಜುನ ಜೇವುರ್ಗಿ ಖ್ಯಾತ ಉದ್ದೀಮೆದಾರ ಅಣ್ಣಾರಾಯಗೌಡ ಬಿರಾದಾರ, ಸಂಸ್ಥೆಯ ಮಾರ್ಗದರ್ಶಕರಾದ ಸಿದ್ರಾಮಪ್ಪಗೌಡ ಬಿರಾದಾರ, ಡಾ.ಪುಲಿಕೇಶಿ. ಎಮ್ ಬಿರಾದಾರ, ಶರಣಗೌಡ ಬಿರಾದಾರ, ಮಧವನ ಹೋಟೇಲ್ ಮಾಲೀಕರಾದ ಬಾಬುಗೌಡ, ಶಿ ಬಿರಾದಾರ, ಪುಸ್ತಕ ಬಿಡುಗಡೆಗೆ ಸ್ವಾಗತ ಕೋರಲು ಮಹಾದೇವ ಬಿರಾದಾರ ಹಣಮಂತರಾಯಗೌಡ ಬಿರಾದಾರ, ಅಭಿಮನ್ಯು ಬಿರಾದಾರ, ಸುರೇಶಗೌಡ ಪಾಟೀಲ, ರಮೇಶಗೌಡ ಬಿರಾದಾರ, ಪ್ರಥ್ವೀರಾಜ ಬಿರಾದಾರ, ಶಿಕ್ಷಣಪ್ರೇಮಿ ಗೋವಿಂದಪ್ಪ ಗೌಡ ಬಿರಾದಾರ ಸೇರಿದಂತೆ ಅನೇಕ ಗಣ್ಯರು ರಾಜಕೀಯ ಮುತ್ಸದಿಗಳು, ಶಿಕ್ಷಣ ಹಿತೈಸಿಗಳು ಕಾರ್ಯಕ್ರಮಕ್ಕೆ ಬರಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಗುರುಬಸವ ಶಿಕ್ಷಣ ಸಂಕುಲಗಳ ಆಡಳಿತಾಧಿಕಾರಿ ಎ.ಎಸ್ ಪಾಟೀಲ ಪ್ರಕಟಣೆಗೆ ತಿಳಿಸಿದ್ದಾರೆ.