Saturday, 23rd November 2024

ಸುಗಮ ಸಂಚಾರಗೊಳಿಸಿದ ಸಿ.ಪಿ.ಐ ಮಹಾದೇವ ಸಿರಹಟ್ಟಿ

ಇಂಡಿ: ತಾಲೂಕಿನ ಪ್ರಮುಖ ರಸ್ತೆಗಳು ಇಕ್ಕಟ್ಟಾಗಿರುವುದರಿಂದ ಈ ಎರಡ್ಮೂರು ವರ್ಷಗಳ ಹಿಂದೆ ಸಾರಿಗೆ ಸಂಪರ್ಕ ವಾಹನಗಳ ದಟ್ಟಣೆಯಿಂದ ಸಾಕಷ್ಟು ಅಫಘಾತ ಗಳು ಸಂಭವಿಸುತ್ತಿದ್ದವು.

ಇಂತಹ ಸಂದರ್ಬದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಪಟ್ಟಣದ ರಸ್ತೆಗಳ ಸಮಸ್ಯ ಅರಿತು ಹಾಗೂ ಸಾಕಷ್ಟು ಜೀವ ಗಳು ವಾಹನಗಳ ಅಡಿಯಲ್ಲಿ ಸಿಲುಕಿ ಅಫಘಾತ ಗಳು ಕಣ್ಣಾರೆ ಕಂಡು ಇದಕ್ಕೊಂದು ಇತೀಶ್ರೀ ಹಾಡಲೇಕು ಎಂಬ ದೂರದೃಷ್ಠಿ ಯಿಂದ ಪಟ್ಟಣದ ರಸ್ತೆಗಳ ಅಗಲೀಕರಣ ಮಾಡಬೇಕು ಎಂಬ ಸಂಕಲ್ಪ ತೊಟ್ಟು ನಗರದ ಅನೇಕ ವ್ಯಾಪಾರಸ್ಥರ ಹಾಗೂ ನಗರ ವಾಸಿಗಳ ಬುದ್ದಿಜೀವಿಗಳ ಅನುಮತಿ ಸಹಕಾರ ಪಡೇದು ರಸ್ತೆ ಅಗಲೀಕರಣ ಹಾಗೂ ಸೌಂದರ್ಯಕರಣ ಮಾಡಿಸಿ ಜಿಲ್ಲೆ ಕಂಗೋ ಳಿಸುವ೦ತೆ ಮಾಡಿದ್ದಾರೆ.

ಇಷ್ಠೇಲ್ಲ ರಸ್ತೆಗಳು ಅಗಲೀರಣ ಮಾಡಿ ವಾಹನಗಳ ಸುಗಮ ಸಂಚಾರ ಮಾಡಲು ಅನುಕೂಲ ಮಾಡಿದರೂ ಕೂಡಾ ಹಣ್ಣು ಹಂಪಲ ತರಕಾರಿ, ತಳ್ಳು ಗಾಡಿಗಳ ಎಲ್ಲೇಂದ ರಲ್ಲಿ ವ್ಯಾಪಾರಸ್ಥರು ಬೀದಿಯ ಮೇಲೆ ಕುಳಿತು ವ್ಯಾಪಾರ ಮಾಡುವುದು ಸಿಕ್ಕ ಸಿಕ್ಕಕಡೆ ದ್ವೀಚಕ್ರವಾಹನಗಳು, ಸರಕು ಸಾಗಾಣಿಕೆ ವಾಹನಗಳು , ಕಬ್ಬಿನ ಟ್ರಕ್ಕುಗಳು ಟ್ಯಾಕ್ಟರ್ ಗಳ ಹಾಯ್ದಾಟದಿಂದ ಮತ್ತೆ ಎಥಾ ಸ್ಥಿತಿ ರಸ್ತೆಗಳು ಇಕ್ಕಟ್ಟಾಗಿ ಸಾರ್ವಜನಿಕರಿಗೆ ಪಾದಾಚಾರಿಗಳಿಗೆ ಹಾಯ್ದಾಡಲು ಸಾಕಷ್ಟು ತೊಂದರೆಯಾಗಿತ್ತು.

ಇದನ್ನು ಅರಿತ ನೂತನ ಸಿಪಿಆಯ್ ಮಹಾದೇವ ಶಿರಹಟ್ಟಿ ಕೈ ಕಟ್ಟಿ ಕುಳಿತು ಕೊಳ್ಳುವುದಕ್ಕಿಂತ ಸಾರ್ವಜನಿಕ ಬದುಕಿನಲ್ಲಿ ಸಿಕ್ಕ ಅವಕಾಶ ಒಳ್ಳೇಯದಕ್ಕೆ ಉಪಯೋಗಿಸಬೇಕು ಎಂಬ ಸಂಕಲ್ಪದೊ೦ದಿಗೆ ಇಡೀ ತನ್ನ ಪೊಲೀಸ್ ಸಿಬಂದ್ದಿಗಳ ಸಹಕಾರದೊಂದಿಗೆ ರಸ್ತೆಯ ಮೇಲೆ ಕುಳಿತು ವ್ಯಾಪಾರ ಮಾಡುತ್ತಿದ ಬೀದಿ ವ್ಯಾಪಾರಿಗಳಿಗೆ ಖಡಕ್ಕಾಗಿ ತಾಕೀತು ಮಾಡಿ ಸುಣ್ಣದಿಂದ ಗೆರೆ ಎಳೇದು ಯಾವುದೇ ಕಾಲಕ್ಕೂ ಸರಹದ್ದು ದಾಟಬಾರದು ಹಾಗೂ ಸಾರ್ವಜನಿಕರು ದ್ವೀಚಕ್ರ ವಾಹನಗಳು ಬೇರೆ ಕಡೆ ಪಾರ್ಕಿಂಗ್ ಮಾಡುವ ವ್ಯವಸ್ಥೆ ಮಾಡಿ ಪ್ರತಿ ನಿತ್ಯ ಪೊಲೀಸ್ ವಾಹನದಲ್ಲಿ ಬೆಳಿಗ್ಗೆ ೭ರಿಂದ ಸಾಯಂಕಾಲ ೮ಗಂಟೆಯವರೆಗೆ ರಸ್ತೆಯ ಮೇಲೆ ಪ್ರಮುಖ ಸರ್ಕಲ್‌ಗಳಲ್ಲಿ ಪೊಲೀಸ್‌ರು ಅಲೇದಾಡುವಂತೆ ಮಾಡಿ ಸಾರ್ವಜನಿಕರಿಗೆ ತಿಳುವಳಿಕೆ ಮಾಡುತ್ತಿದ್ದಾರೆ.

ಇದಲ್ಲದೆ ಸ್ವತ ಸಿಪಿಆಯ್ ಮಹಾದೇವ ಸಿರಹಟ್ಟಿ ಸಾಹೇಬರೇ ಹಗಲಿನಲ್ಲಿ ರೋಡಿನ ಮೇಲೆ ಗಸ್ತು ತೀರುಗುತ್ತಾ ರಸ್ತೆ ಮೇಲೆ ಯಾರಾದರೂ ದ್ವೀಚಕ್ರವಾಹನ ನಿಲ್ಲಿಸಿದರೆ ತಕ್ಕ ಶಾಸ್ತಿ ಮಾಡುತ್ತಿರುವುದರಿಂದ ಪಟ್ಟಣದ ರಸ್ತೆಗಳು ಸುಗಮ ಸಂಚಾರಕ್ಕೆ ಅನುಕೂಲವಾಗಿದೆ ಇಂತಹ ಒಳ್ಳೇಯ ಕೆಲಸ ಮಾಡುತ್ತಿರುವ ಸಿ.ಪಿ ಆಯ್ ಶಿರಹಟ್ಟಿ ಸಾಹೇಬರ ಕಾರ್ಯವೈಖ್ಯರಿಗೆ ಸಾರ್ವಜನಿ ಕರು ಪ್ರಶಂಸಿಸುತ್ತಿದ್ದಾರೆ.

*

ರಸ್ತೆ ಅಗಲೀಕರಣ ಆಗಿರುವುದು ನೀಜ ಆದರೆ ರಸ್ತೆಗಳ ನಿಯಮಗಳೇ ಇಲ್ಲದೆ ಬೇಕಾಬಿಟ್ಟಿ ವಾಹನಗಳು ನಿಲ್ಲಿಸುವುದು ಮಾಡು ತ್ತಿದ್ದರು. ಇದರಿಂದ ರಸ್ತೆಯ ಮೇಲೆ ಹಾಯ್ದಾಡುವ ಪಾದಾಚಾರಿಗಳು ಜೀವ ಭಯದಿಂದ ಅಲೇದಾಡುವಂತಾಗಿತ್ತು. ಶಾಸಕರು ಮಾಡಿದ ಅಭಿವೃದ್ದಿ ಕೆಲಸ ಸ್ಥಳೀಯ ಆಡಳಿತ ವೈಫಲ್ಯದಿಂದ ಮತ್ತೆ ಅದೇ ರಾಗ ಅದೇ ಹಾಡು ಎನ್ನುವಂತಾಗಿತ್ತು. ಸದ್ಯ ಸಿ.ಪಿ ಆಯ್ ಸಾಹೇಬರು ನೂತನವಾಗಿ ಬಂದು ರಸ್ತೆಯ ಬದಿಗೆ ಸುಣ್ಣದ ಗೇರೆ ಹಾಕಿಸಿ ವಾಹನಗಳ ನಿಯಮ, ಪಾದಚಾರಿಗಳ ನಿಯಮ ಪ್ರಚಾರಗೊಳಿಸಿ ಇಂದು ರಸ್ತೆಯ ಪಕ್ಕದಲ್ಲಿಯೇ ವಾಹನಗಳ ಪಾರ್ಕಿಂಗ್ ಮಾಡಿ ಸುಗಮ ಸಂಚಾರ ಮಾಡಿ ರಸ್ತೆಯ ಮೇಲೆ ಅಡ್ಡಾದಿಡ್ಡಿ ವಾಹನ ಓಡಿಸಿದರೆ ದಂಡ ಬೀಳುವುದು ಖಚೀತ ಎಂದು ಸಾರ್ವಜನಿಕರು ನಿಯಮ ಪಾಲಿಸುತ್ತಿದ್ದಾರೆ.
ಶಾಂತು ಹದಗಲ್, ಪಟ್ಟಣದ ಯುವ ಮುಖಂಡ.

ಈ ಭಾಗದ ಜನರು ಹೃದಯವಂತರು ಹೇಳಿದರೆ ತಿಳಿದುಕೊಳ್ಳುವ ವ್ಯಕ್ತಿತ್ವ ಅವರಲ್ಲಿದೆ. ಈ ಹಿಂದೆ ಸಾಕಷ್ಟು ರಸ್ತೆ ಅಗಲೀಕರಣ ಮಾಡಿದ್ದಾರೆ ಆದರೆ ಬೀದಿ ವ್ಯಾಪಾರಸ್ಥರು ಸಿಕ್ಕಕಡೆ ಕುಳಿತು ರಸ್ತೆ ಇಕ್ಕಟ್ಟು ಮಾಡಿದ್ದಾರೆ. ಜನರಿಗೆ ತೊಂದರೆಯಾಗುವುದನ್ನು ಗಮನಿಸಿದ ಬಳಿಕ ವ್ಯಾಪಾರಸ್ಥರಿಗೆ ಸ್ವಲ್ಪ ದೂರ ಸರಿಸಿ ಸುಣ್ಣದಿಂದ ಗೆರೆ ಹಾಕಿ ಪಾರ್ಕಿಂಗ್ ಮಾಡಿಸಿ ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ. ಸರಕಾರ ಸಂಬಳ ನೀಡುತ್ತಿರುವುದೇ ಜನರ ರಕ್ಷಣೆಗಾಗಿ ಶಾಂತಿ ,ಸೌಹಾರ್ದತೆಗಾಗಿ ಪೊಲೀಸ್ ಎಂಬ ಭಯ ಬೇಡ ಭಯ ಮುಕ್ತವಾತಾವರಣ ನಿರ್ಮಾಣ ಮಾಡುವುದೇ ನಮ್ಮ ಉದ್ದೇಶ. ಇದಕ್ಕೆ ಇಡೀ ಪಟ್ಟದ ಜನತೆ ಸಹಕಾರ ಕೊಡಬೇಕು ಹಾಗೂ ಸಾರ್ವಜನಿಕರು ಪೊಲೀಸ್‌ರೊಂದಿಗೆ ಸಹಕರಿಸಬೇಕು ಎಂದು ವಿನಂತಿಸಿದ್ದಾರೆ.
ಇಂಡಿ ಠಾಣಾ ಗ್ರಾಮೀಣ ಸಿ.ಪಿ.ಆಯ್ ಮಹಾದೇವ ಸಿರಹಟ್ಟಿ