Sunday, 24th November 2024

ನೋವು ಗ್ರಹಿಸುವ ಕೃತಕ ಚರ್ಮ

-ಅಜಯ್ ಅಂಚೆಪಾಳ್ಯ

ತಂತ್ರಜ್ಞಾನವು ಹಲವು ಕ್ಷೇತ್ರಗಳಲ್ಲಿ ದಾಪುಗಾಲು ಹಾಕುತ್ತಾ, ಮನುಷ್ಯ ಹೊಸ ಹೊಸ ಸಂಶೋಧನೆಗಳಿಗೆ, ಸಾಹಸಗಳಿಗೆ ಮುನ್ನುಡಿ ಬರೆಯುತ್ತಲೇ ಇದೆ.

ಅಮೆರಿಕದ ಆರ್ ಎಂಐಟಿ ವಿಶ್ವವಿದ್ಯಾಲಯದ ತಜ್ಞರು ಈಗ ನವೀನ ಸ್ವರೂಪದ ಕೃತಕ ಚರ್ಮವನ್ನು ರೂಪಿಸಿದ್ದು, ಅದು ಮನುಷ್ಯನ ಚರ್ಮದಂತೆಯೇ ನೋವನ್ನು ಸಹ ಗ್ರಹಿಸಬಲ್ಲದು! ಈ ವರೆಗೆ ವಿದ್ಯುನ್ಮಾನ ಚರ್ಮಗಳನ್ನು ತಯಾರಿಸಿದ್ದರೂ, ಅವು ನೋವನ್ನು ಗ್ರಹಿಸುತ್ತಿರಲಿಲ್ಲ, ಬದಲಿಗೆ ತಮಗೆ ಏನಾದರೂ ತಗುಲಿದಾಗ ಗ್ರಹಿಸುತ್ತಿದ್ದವು. ಇವುಗಳನ್ನು ರೋಬೋಟ್ ಮೊದಲಾದ ಯಂತ್ರಗಳಲ್ಲಿ ಉಪಯೋಗಿಸಲಾಗುತ್ತಿತ್ತು. ಈಗ ತಯಾರಾಗಿರುವ ಹೊಸ ಕೃತಕ ಚರ್ಮವು, ಮನುಷ್ಯನಂತೆಯೇ ನೋವನ್ನು ಸಹ ಗ್ರಹಿಸುತ್ತಿರುವುದು ವಿಶೇಷ. ಅತಿ ಎನಿಸುವಷ್ಟು ತೆಳುವಾಗಿರುವ ಸಿಲಿಕಾನ್ ಎಲೆಕ್ಟ್ರಾನಿಕ್‌ಸ್‌ ನಿಂದ ತಯಾರಿಸಿ ರುವ ಈ ಹಾಳೆಯು, ಮಿದುಳಿನ ನರಗಳನ್ನು ಹೋಲು ನೆನಪಿನ ಕೋಶಗಳನ್ನು ಹೊಂದಿವೆ.

ಇವು ಒತ್ತಡವನ್ನು ಗ್ರಹಿಸುವುದರ ಜತೆಯಲ್ಲೇ, ಬಿಸಿಯನ್ನು ಮತ್ತು ನೋವನ್ನು ಗ್ರಹಿಸಬಲ್ಲವು. ಈ ಕೃತಕ ಚರ್ಮವು ಸೂಜಿ ಯಿಂದ ಚುಚ್ಚಿದ ನೋವಿಗೂ, ತುಸು ಒತ್ತಡದಿಂದ ಒಂದೇಟು ಹಾಕಿದ ನೋವಿಗೂ ಇರುವ ವ್ಯತ್ಯಾಸವನ್ನು ಗುರುತಿಸಿ, ದಾಖಲಿಸಬಲ್ಲವು. ಮನುಷ್ಯನಲ್ಲಿರುವ ನ್ಯೂರಾನ್, ನ್ಯೂರಲ್ ಪಾತ್‌ವೇಸ್ ಮತ್ತು ರಿಸೆಪ್ಟರ್‌ಗಳ ವಿನ್ಯಾಸವನ್ನು ಅಳವಡಿಸಿ ಕೊಂಡಿವೆ. ಇಂತಹ ಸೂಕ್ಷ್ಮಗ್ರಾಹಿ ಕೃತಕ ಚರ್ಮಗಳ ಉಪಯೋಗವೇನು? ಪ್ರಾಯೋಗಿಕವಾಗಿ ಉಪಯೋಗಿಸುವಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದ್ದರೂ, ಇದನ್ನು ಎಲ್ಲಿ ಉಪಯೊಗಿಸಬಹುದೆಂಬದರ ಕುರಿತು ತಂತ್ರಜ್ಞರಲ್ಲಿ ಸ್ಪಷ್ಟತೆ ಇದೆ. ಇಂದು ಅಭಿವೃದ್ಧಿಯಲ್ಲಿರುವ ರೋಬೋಟ್‌ಗಳಲ್ಲಿ ಇಂತಹ ಎಲೆಕ್ಟ್ರಾನಿಕ್ ಹಾಳೆಗಳನ್ನು ಅಳವಡಿಸುವುದರಿಂದ, ಆ ರೋಬೋಟ್ ಗಳು ಮನುಷ್ಯನಂತೆಯೇ ಸ್ಪರ್ಶಜ್ಞಾನವನ್ನು ಪಡೆಯಬಲ್ಲವು. ಆ ಮೂಲಕ ತಮ್ಮಿಿಂದ ನಿರೀಕ್ಷಿಸಲ್ಪಟ್ಟ ಕೆಲಸ ಗಳನ್ನು ಇನ್ನಷ್ಟು ಸಮರ್ಪಕವಾಗಿ ಮಾಡಬಲ್ಲವು. ಇನ್ನೊೊಂದು ಮುಖ್ಯ ಉಪಯೋಗವೆಂದರೆ ಮನುಷ್ಯನ ಹಾನಿ ಗೊಂಡ ಚರ್ಮವನ್ನು ಮೂಲಸ್ವರೂಪಕ್ಕೆೆ ತರುವಲ್ಲಿ. ಈಗಾಗಲೇ ಚರ್ಮದ ಗ್ರಾಫ್ಟಿಿಂಗ್ ಅಥವಾ ಕಸಿಯನ್ನು ಮಾಡುತ್ತಿದ್ದಾರೆ.

ಆದರೆ, ಕೆಲವು ಸಂದರ್ಭಗಳಲ್ಲಿ ಕಸಿಮಾಡಿದ ಚರ್ಮವು ಕೆಲವು ವಿಭಾಗಗಳಲ್ಲಿ ಸಮಪರ್ಕವಾಗಿ ಕೆಲಸ ಮಾಡದೇ ಇರುವ ಸಾಧ್ಯತೆ ಇದೆ. ಅಂತಹ ಸಂದರ್ಭಗಳಲ್ಲಿ, ಹಾನಿಗೊಂಡ ಚರ್ಮವನ್ನು ಮೂಲರೂಪಕ್ಕೆೆ ತರುವಾಗ, ಚರ್ಮದ ಕಸಿಯ ಜತೆ ಯಲ್ಲೇ, ಬಿಸಿ, ನೋವುಗಳನ್ನು ಗ್ರಹಿಸುವ ಈ ಹಾಳೆಗಳನ್ನು ಅಳವಡಿಸಿ, ಮೂಲ ಸ್ವರೂಪದ ಗ್ರಹಿಕೆಗೆ ಅನುಕೂಲ ಮಾಡಿಕೊಡ ಬಹುದು. ನೋವು ಮತ್ತು ಬಿಸಿಯನ್ನು ಗ್ರಹಿಸುವ ಈ ಕೃತಕ ಚರ್ಮದ ತಯಾರಿಯು ಈಗ ಆರಂಭಿಕ ಹಂತದಲ್ಲಿದ್ದು, ಇನ್ನಷ್ಟು ಪ್ರಗತಿ ಸಾಧಿಸಿದ ನಂತರ, ಇವುಗಳ ಉಪಯೋಗವು ಮನುಷ್ಯನಲ್ಲೂ ಪ್ರಾಯೋಗಿಕವಾಗಿ ಸಾಧ್ಯವಾಗುವ ದಿನಗಳು ಬರಬಹುದು.

ಸ್ಯಾಮ್ಸಂಗ್‌ಗೆ ಹೊಸ ಕಾಂಟ್ರಾಕ್‌ಟ್‌ ದಕ್ಷಿಣ ಕೊರಿಯಾದ ತಂತ್ರಜ್ಞಾನ ದೈತ್ಯ ಸ್ಯಾಮ್ಸಂಗ್ ಸಂಸ್ಥೆೆಯು, ಅಮೆರಿಕದಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸುತ್ತಾ ಸಾಗಿದೆ. ಅಮೆರಿಕದ ವೆರಿಜಾನ್‌ನ ವೈರ್‌ಲೆಸ್ ಸಂವಹನದ ಕಾಂಟ್ರಾಕ್‌ಟ್‌‌ನ್ನು ಸ್ಯಾಮ್ಸಂಗ್ ಪಡೆದಿದ್ದು, ಈ ವ್ಯವಹಾರದ ಅಂದಾಜು ವೆಚ್ಚ 6.64 ಬಿಲಿಯನ್ ಡಾಲರ್. ಅಮೆರಿಕವು ಚೀನಾದ ಹುವಾಯಿ ಸಂಸ್ಥೆೆಗೆ ವಿಧಿಸಿ ರುವ ನಿಷೇಧದಿಂದಾಗಿ, ಸ್ಯಾಮ್ಸಂಗ್‌ನ ಪ್ರಬಲ ಪ್ರತಿಸ್ಫರ್ದಿ ಮೌನವಾಗಿದ್ದರಿಂದ, ಈ ಬೃಹತ್ ಮೊತ್ತದ ಕಾಂಟ್ರಾಕ್‌ಟ್‌‌ನ್ನು ಸ್ಯಾಮ್ಸಂಗ್ ಪಡೆಯಲು ಸಾಧ್ಯವಾಯಿತು.

ಸ್ಯಾಮ್ಸಂಗ್ ಈ ಬೃಹತ್ ಮೊತ್ತದ ಕೆಲಸವನ್ನು ವಹಿಸಿಕೊಟ್ಟಿರುವ ವೆರಿಜಾನ್ ಸಂಸ್ಥೆೆಯು ನೋಕಿಯಾ ಮತ್ತು ಜೆಪಿ ಮಾರ್ಗನ್‌ನ ಗ್ರಾಹಕನಾಗಿದೆ. ‘‘ಈ ದೀರ್ಘಕಾಲೀನ ಕಾಂಟ್ರಾಕ್‌ಟ್‌‌ನ ಸಹಾಯದಿಂದ ನಾವು 5ಜಿ ತಂತ್ರಜ್ಞಾನದಲ್ಲಿ ಕೌಶಲ್ಯವನ್ನು ಸಾಧಿಸಿ, ವೆರಿಜಾನ್‌ನ ಗ್ರಾಹಕರಿಗೆ ಉತ್ತಮ ಮೊಬೈಲ್ ಸೌಕರ್ಯವನ್ನು ನೀಡಬಲ್ಲೆೆವು’’ ಎಂದು ಸ್ಯಾಮ್ಸಂಗ್ ಹೇಳಿಕೊಂಡಿದೆ. ಏಷ್ಯಾದ ಸ್ಯಾಮ್ಸಂಗ್‌ಗೆ ಈ ಕಾಂಟ್ರಾಕ್‌ಟ್‌ ಬಹು ಮಹತ್ವದ್ದು. ಜಾಗತಿಕ ಟೆಲಿಕಾಂ ಉಪಕರಣಗಳ ಮಾರುಕಟ್ಟೆೆಯಲ್ಲಿ ಸ್ಯಾಮ್ಸಂಗ್ ಪಾಲು, 2019ರಲ್ಲಿದ್ದಂತೆ ಕೇವಲ ಶೇ.3. ಇತರ ತಂತ್ರಜ್ಞಾನ ದೈತ್ಯರಾದ ಹುವಾಯಿ, (ಶೇ.28), ನೋಕಿಯಾ (ಶೇ.16), ಎರಿಕ್‌ಸನ್ (ಶೇ.14) ಮೊದಲಾದ ಸಂಸ್ಥೆೆಗಳಿಗಿಂತ ಸ್ಯಾಮ್ಸಂಗ್ ಈ ವಲಯದಲ್ಲಿ ಸಾಕಷ್ಟು ಹಿಂದಿದೆ. ಹುವಾಯಿಗೆ ಅಮೆರಿಕ ನಿಷೇಧ ವಿಧಿಸಿದ್ದರಿಂದಾಗಿ, ಸ್ಯಾಮ್ಸಂಗ್‌ನಂತಹ ಸಂಸ್ಥೆೆಗಳು ಅಮೆರಿಕದಲ್ಲಿ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತಿರಿಸಿಕೊಳ್ಳಲು ಅನುಕೂಲ ಎನಿಸಿದೆ. ಚೀನಾ ಮೂಲದ ಹುವಾಯಿ ಸಂಸ್ಥೆೆಯನ್ನು ತಮ್ಮ ದೇಶದಲ್ಲಿ ಹೆಚ್ಚು ಹೆಚ್ಚು ತಳ ಊರಲು ಬಿಟ್ಟರೆ, ತಮ್ಮ ದೇಶದ ಭದ್ರತೆಗೇ ಅಪಾಯ ಎಂದು ಅಮೆರಿಕ ಬಹಿರಂಗವಾಗಿ ಘೋಷಿಸಿದ್ದರ ಪರಿಣಾಮವು, ದಕ್ಷಿಣ ಕೊರಿಯಾದ ಸ್ಯಾಮ್ಸಂಗ್‌ಗೆ ಲಾಭದಾಯಕವಾಗಿದ್ದು ಸುಳ್ಳಲ್ಲ.