ವಿಶ್ಲೇಷಣೆ
ಮುರುಳಿ ಆರ್.
muraliramu@gmail.com
ಯಾವುದೇ ಕಷ್ಟದ ಚುನಾವಣೆಯನ್ನೂ ಸುಲಭವಾಗಿ ಬದಲಾಯಿಸುವ ಕಲೆ ಅಮಿತ್ ಶಾ ಅವರಿಗೆ ಕರಗತವಾಗಿದೆ. ೨೦೧೪ ರಲ್ಲಿ ರಾಷ್ಟ್ರೀಯ ವೇದಿಕೆಗೆ ಆಗಮಿಸಿದ ನಂತರ ಹಲವು ಚುನಾವಣೆಯಲ್ಲಿ ಬಿಜೆಪಿಯ ಪ್ರಚಂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಅಮಿತ್ ಶಾ. ಪಕ್ಷದ ಭದ್ರಕೋಟೆಯಲ್ಲದ ಜಾಗದಲ್ಲೂ ಬಿಜೆಪಿಗೆ ಅಸಾಧಾರಣ ಗೆಲುವು ದೊರಕಿಸಲು ಅಮಿತ್ ಶಾ ಶ್ರಮಿಸಿದ್ದಾರೆ.
ರಾಜಕಾರಣಿಗಳು ಸಾಮಾನ್ಯವಾಗಿ ಜನಪ್ರಿಯತೆಗಳಿಸಲು ಅಡ್ಡದಾರಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ, ಆದರೆ ಕೆಲವರು ಮಾತ್ರ ಕ್ಷುಲ್ಲಕ ರಾಜಕೀಯ ಬಿಟ್ಟು ಅಭಿವೃದ್ಧಿಯ ಮೂಲಕ ಜನರ ಮನಸ್ಸು ಗೆಲ್ಲುತ್ತಾರೆ. ಇತಿಹಾಸದಲ್ಲಿ ಅಂತಹ ನಾಯಕರ ಹೆಸರು ಅಚ್ಚಳಿಯದೆ ಉಳಿದುಬಿಡುತ್ತದೆ. ಜನ ಸಾಮಾನ್ಯರಿಗೆ ಹಾಗು ಸಮಾಜಕ್ಕೆ ಶಾಶ್ವತವಾಗಿ ಒಳಿತನ್ನೇ ಬಯಸುವ ಅಂತಹ ನಾಯಕರು ಸಿಗುವುದು ಇತಿಹಾಸದಲ್ಲಿ ಒಮ್ಮೆ ಮಾತ್ರ. ಇಂತಹ ನಾಯಕರು ಸಮಾಜದ ದುಷ್ಟ ಶಕ್ತಿಗಳ ವಿರುದ್ಧ ನಿಂತು, ಗಾಳಿಯ ವಿರುದ್ಧ ಚಲಿಸುವ ಎದೆಗಾರಿಕೆ ಹೊಂದಿರುತ್ತಾರೆ. ಈ ಹೋರಾಟದ ಗುಣ ಮಹಾನ್ ನಾಯಕರ ಡಿಎನ್ಎನ
ಬಂದುಬಿಟ್ಟಿರುತ್ತದೆ.
ಇದೀಗ ಭರತ ಖಂಡದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊರತು ಪಡಿಸಿ ಅಂತಹ ಮಹಾನ್ ನಾಯಕನ ಗುಣ ಕಾಣಸಿಗುವುದು ಮೋದಿಯವರ ನಂಬಿಕಸ್ಥ ಸಹವರ್ತಿ ಅಮಿತ್ ಶಾ ಅವರಲ್ಲಿ ಮಾತ್ರ. ಪ್ರಸ್ತುತ ರಿಯಲ್ ಪಾಲಿಟಿಕ್ಸ್ ಯುಗದಲ್ಲಿ ಅಪರೂಪದ ರಾಜಕಾರಣಿಗಳ ಪಟ್ಟಿಯಲ್ಲಿ ಅಮಿತ್ ಶಾ ಅವರ ಹೆಸರು ಮುಂಚೂಣಿಯಲ್ಲಿದೆ. ಅಮಿತ್ ಶಾ ಅವರ ರಾಜಕೀಯದಲ್ಲಿ ಅಭಿವೃದ್ಧಿಯೇ ಮೊದಲ ಮಂತ್ರ. ಕೋಮು ಮತ್ತು ಜಾತಿ ರಾಜಕಾರಣವನ್ನು ಇವರು ಪೋಷಿಸುವುದಿಲ್ಲ.
‘ಕೊಡು ಮತ್ತು ತಗೋ’ ಎಂಬ ಒಳ ಒಪ್ಪಂದಗಳ ರಾಜಕೀಯಕ್ಕೆ ಅಮಿತ್ ಶಾ ಅಂತ್ಯ ಹಾಡಿದ್ದಾರೆ. ಇಲ್ಲಿ ಅಭಿವೃದ್ಧಿಯ ಕನಸುಗಳು ದೊಡ್ಡದಾಗಿವೆ ಹಾಗು ಕನಸನ್ನು ನನಸಾಗಿಸುವ ಪ್ರಯತ್ನ ಕೂಡ ಪ್ರಾಮಾಣಿಕವಾಗಿದೆ. ಬಿಜೆಪಿಯ ಚುನಾವಣಾ ಚಾಣಕ್ಯ, ಮುಖ್ಯ ಕಾರ್ಯತಂತ್ರಗಾರ ಅಮಿತ್ ಶಾ ಅವರು ತಮ್ಮ ಕರ್ನಾಟಕ ಭೇಟಿಯಲ್ಲಿ ತಮ್ಮ ರಾಜಕೀಯ ಶಕ್ತಿಯನ್ನು ತಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಧಾನಿ ಮೋದಿಯವರ ಅಭಿವೃದ್ಧಿ ಸಂದೇಶವನ್ನು ಕರುನಾಡಿಗೆ ತಲುಪಿಸುವ ಮೊದಲ
ಪ್ರಯತ್ನವಾಗಿ ಅಮಿತ್ ಶಾ ಅವರು ಕರ್ನಾಟಕದ ಮೈಸೂರು ಭಾಗಕ್ಕೆ ಭೇಟಿ ನೀಡಿದ್ದರು.
ಒಕ್ಕಲಿಗ ಸಮುದಾಯ ಪ್ರಾಬಲ್ಯ ಹೊಂದಿರುವ, ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿರುವ ಮಂಡ್ಯದ ಮೂಲಕ ಅಭಿವೃದ್ಧಿಯ ಸಂದೇಶ ಆರಂಭಿಸಿ ಭ್ರಷ್ಟ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಕರ್ನಾಟಕ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು ಮೈಸೂರು ಭಾಗ ಪ್ರಮುಖ ಪಾತ್ರ ವಹಿಸುತ್ತದೆ. ಕರ್ನಾಟಕ ವಿಧಾನ ಸಭೆಯ ಒಟ್ಟು ೨೨೪ ವಿಧಾನಸಭಾ ಸ್ಥಾನಗಳ ಪೈಕಿ ೬೧ ಸ್ಥಾನಗಳು ಮೈಸೂರು ಭಾಗದ ಬರುತ್ತವೆ. ಆದರೆ ಭ್ರಷ್ಟ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮೈಸೂರು ಭಾಗದ ಮತದಾರರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದಾರೆ.
ಈ ಮೂಲಕ ಮೈಸೂರು ಭಾಗದ ಜನರನ್ನು ಅಭಿವೃದ್ಧಿಯಿಂದ ವಂಚಿಸುತ್ತಿzರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು. ಸಹಕಾರಿ ಒಕ್ಕೂಟದ ಸಿದ್ಧಾಂತವನ್ನು ಪ್ರಾಯೋಗಿಕವಾಗಿ ಜಾರಿಗೆ ತರುವ ನಾಯಕರ ಪ್ರಯತ್ನಕ್ಕೂ ಕಾಂಗ್ರೆಸ್ ಮತ್ತು ಜೆಡಿಎಸ್ ಅಡ್ಡಿಯಾಗುತ್ತಿದೆ. ಇಂತಹ ಸಂಕಷ್ಟ ನಿವಾರಣೆಗೆ ಅಮಿತ್ ಶಾ ಅವರು ಆಯ್ಕೆ ಮಾಡಿಕೊಂಡಿದ್ದು ಅಭಿವೃದ್ಧಿಯ ಮಾರ್ಗವನ್ನು. ಹೀಗಾಗಿಯೇ ಅಮಿತ್ ಶಾ ಅವರು ತಮ್ಮ ಮೈಸೂರು ಭಾಗದ ಮೊದಲ ಭೇಟಿಯ ಲಕ್ಷಾಂತರ ಜನರ
ಹೃದಯವನ್ನು ತಕ್ಷಣವೇ ಗೆದ್ದರು.
ಸಮಕಾಲೀನ ರಾಜಕೀಯದಲ್ಲಿ ಎಲ್ಲರಿಗಿಂತ ಮೋದಿ-ಶಾ ಜೋಡಿಗೆ ಜನರ ನಾಡಿಮಿಡಿತ ಚೆನ್ನಾಗಿ ತಿಳಿದಿದೆ. ಸರಿಯಾದ ಸ್ಥಳದಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ಸ್ವರಮೇಳ ಈ ಇಬ್ಬರು ನಾಯಕರಿಗೆ ಮಾತ್ರ ಅರ್ಥವಾಗುತ್ತದೆ. ಈ ಗುಣವೇ ಪ್ರತಿ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಲು ಹಾಗು ಅಭಿವೃದ್ಧಿ ಮಾಡಲು ಸಹಾಯಕವಾಗಿದೆ. ಅಮಿತ್ ಶಾ ಅವರ
ಮೊದಲ ಭೇಟಿಯ ಒಂದು ದಿನದ ಮೊದಲೇ ಕರ್ನಾಟಕ ಸಾಕಷ್ಟು ಬದಲಾವಣೆಗೆ ಸಾಕ್ಷಿಯಾಯಿತು. ಉತ್ತರದಲ್ಲಿ ಪ್ರಬಲ ರಾಗಿರುವ ಲಿಂಗಾಯತ ಪಂಚಮಸಾಲಿ ಸಮುದಾಯ ಮತ್ತು ದಕ್ಷಿಣದಲ್ಲಿ ಪ್ರಬಲರಾಗಿರುವ ಒಕ್ಕಲಿಗ ಸಮುದಾಯದ ಮೀಸಲಾತಿ ಕೋಟಾ ಹೆಚ್ಚಿಸಲು ಕರ್ನಾಟಕ ಕ್ಯಾಬಿನೆಟ್ ನಿರ್ಧಾರ ಕೈಗೊಂಡಿತ್ತು.
ಅಲ್ಲದೆ ಬೆಳಗಾವಿಯ ಗಡಿ ವಿವಾದದ ಕುರಿತು ಮಹಾರಾಷ್ಟ್ರ ಮತ್ತು ಕರ್ನಾಟಕ ಮುಖ್ಯಮಂತ್ರಿಗಳ ನಡುವಿನ ಸಭೆಗೆ
ಮಧ್ಯಸ್ಥಿಕೆ ವಹಿಸಿದವರು ಅಮಿತ್ ಶಾ ಅವರು. ಇದೆಲ್ಲವೂ ಅಮಿತ್ ಶಾ ಅವರ ಕರ್ನಾಟಕ ಭೇಟಿ ಹಾಗೂ ಪ್ರಚಾರ ಕಾರ್ಯಕ್ಕೆ ವೇದಿಕೆ ಒದಗಿಸಿತ್ತು. ದೇಶದ ದಕ್ಷಿಣ ಭಾಗದಲ್ಲಿ ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿರುವ ಏಕೈಕ ರಾಜ್ಯ ಕರ್ನಾಟಕ. ಹೀಗಾಗಿ ಕರ್ನಾಟಕ ವಿಧಾನಸಭೆ ಚುನಾವಣೆ ಬಿಜೆಪಿಗೆ ತುಂಬಾ ಮುಖ್ಯವಾಗಿದೆ. ಇದೀಗ ಬಿಜೆಪಿ ರಾಜ್ಯ ನಾಯಕರು ಆರಂಭಿಸಿರುವ ವಿಜಯಯಾತ್ರೆ ಬಿಜೆಪಿಗೆ ಚುನಾವಣೆಯಲ್ಲಿ ಹೊಸ ತಿರುವು ನೀಡಬಹುದು. ಆದರೆ ಇದಕ್ಕಾಗಿ ಶಕ್ತಿಯುತ ನಾಯಕನ ಅಗತ್ಯತೆ ಇದ್ದೇ ಇರುತ್ತದೆ.
ಇಂತಹ ನಾಯಕತ್ವದ ಗುಣವಿರುವ ಅಮಿತ್ ಶಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ದೊರಕಿಸಿಕೊಡಬಲ್ಲರು. ಹೀಗಾಗಿಯೇ ಪ್ರಧಾನಿ ಮೋದಿ ಅವರು ತಮ್ಮ ನಂಬಿಕಸ್ಥ ನಾಯಕ ಅಮಿತ್ ಶಾ ಅವರನ್ನು ಕರ್ನಾಟಕ ವಿಧಾನಸಭೆ ಚುನಾವಣೆಗೆ ಆಯ್ಕೆ ಮಾಡಿದ್ದು, ಇದು ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ಪ್ರಚಂಡ ಗೆಲುವಿಗೆ ನಾಂದಿ ಹಾಡಿದೆ. ಯಾವುದೇ ಕಷ್ಟದ ಚುನಾವಣೆಯನ್ನೂ ಸುಲಭವಾಗಿ ಬದಲಾಯಿಸುವ ಕಲೆ ಅಮಿತ್ ಶಾ ಅವರಿಗೆ ಕರಗತವಾಗಿದೆ.
೨೦೧೪ ರಲ್ಲಿ ರಾಷ್ಟ್ರೀಯ ವೇದಿಕೆಗೆ ಆಗಮಿಸಿದ ನಂತರ ಹಲವು ಚುನಾವಣೆಯಲ್ಲಿ ಬಿಜೆಪಿಯ ಪ್ರಚಂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಅಮಿತ್ ಶಾ. ಗುಜರಾತ್ ಚುನಾವಣೆ ಸೇರಿದಂತೆ ಈಶಾನ್ಯ, ಪೂರ್ವ ಮತ್ತು ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಅವರು ಕಮಲ ಅರಳುವಂತೆ ಮಾಡಿದ್ದಾರೆ. ಪಕ್ಷದ ಭದ್ರಕೋಟೆಯಲ್ಲದ ಜಾಗದಲ್ಲೂ ಬಿಜೆಪಿಗೆ ಅಸಾಧಾರಣ ಗೆಲುವು ದೊರಕಿಸಲು ಅಮಿತ್ ಶಾ ಶ್ರಮಿಸಿದ್ದಾರೆ.
ಅಮಿತ್ ಶಾ ತಮ್ಮ ಸಂಘಟನಾ ಚಾತುರ್ಯಯತೆ, ಚುನಾವಣಾ ಕೌಶಲ್ಯ ಹಾಗು ಪ್ರಧಾನಿ ಮೋದಿಯವರ ಜನಪ್ರಿಯತೆ
ಆಧಾರದ ಪಕ್ಷದ ಗೆಲುವಿಗೆ ರಣತಂತ್ರ ಹೆಣೆದು ಇತಿಹಾಸ ಸೃಷ್ಟಿಸುತ್ತಿದ್ದಾರೆ. ಅಮಿತ್ ಶಾ ಕೇಂದ್ರ ಗೃಹ ಸಚಿವರಾದ ನಂತರದಲ್ಲೂ ಸಂಘಟನಾ ನಿರ್ಧಾರಗಳು ಮತ್ತು ಚುನಾವಣಾ ಕಾರ್ಯತಂತ್ರದಲ್ಲಿ ನಿರಂತರವಾಗಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ೨೦೨೧ ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಇದಕ್ಕೆ ಪ್ರಮುಖ ಸಾಕ್ಷಿಯಾಗಿತ್ತು. ತೀವ್ರ ಜಿzಜಿದ್ದಿನಿಂದ ಕೂಡಿದ್ದ ೨೦೨೧ ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ೭೭ ಸ್ಥಾನ ಗೆಲ್ಲಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ೨೦೧೬ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ ೧೦ರಷ್ಟು ಮತ ಪಡೆದಿದ್ದ ಬಿಜೆಪಿ ಪಕ್ಷ ಕೇವಲ ಸ್ಥಾನ ಗೆದ್ದಿತ್ತು.
ಆದರೆ 2021ರಲ್ಲಿ ಅಮಿತ್ ಶಾ ಸಾರಥ್ಯದಲ್ಲಿ ಶೇಕಡಾ ೩೮ರಷ್ಟು ಮತ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಹಾಗೇಯೇ 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಪ್ರಚಂಡ ಗೆಲುವು ಪಡೆಯುವಲ್ಲಿ
ಅಮಿತ್ ಶಾ ಅವರ ಪಾತ್ರ ಪ್ರಮುಖವಾದದ್ದು. ಅಮಿತ್ ಶಾ ಅವರ ಚುನಾವಣಾ ತಂತ್ರಗಾರಿಕೆಯ ಪ್ರಮುಖ ಭಾಗವೆಂದರೆ ಎಲ್ಲಾ ಹಂತದಲ್ಲು ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿ ಪಕ್ಷ ಸಂಘಟನೆ ಮಾಡುತ್ತಾರೆ. ಬೂತ್ನಿಂದ ಹಿಡಿದು ಉತ್ತರ ಕರ್ನಾಟಕದ ಬಿಜೆಪಿ ಭದ್ರಕೋಟೆಯವರೆಗೂ ಕರ್ನಾಟಕದಲ್ಲಿ ಈಗಾಗಲೆ ತಮ್ಮ ಚುನಾವಣಾ ತಂತ್ರಗಾರಿಕೆ ಆರಂಭಿಸಿದ್ದಾರೆ.
ಈ ರೀತಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡುವ ಮೂಲಕ ಭಿನ್ನಾಭಿಪ್ರಾಯಕ್ಕೆ ಪರಿಹಾರ ಕಂಡುಕೊಳ್ಳಬಹುದು. ಇದರ ಜತೆಗೆ ಪಕ್ಷದ ಕಾರ್ಯಕರ್ತರನ್ನು ಒಂದೇ ಧ್ಯೇಯದಲ್ಲಿ ಸಂಘಟಿಸುವುದು ಸಾಧ್ಯವಾಗುತ್ತದೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತ ರ ಜತೆ ಸಭೆ ನಡೆಸುವುದರಿಂದ ಪಕ್ಷದೊಳಗಿನ ಆಂತರಿಕ ಸಮಸ್ಯೆಗಳು ದೂರವಾಗಿವೆ. ಜತೆಗೆ ಮತದಾರರನ್ನು ಅಭಿವೃದ್ಧಿ ಆಧಾರದಲ್ಲಿ ಸೆಳೆಯುವುದು ಸಾಧ್ಯ. ಹೀಗೆ ಎಲ್ಲ ಪಕ್ಷದ ಕಾರ್ಯಕರ್ತರನ್ನು ಒಂದೇ ವೇದಿಕೆಯಲ್ಲಿ ಕರೆತರುವಲ್ಲಿ ಸಂಘಟನಾ ಮಾಂತ್ರಿಕ ಅಮಿತ್ ಶಾ ಪ್ರಮುಖ ಪಾತ್ರ ವಹಿಸಿzರೆ ಎನ್ನಬಹುದು.
2022ರ ಗುಜರಾತ್ ಚುನಾವಣೆ ಭಾರತದ ಇತಿಹಾಸದ ಒಂದು ಹೆಗ್ಗುರುತಾಗಿದೆ. ರಾಜಕೀಯ ಪಂಡಿತರು ಹಾಗೂ ಬಿಜೆಪಿ
ಪಕ್ಷದೊಳಗಿನ ಒಂದು ವಿಭಾಗ ಈ ಫಲಿತಾಂಶದಿಂದ ಅಚ್ಚರಿಗೊಂಡಿದೆ. 2022ರ ಗುಜರಾತ್ ಚುನಾವಣೆಯಲ್ಲಿ 182 ಸ್ಥಾನಗಳ ಪೈಕಿ 156 ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಬೀಗಿದೆ. ಹೀಗೆ ಗುಜರಾತ್ ಚುನಾವಣೆ ಫಲಿತಾಂಶವನ್ನು ನೋಡಿ ಹೇಳುವುದಾದರೆ ಪ್ರಧಾನಿ ಮೋದಿ ಹಾಗು ಅಮಿತ್ ಶಾ ಜೋಡಿಯ ಸಾರಥ್ಯದಲ್ಲಿ ಬಿಜೆಪಿಗೆ ಕರ್ನಾಟಕದಲ್ಲಿ ಮತ್ತೊಂದು ಐತಿಹಾಸಿಕ ಗೆಲುವು ಸಿಗುವುದು ಸುಲಭವಲ್ಲದಿದ್ದರೂ ಅಸಾಧ್ಯವೇನು ಅಲ್ಲ. ಈಗಾಗಲೇ ಅಮಿತ್ ಶಾ ತಮ್ಮ ಮೊದಲ ಭೇಟಿಯ ಕರ್ನಾಟಕ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು, ಕರ್ನಾಟಕದಲ್ಲಿ ಬಿಜೆಪಿ ಐತಿಹಾಸಿಕ ಗೆಲುವನ್ನು ಕಾಲವೆ
ನಿರ್ಣಯಿಸಲಿದೆ.