Saturday, 23rd November 2024

ಬೂತ್ ಗಟ್ಟಿಗೊಳಿಸಲು ಕೋಟ ಶ್ರೀನಿವಾಸ ಪೂಜಾರಿ ಕರೆ

ಇಂಡಿ: ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಪಡಿಸಲು ರಾಜ್ಯಮಟ್ಟದಲ್ಲಿ ಜ,೨ರಿಂದ ೧೨ರವರೆಗೆ ಹಮ್ಮಿಕೊಂಡಿರುವ ಅಭಿಯಾನದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಿ ಭೂತ್ ಮಟ್ಟದಲ್ಲಿ ಗಟ್ಟಿಗೊಳಿಸಿ ೨೦೨೩ರಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯುವಂತೆ ಮಾಡೋಣ ಎಂದು ಸಮಾಜ ಕಲ್ಯಾಣ ಸಚಿವ ಕೊಟಶ್ರೀನಿವಾಸ ಪೂಜಾರ ಕಾರ್ಯಕರ್ತರಿಗೆ ಮುಖಂಡರಿಗೆ ಮನವಿ ಮಾಡಿದರು.

ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೆ ಜೀವಾಳ ಪ್ರತಿ ಗ್ರಾಮೀಣ ಭಾಗಗಳಲ್ಲಿ ಕಾರ್ಯಕರ್ತರು ಮುಖಂಡರು ಮನೆ ಮನೆ ತಿರುಗಾಡಿ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾಡಿದ ಬಡವರ, ದೀನದುರ್ಬಲರ, ಜನಪರ ಕಾರ್ಯ ಹಾಗೂ ಕರ್ನಾಟಕ ರಾಜ್ಯದ ಬಿಜೆಪಿ ಸರಕಾರದ ಮುಖ್ಯ ಮಂತ್ರಿ ಬಸವರಾಜ ಬೋಮ್ಮಾಯಿ ಇಲ್ಲಿಯವರೆಗೆ ದಲಿತ ಹಿಂದುಳಿದವರ ಅಭಿವೃದ್ದಿ ಕೆಲಸಗಳು, ಪ್ರತ್ಯೇಕ ನಿಗಮಗಳು ಹಾಗೂ ರಾಜ್ಯದಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದ ಕುಟುಂಬಗಳಿಗೆ ಸುಮಾರು ರಾಜ್ಯದ ೨೩ ಲಕ್ಷ ಕುಟುಂಬಗಳಿಗೆ ಶೆ.೭೫ ಪ್ರತಿಶತ ಉಚಿತ ವಿದ್ಯುತ ನೀಡುವ ಯೋಜನೆ ಮಾಡಲಾಗಿದ್ದು ಇದರಿಂದ ಸರಕಾರಕ್ಕೆ ಪ್ರತಿವರ್ಷಕ್ಕೆ ೮ ನೂರು ಕೋಟಿ ಖರ್ಚು ತಗಲುತ್ತದೆ.

ಕರ್ನಾಟಕದಲ್ಲಿ ಇಂದಿನ ಬಿಜೆಪಿ ಸರಕಾರ ಸಾಕಷ್ಟು ಜನಪರ ಯೋಜನೆಗಳು ಮಾಡಿರುವದರಿಂದ ಇಂತಹ ಕೆಲಸ ಕಾರ್ಯಗಳು ಸಾಮಾನ್ಯ ಜನರಿಗೆ ತಿಳಿಸಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಕಾರಕ್ಕೆ ಬರುವಂತೆ ಮಾಡಬೇಕು. ಭೂತ ವಿಜಯ ಅಭಿಯಾನ ಅತ್ಯಂತ ಸಂಘಟನಾತ್ಮ ಅಭಿಯಾನವಾಗಿದೆ ಪ್ರತಿ ಗ್ರಾಮೀಣ ಭಾಗಗಳಲ್ಲಿ ಕಾರ್ಯಕರ್ತರು,ಮುಖಂಡರು ಹೋಗಿ ಪ್ರತಿ ಮನೆ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸಿ ವಿಜಯ ದುದುಂಬಿ ಮೋಳಗಿಸಬೇಕು. ಬರುವ ೨೦೨೩ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತ ಸಿದ್ದ ಎಂದರು.

ನ್ಯಾಯ ಮೋರ್ತಿ ಸದಾಶಿವ ಆಯೋಗದ ಬಗ್ಗೆ ನಿಮ್ಮ ಅಭಿಪ್ರಾಯವೇನು ? ಪತ್ರಕರ್ತರು ಪ್ರಶ್ನಿಸಿದಾಗ ಇದಕ್ಕೆ ಉತ್ತರಿಸಿದ ಸಚಿವರು ಜನಸಂಖ್ಯೆಗನುಗುಣವಾಗಿ ಮೀಸಲಾತಿ ಬೇಡಿಕೆ ಇದೆ. ನೋಡಿ ಕೆನೆಪದರು ಎಂಬ ವಿಚಾರ ಸಮುದಾಯ ಬೇಡಿಕೆ ಹೀಗಾಗಿ ಮುಖ್ಯ ಮಂತ್ರಿ ಸಚಿವ ಸಂಪುಟಕ್ಕೆ ಬಿಟ್ಟ ವಿಚಾರ ಎಂದು ಜಾರಿಕೊಂಡರು.

೨೦೨೩ ಅಧಿಕಾರಕ್ಕೆ ಬರುವುದಾಗಿ ಹೇಳಿ ರುವ ನೀವು ೪೦ ಪರ್ಸೆಂಟೇಜ್ ಬಿಜೆಪಿ ಸರಕಾರ ಎಂದು ಕಾಂಗ್ರೆಸಿಗೆ ಅಸ್ತçವಾಗಿದೆ ಹೇಗೆ ಎಂದು ಮರುಪ್ರಶ್ನೆ ಮಾಡಿದಾಗ ಸಚಿವರು ನಾನು ಸಮಾಜ ಕಲ್ಯಾಣ ಸಚಿವ ನನ್ನ ಬಗ್ಗೆ ಹೇಳಿ ? ವಿರೋಧ ಪಕ್ಷ ಕೆಲಸ ಹಾಗಾದೆ ವಿಧಾನಸೌಧಾದಲ್ಲಿ ೧೦ ಲಕ್ಷ ಎಲ್ಲಿಂದ ಬಂತು ಎಂದು ಪತ್ರಕರ್ತರು ಕೇಳಿದಾಗ ತನಿಖೆ ನಡೇಯುತ್ತಿದೆ ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದಯಾಸಾಗರ ಪಾಟೀಲ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ರಾಜ್ಯ ಕರ‍್ಯ ಕಾರಣಿ ಸದಸ್ಯ ಶೀಲವಂತ ಉಮರಾಣಿ, ಶಂಕರಗೌಡ ಪಾಟೀಲ ಡೊಮನ್ನಾಳ, ವಿವೇಕ ಡಬ್ಬಿ, ಶ್ರೀಶೈಲಗೌಡ ಬಿರಾದಾರ, ಸಿದ್ದಲಿಂಗ ಹಂಜಗಿ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕೀವುಡೆ, ರಾಜಕುಮಾರ ಸಗಾಯಿ ಪತ್ರಿಕಾಗೋಷ್ಠಿಯಲ್ಲಿದ್ದರು.