ತುರುವೇಕೆರೆ: ತುರುವೇಕೆರೆ.ತಾಲ್ಲೂಕಿನ ಆನೆಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೋಮೇನಹಳ್ಳಿ, ಆನೆಕೆರೆ ಮತ್ತು ಆನೆಕೆರೆ ಪಾಳ್ಯದಲ್ಲಿ ಶಾಸಕ ಮಸಾಲಾ ಜಯರಾಮ್ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಕಾಮಗಾರಿಗಳಿಗೆ ಕ್ರಷರ್ ಗಳ ಮುಷ್ಕರದಿಂದಾಗಿ ಕಚ್ಚಾ ವಸ್ತುಗಳು ಲಭ್ಯವಿಲ್ಲದ ಕಾರಣ ಕಾಮಗಾರಿಗಳು ವಿಳಂಬವಾಗಿವೆ ಆದರಿಂದ ತಡವಾಗಿ ಚಾಲನೆ ಕೊಟ್ಟಿದ್ದೇವೆ ಇನ್ನು ೪೦ ಕೋಟಿ ರೂಗಳ ಕಾಮಗಾರಿಗಳು ಬಾಕಿಯಿವೆ ಇನ್ನು ಒಂದು ತಿಂಗಳ ಒಳಗಾಗಿ ಬಾಕಿ ಇರುವ ಕಾಮಗಾರಿಗಳಿಗೆ ಚಾಲನೆ ಕೊಡಲಾಗುವುದು ಇನ್ನು ಎರಡು ತಿಂಗಳ ಒಳಗಾಗಿ ಎಲ್ಲ ೪೦೦ ಹಳ್ಳಿಗಳಿಗೆ ಸಿ.ಸಿ. ರಸ್ತೆ ಕಾಮಗಾರಿಯನ್ನು ಮಾಡಿ ಮುಗಿಸಲಾಗುವುದು ಈಗಾಗಲೇ ಕಾಮಗಾರಿಗಳಿಗೆ ವೇಗವನ್ನು ಹೆಚ್ಚಿಸಿ ಎಂದು ಗುತ್ತಿಗೆ ದಾರರುಗಳಿಗೆ ತಾಖೀತು ಮಾಡಿದ್ದೇನೆ ಫೆಬ್ರವರಿ ಒಳಗಾಗಿ ಕಾಮಗಾರಿಗಳನ್ನು ಮುಗಿಸ ಲಾಗುವುದು ಎಂದು ಹೇಳಿದರು.
ಸೋಮೇನಹಳ್ಳಿ ಗೆಟ್ ನಿಂದ ಮಲ್ಲಾಘಟ್ಟ ಆನೆಕೆರೆ ನಾಯಕನಘಟ್ಟ ರಸ್ತೆ ತುಂಬಾ ಹಾಳಾಗಿರುವುದರಿಂದ ಮತ್ತು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ರಸ್ತೆಯನ್ನು ಅಭಿವೃದ್ಧಿ ಪಡಿಸಲು ೭.೫ ಕೋಟಿ ರೂಗಳು ಮಂಜೂರಾಗಿದ್ದು ಅತಿಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ತಾಲ್ಲೂಕಿಗೆ ಸುಮಾರು ೩೮ ಕೋಟಿ ರೂಗಳು ಅಭಿವೃದ್ಧಿ ಕರ್ಯಕ್ಕೆ ಮಂಜೂರಾಗಿದೆ.
ಈ ವಾರದಲ್ಲಿ ಸುಮಾರು ೧೦೦ ಕೋಟಿ ಅನುದಾನ ಬಿಡುಗಡೆಯಾಗಿದೆ ಏತ ನೀರಾವರಿ ಸೇರಿದಂತೆ ಈ ತಿಂಗಳ ಕೊನೆಯ ವಾರ ದಲ್ಲಿ ಮುಖ್ಯ ಮಂತ್ರಿಗಳು ಕ್ಷೇತ್ರಕ್ಕೆ ಬರುವ ಸಂಭವವಿದೆ ಮುಂದಿನ ತಿಂಗಳು ೧೩ ರಂದು ಮಾನ್ಯ ಪ್ರದಾನ ಮಂತ್ರಿಗಳು ಜಿಲ್ಲೆಗೆ ಆಗಮಿಸುವ ಕರ್ಯಕ್ರಮವಿರುವುದರಿಂದ ಕರ್ಯಕ್ರಮದಲ್ಲಿ ಬದಲಾವಣೆಗಳಾಗಬಹುದು ಆನೆಕೆರೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಇಂದು ೧ಕೋಟಿ ರೂಗಳ ಗುದ್ದಲಿ ಪೂಜೆಯನ್ನು ಮಾಡಲಾಗಿದೆ ಇನ್ನು ಕಾಮಗಾರಿ ಬಾಕಿ ಇವೆ ಅವುಗಳಿಗೂ ಸಹ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದರು.
ಈ ಸಂರ್ಭದಲ್ಲಿ ಗ್ರಾ. ಪಂ. ಸದಸ್ಯ ರಂಗನಾಥ್, ಮುಖಂಡರಾದ ಬಗರಹುಕುಂ ಕಮಿಟಿ ಸದಸ್ಯ ಜಗದೀಶ್, ಕೊಂಡಜ್ಜಿ ವಿಶ್ವನಾಥ್, ಕಾಳಂಜಿಹಳ್ಳಿ ಸೋಮಣ್ಣ, ವಿ.ಬಿ. ಸುರೇಶ್, ಶಂಕರಣ್ಣ,ಹುಚ್ಚೇಗೌಡ, ಯೋಗೀಶ್, ರಾಜಶೇಖರ್, ಮಧು. ರಾಮಕೃಷ್ಣಯ್ಯ, ರಘು, ರಂಗೇಗೌಡ ಮಾವಿನಹಳ್ಳಿ ಕುಮಾರ್ ಚೂಡಾಮಣಿ ಮತ್ತಿತರಿದ್ದರು.
Read E-Paper click here