Thursday, 9th January 2025

ಕೊಲೆ ಯತ್ನ ಪ್ರಕರಣ: ಲೋಕಸಭೆ ಸದಸ್ಯತ್ವದಿಂದ ಸಂಸದ ಫೈಜಲ್ ಅನರ್ಹ

ತಿರುವನಂತಪುರಂ/ನವದೆಹಲಿ: ಕೊಲೆ ಯತ್ನ ಪ್ರಕರಣದಲ್ಲಿ ನ್ಯಾಯಾ ಲಯವು ಅಪರಾಧಿ ಎಂದು ಆದೇಶಿಸಿರುವುದರಿಂದ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಅನರ್ಹಗೊಳಿಸಿ ಲೋಕಸಭೆಯ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ಲಕ್ಷದ್ವೀಪದ ಕವರಟ್ಟಿಯ ಸೆಷನ್ಸ್ ನ್ಯಾಯಾಲಯವು ಶಿಕ್ಷೆ ವಿಸಿದ ಜನವರಿ 11 ರಿಂದ ಫೈಝಲ್ ಅವರನ್ನು ಲೋಕಸಭೆಯ ಸದಸ್ಯತ್ವದಿಂದ ಅನರ್ಹ ಗೊಳಿಸಲಾಗಿದೆ.

ಕಳೆದ 2009 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪಿ ಎಂ ಸಯೀದ್ ಅವರ ಅಳಿಯ ಮೊಹಮ್ಮದ್ ಸಾಲಿಹ್ ಅವರನ್ನು ಕೊಲ್ಲಲು ಪ್ರಯತ್ನ ಪ್ರಕರಣ ಸುದೀರ್ಘ ವಿಚಾರಣೆ ನಡೆದು ಕವರಟ್ಟಿ ಸೆಷನ್ಸ ನ್ಯಾಯಾಲಯವು ಫೈಝಲ್ ಸೇರಿ ದಂತೆ ನಾಲ್ವರು ತಪ್ಪಿತಸ್ಥರೆಂದು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಗಳಿಗೆ 10 ವರ್ಷಗಳ ಜೈಲು ಶಿಕ್ಷೆ ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.

Read E-Paper click here