Wednesday, 30th October 2024

ನೀರಿನ ಬಕೆಟ್‌ನಲ್ಲಿ ಮುಳುಗಿಸಿ ಮಗುವಿನ ಹತ್ಯೆ

ಕಡೂರಿನಲ್ಲಿ ಪಾಪಿ ತಂದೆಯಿಂದಲೇ ಕೃತ್ಯ

ಕಡೂರು: ಎಂಟು ತಿಂಗಳ ಹೆಣ್ಣು ಮಗುವನ್ನ ನೀರಿನ ಬಕೆಟ್‌ನಲ್ಲಿ ಮುಳುಗಿಸಿ ಹತ್ಯೆ ಮಾಡಲಾಗಿದೆ.

ಜನ್ಮ ಕೊಟ್ಟ ತಂದೆಯೇ ಈ ಕೃತ್ಯ ಎಸಗಿದ್ದಾನೆ. ಉಮಾಶಂಕರ್ ಕೊಲೆ ಆರೋಪಿ. ಹೆಣ್ಣು ಮಗು ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾನೆ. ತನ್ನ ಪತಿಯೇ ಕೊಲೆಗಾರನೆಂದು ಪತ್ನಿ ಆರೋಪ ಮಾಡಿದ್ದಾಳೆ.

ಕಡೂರಿನ ದೊಡ್ಡಪೇಟೆ ಬಡಾವಣೆಯಲ್ಲಿ ಘಟನೆ ನಡೆದಿದೆ. ಕಡೂರು ಪೊಲೀಸರು ಆರೋಪಿ ಉಮಾಶಂಕರ್ ಬಂಧಿಸಿದ್ದಾರೆ.