Thursday, 28th November 2024

ಅಷ್ಟಕ್ಕೂ ನಾವು ನಿತ್ಯ ಸೇವಿಸುವ ಆಹಾರ ಹೇಗಿರಬೇಕು ?

ಸ್ವಾಸ್ಥ್ಯ ಸಂಪದ

Yoganna55@gmail.com

ಇದರ ಹೀರಿಕೆ ಮತ್ತು ಚಯಾಪಚಯ ಕ್ರಿಯೆಯನ್ನು ಕರುಳಿನಲ್ಲಿಯೇ ಉತ್ಪತ್ತಿಯಾಗುವ ಇನ್‌ಕ್ರಿಟಿನ್ ಹಾರ್ಮೋನ್, ಪ್ಯಾಂಕ್ರಿಯಾಸ್ ಗ್ರಂಥಿಯಲ್ಲಿ
ಉತ್ಪತ್ತಿಯಾಗುವ ಇನ್ಸ್ಯುಲಿನ್ ಮತ್ತು ಗ್ಲುಕೋಗಾನ್‌ಗಳು ನಿಯಂತ್ರಿಸುತ್ತವೆ. ಸಣ್ಣ ಕರುಳಿನಲ್ಲಿ ಗ್ಲುಕೋಸಿನ ಪ್ರಮಾಣ ಹೆಚ್ಚಾಗಿ ರಕ್ತ ಗ್ಲುಕೋಸ್ ಹೆಚ್ಚಾಗುತ್ತಿದ್ದಂತೆ

ಅಕ್ಕಿ, ರಾಗಿ, ಗೋಧಿ, ಜೋಳ, ಸಕ್ಕರೆ, ಬೆಲ್ಲ, ಆಲೂಗೆಡ್ಡೆ, ಹಾಲು, ಹಣ್ಣುಗಳು, ಸಿರಿಧಾನ್ಯಗಳು ಇತ್ಯಾದಿಗಳು ದೇಹಕ್ಕೆ ಶಕ್ತಿದಾಯಕ ಕಾರ್ಬೋ ಹೈಡ್ರೇಟ್‌ಗಳನ್ನು ಪೂರೈಸುವ ಪ್ರಧಾನ ಆಹಾರ ಪದಾರ್ಥಗಳು. ಅಕ್ಕಿ, ರಾಗಿ, ಗೋಧಿ, ಜೋಳಗಳಲ್ಲಿ ಬಹು ಸ್ಯಾಕರೈಡ್‌ಗಳನ್ನುಳ್ಳ ಸ್ಟಾರ್ಚ್ ರೂಪ ದಲ್ಲಿ ಕಾರ್ಬೋಹೈಡ್ರೇಟ್ ಇರುತ್ತದೆ. ಸ್ಟಾರ್ಚ್ ಜೀರ್ಣಾಂಗ ವ್ಯವಸ್ಥೆಯಲ್ಲಿ ಗ್ಲುಕೋಸ್ ಆಗಿ ಅಂತಿಮವಾಗಿ ಪರಿವರ್ತನೆ ಹೊಂದುತ್ತದೆ.

ಸಕ್ಕರೆಯಲ್ಲಿರುವ ಗ್ಲುಕೋಸ್ ಮತ್ತು ಫ್ರಕ್ಟೋಸ್‌ಗಳು ಜೀರ್ಣಾಂಗ ವ್ಯವಸ್ಥೆಯಲ್ಲಿ ಪ್ರತ್ಯೇಕ ಗೊಳ್ಳುತ್ತವೆ. ಮಾಗಿದ ಬಹುಪಾಲು ಹಣ್ಣುಗಳಲ್ಲಿ ಫ್ರಕ್ಟೋಸ್ ಇದ್ದು, ಇದು ಸಣ್ಣ ಕರುಳಿನಲ್ಲಿ ರಕ್ತಕ್ಕೆ ರವಾನೆಯಾಗುತ್ತದೆ. ಕೆಲವು ಹಣ್ಣುಗಳಲ್ಲಿರುವ ಮಾಲ್ಟೋಸ್‌ನ ಗ್ಲುಕೋಸ್ ಕಣಗಳು ಜೀರ್ಣಾಂಗ ವ್ಯವಸ್ಥೆಯಲ್ಲಿ ಪ್ರತ್ಯೇಕಗೊಳ್ಳುತ್ತವೆ. ಹಾಲಿನಲ್ಲಿ ದ್ವಿ ಸ್ಯಾಕರೈಡ್ ಆದ ಲ್ಯಾಕ್ಟೋಸ್ ಇದ್ದು, ಇದು ಜೀರ್ಣಾಂಗದಲ್ಲಿ ಗ್ಲುಕೋಸ್ ಮತ್ತು ಗ್ಯಾಲಕ್ಟೋಸ್ ಆಗಿ ದ್ವಿಭಜನೆಯಾಗಿ ಜೀರ್ಣವಾಗುತ್ತದೆ.

ಸೇವಿಸಿದ ಯಾವುದೇ ಕಾರ್ಬೋಹೈಡ್ರೇಟ್ ಸಣ್ಣ ಕರುಳಿನಲ್ಲಿ ಅಂತಿಮವಾಗಿ ಗ್ಲುಕೋಸ್, ಫ್ರಕ್ಟೋಸ್ ಅಥವಾ ಗ್ಯಾಲಕ್ಟೋಸ್‌ಗಳಾಗಿ ವಿಭಜನೆಯಾಗಿ ರಕ್ತಕ್ಕೆ ಹೀರಲ್ಪಡುತ್ತವೆ. ಆಹಾರ ಪದಾರ್ಥಗಳಲ್ಲಿರುವ ದ್ವಿ ಮತ್ತು ಬಹು ಸ್ಯಾಕರೈಡ್‌ಗಳನ್ನುಳ್ಳ ಕಾರ್ಬೋಹೈಡ್ರೇಟ್‌ಗಳು ಜೀರ್ಣಾಂಗ ವ್ಯವಸ್ಥೆಯಲ್ಲಿ ನಾನಾ ಕಿಣ್ವಗಳ ಪರಿಣಾಮದಿಂದ ಅಂತಿಮವಾಗಿ ಗ್ಲುಕೋಸ್ ಅಥವಾ ಮತ್ತು ಫ್ರಕ್ಟೋಸ್ ಹಾಗೂ ಗ್ಯಾಲಕ್ಟೋಸ್ ಆಗಿ ಪರಿವರ್ತನೆ ಹೊಂದಿ ರಕ್ತಕ್ಕೆ ಹೀರಲ್ಪಡುತ್ತದೆ. ಆಹಾರವನ್ನು ಬಾಯಿಯಲ್ಲಿ ಅಗಿಯುವಾಗಲೇ ಜೊಲ್ಲುರಸದಲ್ಲಿರುವ ಪ್ಟೆ ಲಿನ್ ಕಿಣ್ವ ಸಂಯುಕ್ತ ಕಾರ್ಬೋಹೈಡ್ರೇಟ್‌ಗಳನ್ನು ಸಾಮಾನ್ಯ ಸ್ಯಾಕೋರೈಡ್ ಗಳನ್ನಾಗಿ ಪರಿವರ್ತಿಸುವ ಕಾರ್ಯ ಆರಂಭವಾಗುತ್ತದೆ.

ಆಹಾರ ಜಠರ ಪರಿವರ್ತಿಸಿದ ಮೇಲೆ ಜಠರ ರಸದೊಡನೆ ಮಿಶ್ರಿತವಾಗಿ ಜಠರದ ಸ್ನಾಯುಗಳ ಸಂಕುಚಿತದಿಂದಾಗಿ ಆಹಾರ ಅರೆಯಲ್ಪಟ್ಟು ಅರೆ ಘನ ರೂಪ ತಾಳಿದ ಕೈಮ್ ಆಗಿ ಪರಿವರ್ತನೆಯಾಗುತ್ತದೆ. ಜಠರ ರಸದಲ್ಲಿರುವ ಅಮೈಲೈಸ್ ಸಂಯುಕ್ತ ಕಾರ್ಬೋಹೈಡ್ರೇಟ್‌ಗಳನ್ನು ಮತ್ತಷ್ಟು
ದ್ವಿಭಜನೆ ಮಾಡುತ್ತದೆ. ಜಠರದಿಂದ ಕರುಳಿಗೆ ಬಂದ ಕೈಮ್(ಪರಿವರ್ತಿತ ಆಹಾರ) ಪ್ಯಾಂಕ್ರಿಯಾಸ್ ಗ್ರಂಥಿಯ ಮತ್ತು ಸಣ್ಣ ಕರುಳಿನ ಸುರಿಕೆಗಳ ಲ್ಲಿರುವ ಅಮೈಲೈಸ್ ಬಹು ಸಾಕರೈಡ್‌ಗಳನ್ನು ದ್ವಿ ಸಾಕರೈಡ್ ಗಳನ್ನಾಗಿ (ಮಾಲ್ಟೋಸ್, ಸಕ್ಕರೆ ಮತ್ತು ಲ್ಯಾಕ್ಟೋಸ್) ಪರಿವರ್ತಿಸುತ್ತದೆ. ಕರುಳಿನ ರಸದಲ್ಲಿರುವ ಸುಕ್ರೇಸ್, ಮಾಲ್ಟೀಸ್ ಮತ್ತು ಲ್ಯಾಕ್ಟೀಸ್ ಕಿಣ್ವಗಳು ದ್ವಿ ಸಾಕರೈಡ್ ಗಳನ್ನು ಗ್ಲುಕೋಸ್, ಫ್ರಕ್ಟೋಸ್, ಗ್ಯಾಲಕ್ಟೋಸ್ ಗಳನ್ನಾಗಿ ಪರಿವರ್ತಿಸುತ್ತವೆ.

ಅಂತಿಮವಾಗಿ ಕಾರ್ಬೋಹೈಡ್ರೇಟ್‌ಗಳು ಗ್ಲುಕೋಸ್, ಗ್ಯಾಲಕ್ಟೋಸ್ ಅಥವಾ ಫ್ರಕ್ಟೋಸ್‌ಗಳಾಗಿ ಪರಿವರ್ತನೆ ಹೊಂದಿ ಕರುಳಿನಿಂದ ರಕ್ತಕ್ಕೆ ಹೀರಿಕೆಯಾಗುತ್ತವೆ. ಫ್ರಕ್ಟೋಸ್ ಅತ್ಯಂತ ಸಿಹಿ ವಸ್ತುವಾಗಿದ್ದು, ಇದನ್ನು ಕೃತಕ ಆಹಾರ ಪದಾರ್ಥಗಳಲ್ಲಿ ಸಿಹಿಕಾರಕವಾಗಿ ಉಪಯೋಗಿಸ ಲಾಗುತ್ತದೆ. ಇದನ್ನು ಹೆಚ್ಚಾಗಿ ಸೇವಿಸುವುದರಿಂದ ಸ್ಥೂಲಕಾಯ, ಈಲಿಯ ಕಾಯಿಲೆಗಳು ಮತ್ತು ಕ್ಯಾನ್ಸರ್ ಸಂಭವ ಹೆಚ್ಚಾಗುತ್ತವೆ. ಜೀರ್ಣವಾಗದ ಕಾರ್ಬೋಹೈಡ್ರೇಟ್‌ಗಳಾದ ಸೆಲ್ಯೂಲೋಸ್ ಇತ್ಯಾದಿಗಳು ಹಾಗೆ ಉಳಿದು ಮಲದಲ್ಲಿ ವಿಸರ್ಜನೆಯಾಗುತ್ತದೆ. ಮಲದ ಗಾತ್ರಕ್ಕೆ ಇವು ಕಾರಣ ವಾಗುತ್ತವೆ. ದೊಡ್ಡ ಕರುಳಿನಲ್ಲಿರುವ ಕೆಲವು ಸಹಜ ಬ್ಯಾಕ್ಟೀರಿಯಾಗಳು ಇದನ್ನು ಫಾರ್ಮಂಟೇಷನ್‌ಗೀಡು ಮಾಡಿ ಅನಿಲಗಳ ಉತ್ಪತ್ತಿಗೆ ಕಾರಣ ವಾಗುತ್ತವೆ.

ಚಯಾಪಚಯ ಕ್ರಿಯೆ: ಸಣ್ಣ ಕರುಳಿನಲ್ಲಿ ಕಾರ್ಬೋಹೈಡ್ರೇಟ್‌ಗಳು ಅಂತಿಮವಾಗಿ ಗ್ಲುಕೋಸ್, ಫ್ರಕ್ಟೋಸ್ ಮತ್ತು ಗ್ಯಾಲಕ್ಟೋಸ್‌ಗಳಾಗಿ
ಪರಿವರ್ತನೆ ಹೊಂದಿ ಅವು ರಕ್ತಕ್ಕೆ ಹೀರಿಕೆಯಾಗುತ್ತವೆ. ದೇಹದಲ್ಲಿ ಫ್ರಕ್ಟೋಸ್ ಮತ್ತು ಗ್ಯಾಲಕ್ಟೋಸ್ ಗಳನ್ನು ನೇರವಾಗಿ ಶಕ್ತಿಗಾಗಿ ಉಪಯೋಗಿ ಸುವ ವ್ಯವಸ್ಥೆ ಲಭ್ಯವಿಲ್ಲ.

ಫ್ರಕ್ಟೋಸ್ ಈಲಿಯಲ್ಲಿ ಗ್ಲುಕೋಸಾಗಿ ಅನಂತರ ಗ್ಲೈಕೋಜನ್ ಹಾಗೂ ಜಿಡ್ಡಿನ ಆಮ್ಲಗಳಾಗಿ ಪರಿವರ್ತನೆ ಹೊಂದಿ ಉಪಯೋಗಿಸಲ್ಪಡುತ್ತದೆ. ಗ್ಯಾಲಕ್ಟೋಸ್ ದೇಹದಲ್ಲಿ ಹಸುಗೂಸುಗಳಲ್ಲಿ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇದೂ ಕೂಡ ಈಲಿಯಲ್ಲಿ ಗ್ಲುಕೋಸ್ ಆಗಿ
ಮತ್ತು ಗ್ಲೈಕೋಜನ್ ಆಗಿ ಪರಿವರ್ತನೆ ಹೊಂದುತ್ತದೆ.

ಗ್ಲುಕೋಸಿನ ನಿಯಂತ್ರಣ: ದೇಹ ಗ್ಲುಕೋಸ್ ಅನ್ನು ಶಕ್ತಿ ಉತ್ಪತ್ತಿಗಾಗಿ ಪ್ರಥಮ ಆದ್ಯತೆಯ ವಸ್ತುವನ್ನಾಗಿ ಬಳಕೆಮಾಡುವುದರಿಂದ ದೇಹದ ಬಹುಪಾಲು ಶಕ್ತಿಯ ಉತ್ಪತ್ತಿ ಗ್ಲುಕೋಸ್‌ನಿಂದ ಆಗುತ್ತದೆ. ಸೇವಿಸುವ ಕಾರ್ಬೋಹೈಡ್ರೇಟ್‌ಗಳಿಂದ ಹೆಚ್ಚಾಗಿ ಗ್ಲುಕೋಸ್ ಉತ್ಪತ್ತಿಯಾಗುತ್ತದೆ. ಇದರ ಹೀರಿಕೆ ಮತ್ತು ಚಯಾಪಚಯ ಕ್ರಿಯೆಯನ್ನು ಕರುಳಿ ನಲ್ಲಿಯೇ ಉತ್ಪತ್ತಿಯಾಗುವ ಇನ್‌ಕ್ರಿಟಿನ್ ಹಾರ್ಮೋನ್, ಪ್ಯಾಂಕ್ರಿಯಾಸ್ ಗ್ರಂಥಿಯಲ್ಲಿ
ಉತ್ಪತ್ತಿಯಾಗುವ ಇನ್ಸ್ಯುಲಿನ್ ಮತ್ತು ಗ್ಲುಕೋಗಾನ್‌ಗಳು ನಿಯಂತ್ರಿಸುತ್ತವೆ.

ಸಣ್ಣ ಕರುಳಿನಲ್ಲಿ ಗ್ಲುಕೋಸಿನ ಪ್ರಮಾಣ ಹೆಚ್ಚಾಗಿ ರಕ್ತ ಗ್ಲುಕೋಸ್ ಹೆಚ್ಚಾಗುತ್ತಿದ್ದಂತೆ ಇನ್‌ಕ್ರಿಟಿನ್ ಹಾರ್ಮೋನ್ ಉತ್ಪತ್ತಿಯಾಗಿ ಪ್ಯಾಂಕ್ರಿಯಾಸ್ ಗ್ರಂಥಿಯ ಬೀಟಾ ಜೀವಕೋಶಗಳನ್ನು ಪ್ರಚೋದಿಸಿ ಇನ್ಸ್ಯುಲಿನ್ ಉತ್ಪತ್ತಿ ಅಧಿಕವಾಗಿ ರಕ್ತದ ಗ್ಲುಕೋಸ್ ಜೀವಕೋಶಗಳಿಗೆ ವರ್ಗಾಯಿಸಲ್ಪಟ್ಟು ಆಹಾರದ ನಂತರ ಹೆಚ್ಚಾಗುವ ರಕ್ತ ಗ್ಲುಕೋಸ್ ನಿಯಂತ್ರಿತವಾಗುತ್ತದೆ. ಹಾಗೆಯೇ ಈ ಹಾರ್ಮೋನ್ ಪ್ಯಾಂಕ್ರಿಯಾಸ್ ಗ್ರಂಥಿಯ ಆಲಾ ಜೀವಕೋಶ ಗಳ ಮೇಲೆ ನಿಷ್ಕ್ರಿಯಕ ಪರಿಣಾಮ ಬೀರಿ ಗ್ಲುಕೋಗಾನ್ ಉತ್ಪತ್ತಿಯನ್ನು ಕಡಿಮೆಮಾಡಿ ಈಲಿಯಿಂದ ಅಧಿಕ ಗ್ಲುಕೋಸ್ ರಕ್ತಕ್ಕೆ ಬಿಡುಗಡೆಯಾಗದಂತೆ ತಡೆದು ಆಹಾರದ ನಂತರ ರಕ್ತದ ಗ್ಲುಕೋಸ್ ಮತ್ತಷ್ಟು ಜಾಸ್ತಿಯಾಗುವುದನ್ನು ನಿಯಂತ್ರಿಸುತ್ತದೆ.

ಆಹಾರೋತ್ತರದ ರಕ್ತ ಗ್ಲುಕೋಸ್ ಕಡಿಮೆಯಾಗುತ್ತಿದ್ದಂತೆ ಇನ್‌ಕ್ರಿಟಿನ್ ಪ್ರಮಾಣ ಕಡಿಮೆಯಾಗಿ ಇನ್ಸ್ಯುಲಿನ್ ಸುರಿಕೆ ಕಡಿಮೆಯಾಗಿ ರಕ್ತ ಗ್ಲುಕೋಸ್
ಅತ್ಯಂತ ಕಡಿಮೆಯಾಗದಂತೆ ನಿಯಂತ್ರಿತವಾಗುತ್ತದೆ. ಡೈಪೆಪ್ಟಿಡೈಲ್‌ಪೆಪ್ಟಿಡೇಸ್ ಕಿಣ್ವ(ಡಿ.ಪಿ.ಪಿಫ್೪) ಮತ್ತು ಗ್ಲುಕೋಗಾನ್‌ನಂತಹ ಪೆಪ್ಟೈಡ್ (ಜಿ.
ಎಲ್.ಪಿ-೧) ಕಿಣ್ವಗಳು ಇನ್‌ಕ್ರಿಟಿನ್‌ನನ್ನು ನಿಷ್ಕ್ರಿಯಗೊಳಿಸಿ ಅದರ ಕಾರ್ಯವನ್ನು ನಿಯಂತ್ರಿಸುತ್ತವೆ.

ಹೀಗೆ ರಕ್ತ ಗ್ಲುಕೋಸ್ ಪ್ರಮಾಣ, ಇನ್‌ಕ್ರಿಟಿನ್, ಇನ್ಸ್ಯುಲಿನ್, ಗ್ಲುಕೋಗಾನ್ ಮತ್ತು ಡೈಪೆಪ್ಟಿಡೈಲ್ ಪೆಪ್ಟಿಡೇಸ್ ಕಿಣ್ವಗಳ ಸಮಯೋಜಿತ ಸಂವೇದನಾ ಶೀಲತೆಯುಳ್ಳ ಸರಪಳಿಯಂತಿರುವ ಚಕ್ರದೋಪಾದಿಯ ಸಹಜ ಕ್ರಿಯೆಯಿಂದ ರಕ್ತ ಗ್ಲುಕೋಸ್ ಪ್ರಮಾಣ ಸದಾ ಕಾಲ ಸಹಜ ಗಡಿಯಲ್ಲಿ ನಿಯಂತ್ರಿತ ವಾಗುತ್ತದೆ. ರಕ್ತಗ್ಲುಕೋಸ್ ಸಹಜ ಪ್ರಮಾಣದಲ್ಲಿ ಅತ್ಯಂತ ಉಪಯುಕ್ತ ಮತ್ತು ಅತಿಯಾದಲ್ಲಿ ಅತ್ಯಂತ ಹಾನಿಕಾರಕವಾದುದರಿಂದ ಇದರ ರಕ್ತದ
ಪ್ರಮಾಣವನ್ನು ಸಹಜ ಗಡಿಯಲ್ಲಿಟ್ಟುಕೊಳ್ಳುವುದು ಅತ್ಯವಶ್ಯಕ. ರಕ್ತದಲ್ಲಿ ಇದರ ಸಹಜ ಪ್ರಮಾಣ ಆಹಾರ ಸೇವಿಸಿದ ಹನ್ನೆರಡು ಗಂಟೆಗಳ ನಂತರದ ( ಉಪವಾಸದ ರಕ್ತದ ಗ್ಲುಕೋಸ್ ಪ್ರಮಾಣ ೧೧೦ ಮಿ.ಗ್ರಾಂ/ ಡಿ.ಎಲ್. ಮೀರಬಾರದು ಮತ್ತು ಆಹಾರ ಸೇವಿಸಿದ ನಂತರದ ರಕ್ತ ಗ್ಲುಕೋಸ್
ಪ್ರಮಾಣ ೧೪೦-೧೫೦ ಮಿ.ಗ್ರಾಂ/ ಡಿ.ಎಲ್ ಮೀರಬಾರದು. ಈ ಗಡಿಯಲ್ಲಿ ರಕ್ತ ಗ್ಲುಕೋಸ್ ಪ್ರಮಾಣ ಆರೋಗ್ಯಸ್ಥರಲ್ಲಿ ಸಹಜ ರಕ್ತ ಗ್ಲುಕೋಸ್
ವ್ಯವಸ್ಥೆಯಿಂದ ನಿಯಂತ್ರಿತವಾಗುತ್ತದೆ. ರಕ್ತ ಗ್ಲುಕೋಸ್ ಪ್ರಮಾಣ ಏರಿಕೆಯೂ ಆಗದಂತೆ, ಇಳಿಕೆಯೂ ಆಗದಂತೆ ಸಹಜ ಗಡಿಯಲ್ಲಿ ಅದರ
ಪ್ರಮಾಣವನ್ನು ನಿಯಂತ್ರಿಸುವುದು ಅತ್ಯವಶ್ಯಕ.

ಇಲ್ಲದಿದ್ದಲ್ಲಿ ಗಂಭೀರ ಸ್ವರೂಪದ ಪರಿಣಾಮಗಳುಂಟಾಗುತ್ತವೆ. ಅತ್ಯಧಿಕ ಪ್ರಮಾಣದಲ್ಲಿ ಗ್ಲುಕೋಸ್ ಅನ್ನು ಸೇವಿಸಿದರೂ ದೇಹದ ಆಂತರಿಕ ಗ್ಲುಕೋಸ್ ನಿಯಂತ್ರಣ ವ್ಯವಸ್ಥೆ ಸಹಜವಾಗಿದ್ದಲ್ಲಿ ಯಾವ ಕಾರಣಕ್ಕೂ ರಕ್ತ ಗ್ಲುಕೋಸ್ ಪ್ರಮಾಣ ಸಹಜ ಗಡಿ ಮೀರದಂತೆ ನಿಯಂತ್ರಿತವಾಗುತ್ತದೆ. ಏರಿಕೆಯಾದ ರಕ್ತ ಗ್ಲುಕೋಸ್ ಇನ್ಸ್ಯುಲಿನ್‌ನ ಪ್ರಭಾವಿದಂದಾಗಿ ಜೀವಕೋಶದೊಳಕ್ಕೆ ರವಾನೆಯಾಗಿ ಮತ್ತು ಗ್ಲೈಕೋಜನ್ ಆಗಿ ಪರಿವರ್ತನೆಯಾಗಿ ಏರಿದ ಗ್ಲುಕೋಸ್ ಪ್ರಮಾಣ ತಗ್ಗುತ್ತದೆ.

ಶಕ್ತಿಯಾಗಿ ಪರಿವರ್ತನೆ: ರಕ್ತದಲ್ಲಿರುವ ಗ್ಲುಕೋಸ್ ಜೀವಕೋಶಗಳೊಳಕ್ಕೆ ರವಾನೆಯಾಗಲು ಇನ್ಸ್ಯು ಲಿನ್ ಅತ್ಯವಶ್ಯಕ. ಜೀವಕೋಶಗಳ ಹೊರ ಪದರದ ಮೇಲಿರುವ ಇನ್ಸ್ಯುಲಿನ್ ಗ್ರಾಹಕಗಳ ಮೇಲೆ ಇನ್ಸ್ಯುಲಿನ್ ಪರಿಣಾಮ ಬೀರಿ ಗ್ಲುಕೋಸನ್ನು ಜೀವಕೋಶಗಳೊಳಕ್ಕೆ ರವಾನಿಸುತ್ತದೆ. ರವಾನೆ
ಯಾದ ಗ್ಲುಕೋಸ್ ಜೀವಕೋಶದೊಳಗಿರುವ ಮೈಟೋಕಾಂಡ್ರಿಯಾಗಳಲ್ಲಿ ಜರುಗುವ ಗ್ಲೈಕಾಲಿಸೀಸ್ ಕ್ರಿಯೆಯಲ್ಲಿ ಪೈರುವಿಕ್ ಆಮ್ಲವಾಗಿ
ಪರಿವರ್ತನೆಯಾಗುತ್ತದೆ. ಇದು ಆಮ್ಲಜನಕೀಕರಣಗೊಂಡು ಕ್ರಬ್ ಚಕ್ರದಲ್ಲಿ ಕಾರ್ಬನ್‌ಡೈಆಕ್ಸೈಡ್ ಮತ್ತು ನೀರಾಗಿ ದ್ವಿಭಜನೆ ಹೊಂದುತ್ತದೆ. ಈ
ಕ್ರಿಯೆಗಳಿಂದ ಶಕ್ತಿಯ ರಾಸಾಯನಿಕ ವಸ್ತುವಾದ ಅಡಿನೋಸಿನ್‌ಟ್ರೈ-ಸ್ಪೇಟ್ (ಎಟಿಪಿ) ಮತ್ತು ಅಡಿನೋಸಿನ್‌ಡೈ-ಸ್ಪೇಟ್(ಎಡಿಪಿ)ಗಳು ಉತ್ಪತ್ತಿ ಯಾಗಿ ಅಂಗಾಂಶಗಳಿಗೆ ಶಕ್ತಿ ಒದಗುತ್ತದೆ. ಕಾರ್ಬನ್‌ಡೈಆಕ್ಸೈಡ್ ಗ್ಲುಕೋಸಿನ ಚಯಾಪಚಯ ಕ್ರಿಯೆಯ ಅಂತಿಮ ವಿಷ ವಸ್ತು. ಇದು ಉಸಿರಾಟದ ಮೂಲಕ ಹೊರದೂಡಲ್ಪಡುತ್ತದೆ.

ಗ್ಲೈಸೀಮಿಕ್ಸ್ ಇಂಡೆಕ್ಸ್: ಕಾರ್ಬೋಹೈಡ್ರೇಟ್ ಉಳ್ಳ ಆಹಾರ ಪದಾರ್ಥವೊಂದು ಸೇವಿಸಿದ ಒಂದು ನಿರ್ದಿಷ್ಟ ಅವಧಿಯೊಳಗೆ ರಕ್ತ ಗ್ಲುಕೋಸ್
ಪ್ರಮಾಣವನ್ನು ಎಷ್ಟರಮಟ್ಟಿಗೆ ಹೆಚ್ಚಿಸುತ್ತದೆ ಎಂಬುದನ್ನು ಆ ಆಹಾರ ಪದಾರ್ಥದ ರಕ್ತ ಗ್ಲುಕೋಸ್ ಸಾಮರ್ಥ್ಯ ಎನ್ನಲಾಗುತ್ತದೆ. ಇದು ಆಹಾರ ಪದಾರ್ಥದಲ್ಲಿರುವ ಗ್ಲುಕೋಸಿನ ಪ್ರಮಾಣ, ಜೀರ್ಣವಾಗುವ ವೇಗ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. ಸೇವಿಸಿದ ನಂತರ ಬಹುಬೇಗ ರಕ್ತ ಗ್ಲುಕೋಸ್ ಪ್ರಮಾಣವನ್ನು ಹೆಚ್ಚಿಸುವ ಕಾರ್ಬೋಹೈಡ್ರೇಟ್ ಆಹಾರ ಪದಾರ್ಥಗಳು ಸಕ್ಕರೆಕಾಯಿಲೆಯವರಿಗೆ ಒಳ್ಳೆಯದಲ್ಲ. ಉದಾ ಅಕ್ಕಿ, ಸಕ್ಕರೆ, ಆಲೂಗೆಡ್ಡೆ ಇತ್ಯಾದಿ.

ನವ ಗ್ಲುಕೋಸ್ ಉತ್ಪತ್ತಿ: ಅಧಿಕವಾಗಿ ಸೇವಿಸಲಾಗುವ ಜಿಡ್ಡು ಮತ್ತು ಪ್ರೋಟೀನ್‌ಗಳು ಮತ್ತು ಫ್ರಕ್ಟೋಸ್, ಗ್ಯಾಲಕ್ಟೋಸ್‌ಗಳು ಈಲಿಯಲ್ಲಿ
ಗ್ಲುಕೋಸ್ ಆಗಿ ನಂತರ ಗ್ಲೈಕೋಜನ್ ಆಗಿ ಪರಿವರ್ತನೆ ಹೊಂದುತ್ತವೆ. ಇನ್ಸ್ಯುಲಿನ್ ಈ ಕ್ರಿಯೆಯನ್ನು ದಮನ ಮಾಡುತ್ತದೆ. ಅಡ್ರಿನಲ್ ಗ್ರಂಥಿಯ ಹಾರ್ಮೋನ್‌ಗಳು ಈ ಕ್ರಿಯೆಯನ್ನು ಉತ್ತೇಜಿಸುತ್ತವೆ. ಆದುದರಿಂದ ಅಧಿಕವಾಗಿ ಸೇವಿಸಲಾಗುವ ಜಿಡ್ಡು ಮತ್ತು ಪ್ರೋಟೀನ್ ಗಳಿಂದಲೂ ರಕ್ತ ಗ್ಲುಕೋಸ್ ಏರಿಕೆಯಾಗುತ್ತದೆ.

ಗ್ಲೈಕೋಜನ್: ಗ್ಲೈಕೋಜನ್ ಗ್ಲುಕೋಸ್ ಅನ್ನು ಶೇಖರಿಸಿರುವ ರಾಸಾಯನಿಕ ವಸ್ತು. ಇದು ಈಲಿ ಮತ್ತು ಸ್ನಾಯುಗಳಲ್ಲಿ ಇರುತ್ತದೆ. ಅಗತ್ಯಕ್ಕಿಂತ
ಹೆಚ್ಚಾದ ಗ್ಲುಕೋಸ್, ಸೇವಿಸಿದ ಫ್ರಕ್ಟೋಸ್ ಮತ್ತು ಗ್ಯಾಲಕ್ಟೋಸ್ ಇವುಗಳು ಈಲಿಯಲ್ಲಿ ಗ್ಲೈಕೋಜನ್ ಆಗಿ ಪರಿವರ್ತನೆ ಹೊಂದಿ ಶೇಖರಿಸಲ್ಪಡು ತ್ತವೆ. ಈ ಕ್ರಿಯೆಯನ್ನು ಇನ್ಸ್ಯುಲಿನ್ ಪ್ರೇರೇಪಿಸುತ್ತದೆ. ಸಾಮಾನ್ಯರಲ್ಲಿ ಸುಮಾರು ೫೦೦ಗ್ರಾಂ ಗ್ಲೈಕೋಜನ್ ಇರುತ್ತದೆ. ಗ್ಲುಕೋಗಾನ್ ಹಾರ್ಮೋನ್ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಕಡಿಮೆಯಾದಾಗ ಗ್ಲೈಕೋಜನ್ ಅನ್ನು ಗ್ಲುಕೋಸ್ ಆಗಿ ವಿಭಜನೆ ಮಾಡಿ ರಕ್ತಕ್ಕೆ ಬಿಡುಗಡೆಯಾಗುತ್ತದೆ.

ರಕ್ತ ಗ್ಲುಕೋಸ್ ಏರಿಕೆ: ರಕ್ತದಲ್ಲಿ ಗ್ಲುಕೋಸಿನ ಪ್ರಮಾಣ ೧೭೦ ಮಿ.ಗ್ರಾ/ ಡಿ.ಎಲ್‌ಗಿಂತಲೂ ಅಧಿಕವಾದಲ್ಲಿ ಇದರಿಂದ ಕಣ್ಣು, ಹೃದಯ, ಮೆದುಳು
ಮತ್ತು ಮೂತ್ರಜನಕಾಂಗಗಳ ರಕ್ತನಾಳಗಳ ಮೇಲೆ ಗಂಭೀರ ಸ್ವರೂಪದ ಪರಿಣಾಮಗಳುಂಟಾಗುತ್ತವೆ. ರಕ್ತದ ಗ್ಲುಕೋಸ್ ಜೀವಕೋಶಗಳ ಒಳಕ್ಕೆ
ರವಾನೆಯಾಗದಿದ್ದಲ್ಲಿ ರಕ್ತ ಗ್ಲುಕೋಸ್ ಏರಿಕೆಯಾಗುತ್ತದೆ. ಇನ್ಸ್ಯುಲಿನ್‌ನ ಪ್ರಮಾಣ ಕಡಿಮೆ ಯಾಗುವಿಕೆ, ಇನ್ಸ್ಯುಲಿನ್ ಕ್ರಿಯಾ ಸಾಮರ್ಥ್ಯ ಕಡಿಮೆ ಯಾಗುವಿಕೆ ಮತ್ತು ಅತಿಯಾದ ಗ್ಲುಕೋಗಾನ್ ಉತ್ಪತ್ತಿ ಇದಕ್ಕೆ ಪ್ರಮುಖ ಕಾರಣ ಗಳು. ಸಕ್ಕರೆಕಾಯಿಲೆಯ ಪ್ರಮುಖ ರೋಗಲಕ್ಷಣವಿದು.

ರಕ್ತ ಗ್ಲುಕೋಸ್ ಇಳಿಕೆ: ರಕ್ತ ಗ್ಲುಕೋಸ್ ಪ್ರಮಾಣ ೯೦ ಮಿ.ಗ್ರಾ/ ಡಿ.ಎಲ್‌ಗಿಂತಲೂ ಕಡಿಮೆಯಾದಲ್ಲಿ ಸುಸ್ತು, ಸಂಕಟ, ತಳಮಳ, ಪ್ರಜ್ಞಾಹೀನತೆ, ಫಿಟ್ಸ್ ಇತ್ಯಾದಿ ತೊಂದರೆಗಳುಂಟಾಗುತ್ತದೆ. ಮೆದುಳು ಗ್ಲುಕೋಸ್ ಅಲ್ಲದೆ ಇನ್ನಿತರ ಯಾವುದೇ ವಸ್ತುವನ್ನು ಶಕ್ತಿಗಾಗಿ ಉಪಯೋಗಿಸುವ ಸಾಮರ್ಥ್ಯ ವಿಲ್ಲದ ಕಾರಣ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಮೆದುಳಿಗೆ ಅನಾಹುತಗಳಾಗಿ ಮಾರಣಾಂತಿಕವಾಗಬಹುದು. ಅತಿಯಾಗಿ ಇನ್ಸ್ಯುಲಿನ್ ಹೆಚ್ಚಾಗುವಿಕೆ, ಗ್ಲುಕೊಗಾನ್ ಉತ್ಪತ್ತಿ ಕಡಿಮೆಯಾಗುವಿಕೆ ಮತ್ತು ದೀರ್ಘಕಾಲೀಕ ಉಪವಾಸ ಪ್ರಮುಖ ಕಾರಣಗಳು.

ಇಂತಹ ಸಂದರ್ಭಗಳಲ್ಲಿ ಬಹುಬೇಗ ಗ್ಲುಕೋಸ್ ನೀಡಬೇಕು. ಕಾರ್ಬೋಹೈಡ್ರೇಟ್‌ಗಳ ಉಪಯೋಗಗಳು ಇವು ಶಕ್ತಿಯ ಪ್ರಮುಖ ಮೂಲಗಳು. ಜಿಡ್ಡುಗಳ ಆಮ್ಲಜನಕೀಕರಣಕ್ಕೆ ಇವು ಅತ್ಯವಶ್ಯಕ. ಕೆಲವು ಅತ್ಯವಶ್ಯಕವಲ್ಲದ ಅಮೈನಾಮ್ಲಗಳ ಉತ್ಪತ್ತಿಗೆ ಅವಶ್ಯಕ. ಜೀರ್ಣವಾಗದ ಕಾರ್ಬೋ ಹೈಡ್ರೇಟ್‌ಗಳು ಮಲ ಉತ್ಪತ್ತಿ ಮತ್ತು ಮಲ ವಿಸರ್ಜನೆಗೆ ಸಹಕಾರಿ.

(ಮುಂದುವರಿಯುವುದು)

 
Read E-Paper click here