Monday, 25th November 2024

ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಬಿಬಿಸಿ ಡಾಕ್ಯುಮೆಂಟರಿ ಪ್ರದರ್ಶನಕ್ಕೆ ತಡೆ

ಹೈದರಾಬಾದ್​: ಪ್ರಧಾನಿ ನರೇಂದ್ರ ಮೋದಿಯವರ ಬಗೆಗಿನ ಆಕ್ಷೇಪಾರ್ಹ ಸಂಗತಿಗಳನ್ನು ಒಳಗೊಂಡಿರುವ ಬಿಬಿಸಿ ಡಾಕ್ಯು ಮೆಂಟರಿಗೆ ಕೇಂದ್ರ ಸರ್ಮಾರ ತಡೆಹಿಡಿಯುವ ಪ್ರಯತ್ನ ಮಾಡಿದರೂ, ವಿವಿಧ ಯೂನಿ ವರ್ಸಿಟಿಗಳಲ್ಲಿ ವಿದ್ಯಾರ್ಥಿ ಗಳಿಗಾಗಿ ಅದರ ಪ್ರದರ್ಶನ ಏರ್ಪಡಿಸಲಾಗುತ್ತಿದೆ.

ಅದರಂತೆ ಈಗ ಹೈದರಾಬಾದ್ ನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕೂಡ ವಿದ್ಯಾರ್ಥಿ ಗಳಿಗಾಗಿ ಈ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು. ಭಾರತ್ ರಾಷ್ಟ್ರ ಸಮಿತಿ ವಿದ್ಯಾರ್ಥಿ ಮೋರ್ಚಾದಿಂದ ಹಮ್ಮಿಕೊಳ್ಳಲಾಗಿದ್ದ ಡಾಕ್ಯುಮೆಂಟರಿ ಪ್ರದರ್ಶನಕ್ಕೆ ಪೊಲೀಸರು ತಡೆಯೊಡ್ಡಿದರು‌.

ಬಿಆರ್​​ಎಸ್​​​ ಪಕ್ಷದ ವಿದ್ಯಾರ್ಥಿ ಮೋರ್ಚಾದವರು ಬಿಬಿಸಿ ಡಾಕ್ಯುಮೆಂಟರಿ ಪ್ರದರ್ಶನಕ್ಕಾಗಿ ಉಸ್ಮಾನಿಯಾ ಯೂನಿವರ್ಸಿಟಿಯ ಕಲಾ ಅಧ್ಯಯನ ಕಾಲೇಜು ಕ್ಯಾಂಪಸ್ ನಲ್ಲಿ ಸಿದ್ಧತೆ ಮಾಡಿದ್ದರು‌. ಆದರೆ ಅಲ್ಲಿಗೆ ಆಗಮಿಸಿದ ಹೈದರಾಬಾದ್ ಪೊಲೀಸರು ಪ್ರದರ್ಶನ ತಡೆದು, ಬಿಆರ್​ಎಸ್​ ವಿದ್ಯಾರ್ಥಿ ಮೋರ್ಚಾದ ಸದಸ್ಯರನ್ನು ವಶಕ್ಕೆ ಪಡೆದರು.

ಹೀಗೆ ಪ್ರತಿದಿನ ಒಂದಲ್ಲ ಒಂದು ಕಡೆ ಬಿಬಿಸಿ ಡಾಕ್ಯುಮೆಂಟರಿ ಗಲಾಟೆ ನಡೆಯುತ್ತಿದೆ. ಸೋಮವಾರ ತಮಿಳುನಾಡಿನ ನಾಗ ಪಟ್ಟಿಣಂ ಎಂಬಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬಿಬಿಸಿ ಡಾಕ್ಯುಮೆಂಟರಿ ಸಾರ್ವಜನಿಕ ಪ್ರದರ್ಶನ ಆಯೋಜಿಸಲಾಗಿತ್ತು. ಅದನ್ನು ನೋಡಿ ಬಿಜೆಪಿಯವರು ಗಲಾಟೆ-ಪ್ರತಿಭಟನೆ ಎಬ್ಬಿಸಿದ್ದರು.