Friday, 3rd January 2025

ಅರಮನೆ ಮೈದಾನದಲ್ಲಿ  ಎಲೆಕ್ಟ್ರಿಕ್ ವಾಹನಗಳ ಪ್ರದರ್ಶನ

ಬೆಂಗಳೂರು:  ಅರಮನೆ ಮೈದಾನದಲ್ಲಿ  ಫೆ 2 ರಿಂದ 4 ರವರೆಗೆ ಮೂರು ದಿನಗಳ  ವಿದ್ಯುತ್ ವಾಹನಗಳ  ಬೃಹತ್ ವಸ್ತು ಪ್ರದರ್ಶನ ಇವಿ ಅಂಡ್ ಆರ್ ವಿ ಎಕ್‍ಸ್ಪೋಗೆ ನಟಿ ಹರ್ಷಿಕ ಪೊಣಚ ಚಾಲನೆ ನೀಡಿದರು.

ಕರ್ನಾಟಕ ಎಲೆಕ್ಟ್ರಿಕಲ್ ವೆಹೀಕಲ್ ಮ್ಯಾನ್ ಫ್ಯಾಕ್ಚರರ್ಸ್ ಅಂಡ್ ಡೀಲರ್ಸ್ ಅಸೋಸಿಯೇಶನ್ ಹಾಗೂ ಕೀ ಮೀಡಿಯಾ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಮೇಳದಲ್ಲಿ ರಾಷ್ಟ್ರವಲ್ಲದೆ ವಿದೇಶಿ ಕಂಪನಿಗಳು ಸುಮಾರು 60 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದು ಎಲೆಕ್ಟ್ರಿಕ್ ವಾಹನಗಳ ಪ್ರದರ್ಶಿಸಿದೆ ವಿದ್ಯುತ್ ಚಾಲಿತ ಸೈಕಲ್ ಕಾರುಗಳು,ಬೈಕ್. ಆಟೋರಿಕ್ಷಾ. ವಾಹನಗಳನ್ನು ಪ್ರದರ್ಶಿಸಲಾಗಿದೆ  ಬ್ಯಾಟರಿ ಗಳು ವಾಹನದ ಬಿಡಿ ಭಾಗಗಳನ್ನು ಪ್ರದರ್ಶಿಸಲಾಗಿದೆ.

ನಟಿ ಹರ್ಷಿಕಾ ಪೂಣಚ ಮಾತನಾಡಿ.  ವಿದ್ಯುತ್ ಚಾಲಿತ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು. ಪರಿಸರ ಸ್ನೇಹಿಯಾಗಿದೆ. ವಿಧ್ಯತ್ ಕಾರ್ ಗಳು ಜನಪ್ರಿಯ ವಾಗುತಿದೆ. ನಾನು ವಿಧ್ಯತ್ ಚಾಲಿತಾ ಕಾರ್ ನಲ್ಲಿ ಕೊಡಗುಗೆ ಪ್ರಯಾಣಿಸುತ್ತೆನೆ ನನಗೆ ಖುಷಿ ಮತ್ತು ಸಂತೋಷ ನೀಡುತದೆ  ಎಂದರು.

ಎಫ್‍ಕೆಸಿಸಿಐ ಅಧ್ಯಕ್ಷ ಗೋಪಾಲ ರೆಡ್ಡಿ, ಕರ್ನಾಟಕ ಎಲೆಕ್ಟ್ರಿಕಲ್ ವೆಹೀಕಲ್ ಮ್ಯಾನ್ ಫ್ಯಾಕ್ಚರರ್ಸ್ ಅಂಡ್ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಡಾ. ಎ.ಆರ್. ನಾಗೇಶ್, ಕಾರ್ಯದರ್ಶಿ ಕೆ.ಆರ್. ವೆಂಕಟೇಶ ಗೌಡ, ಆಯೋಜಕರಾದ ಪ್ರಕಾಶ್ ಗೌಡ ಅವರು ಪ್ರದರ್ಶನಕ್ಕೆ ಚಾಲನೆ ನೀಡಿದರು.