ಗುಬ್ಬಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ಥಳೀಯರಿಗೆ ಉದ್ಯೋಗ ಒದಗಿಸಿ ಕೊಡುವುದರ ಜೊತೆಗೆ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಎಂದು ಶ್ರೀ ವಿಭವ ವಿದ್ಯಾಶಂಕರ ದೇಶಿ ಕೇಂದ್ರ ಸ್ವಾಮಿಜಿ ತಿಳಿಸಿ ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ ಸಿ ಟ್ರಸ್ಟ್ ವತಿಯಿಂದ ಕಡಬ ಗ್ರಾಮದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿ ಸ್ವಸಹಾಯ ಸಂಘಗಳ ಮೂಲಕ ರಾಜ್ಯದಲ್ಲಿ ಅನೇಕ ಕುಟುಂಬಗಳು ಬದುಕನ್ನು ಕಟ್ಟಿಕೊಂಡಿವೆ.
ಕಾರ್ಯಕ್ರಮಗಳನ್ನು ಮಾಡುವ ಉದ್ದೇಶ ಪ್ರತಿ ಗ್ರಾಮಗಳಲ್ಲಿನ ಕುಟುಂಬಗಳು ಧಾರ್ಮಿಕ ಆಚರಣೆಯೊಂದಿಗೆ ಸಂಸ್ಕಾರಗಳನ್ನು ಬೆಳೆಸಿಕೊಳ್ಳುವಂತಾಗಬೇಕು ಮಕ್ಕಳು ಸುಸಂಸ್ಕೃತ ರಾಗಿ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ತಂದೆ ತಾಯಿಗಳನ್ನು ಕೊನೆವರೆಗೂ ಪ್ರೀತಿ ಯಿಂದ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ನಿರ್ದೇಶಕಿ ದಯಾಶೀಲ ಮಾತನಾಡಿ ಪರಮಪೂಜ್ಯರು ಹಾಗೂ ಮಾತೃಶ್ರೀ ಅಮ್ಮ ನವರ ಮಾರ್ಗದರ್ಶನದಲ್ಲಿ ಸಾಮಾ ಜಿಕ, ಧಾರ್ಮಿಕ, ಶೈಕ್ಷಣಿಕ ಅನೇಕ ಕಾರ್ಯಕ್ರಮ ಗಳನ್ನು ರೂಪುಗೊಂಡಿವೆ ಸ್ವಸಹಾಯ – ಪ್ರಗತಿ ಬಂದು ಗುಂಪುಗಳೊಂದಿಗೆ ಗ್ರಾಮೀಣ ಭಾಗದ ಜನರ ಅಭಿವೃದ್ಧಿ ಸೇರಿದಂತೆ ಜ್ಞಾನವಿಕಾಸ , ಜನ ಮಂಗಲ, ಮಾಶಾಸನ , ದೇವಸ್ಥಾನಗಳ ಜೀರ್ಣೋದ್ಧಾರ, ಕೃಷಿ ಅನುದಾನ,ಸುಜ್ಞಾನ ನಿಧಿ ಶಿಷ್ಯವೇತನ, ಹಲವು ಕಾರ್ಯಕ್ರಮಗಳು ಮುಂಚೂಣಿಯಲ್ಲಿವೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಮಾತನಾಡಿ ಸರಕಾರ ಮಾಡಬೇಕಾದಂತ ಎಷ್ಟೋ ಕಾರ್ಯಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನುಷ್ಠಾನ ಮಾಡುವುದರ ಮೂಲಕ ಯಶಸ್ವಿಯನ್ನು ಕಂಡಿದೆ ಎಂದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ರಾಜ್ಯಾಧ್ಯಕ್ಷ ಸತೀಶ್ ರವರು ಧರ್ಮಸ್ಥಳ ಸಂಸ್ಥೆಯು ಪ್ರತಿ ಕುಟುಂಬಗಳ ಅಭಿವೃದ್ಧಿಯ ಜೊತೆಗೆ ಗ್ರಾಮಗಳ ಅಭಿವೃದ್ಧಿ ಮಾಡುತ್ತಿದ್ದು ದೇವಾಲಯಗಳ ಜೀರ್ಣೋದರ, ಕೆರೆಗಳ ಹೂಳೆತ್ತುವಿಕೆ ಕಾರ್ಯಕ್ರಮಗಳು ಬಹಳ ಉತ್ತಮವಾಗಿದ್ದು ಅದರ ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗ್ರಾಮದ ಸರ್ವ ಸದಸ್ಯರು ಮುಖಂಡರುಗಳನ್ನು ಒಟ್ಟುಗೂಡಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಹೊಸ ಚೈತನ್ಯಗಳನ್ನು ಮೂಡಿಸು ತ್ತಿದ್ದು ಬಹಳ ಉತ್ತಮವಾದಂತಹ ಕೆಲಸಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಜಿಎಂ ಬಸವರಾಜು, ವೆಂಕಟೇಶ್ ಗೌಡ ,ಶ್ರೀ ಪಾರ್ಥಸಾರಥಿ, ಅ ನಾ ಲಿಂಗಪ್ಪ ,ಪೂಜಾ ಸಮಿತಿಯ ಅಧ್ಯಕ್ಷ ಹುಚ್ಚವೀರೇಗೌಡ್ರು, ಬಾಲಕೃಷ್ಣ, ಬಸವರಾಜು,ಯೋಜನಾಧಿಕಾರಿ ರಾಜೇಶ್ ಎಸ್, ವಲಯದ ಮೇಲ್ವಿಚಾರಕರಾದ ಸೌಮ್ಯ ಹಾಗೂ ಪ್ರದೀಪ್, ಸೇವಾ ಪ್ರತಿನಿಧಿಗಳು ಕಡಬ ವಲಯದ ಎಲ್ಲಾ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಗತಿ ಬಂದು ಹಾಗೂ ಸ್ವಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.