ಗುಬ್ಬಿ: ಜನರ ವಿಶ್ವಾಸ ಗಳಿಸುವ ಮೂಲಕ ಚುನಾವಣೆಯನ್ನು ಎದುರಿಸಿ ಎಂದು ವಾಸಣ್ಣ ಅಭಿಮಾನಿ ಬಳಗದ ಮುಖಂಡ ಕೆ ಆರ್ ವೆಂಕಟೇಶ್ ತಿಳಿಸಿದರು.
ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಪರ್ವ ಕಾರ್ಯಕ್ರಮ ದಲ್ಲಿ ಮಾತನಾಡಿ ಸಿಎಸ್ ಪುರ ವ್ಯಾಪ್ತಿಯಲ್ಲಿ ತುರುವೇ ಕೆರೆ ಶಾಸಕರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ನಾನು ಮಾಡಿದ್ದೇನೆ ಎಂದು ಜೆಡಿಎಸ್ ಅಭ್ಯರ್ಥಿ ಜನರನ್ನು ಮರುಳು ಮಾಡುತ್ತಿದ್ದಾರೆ ಇಂತಹ ಸುಳ್ಳು ಹೇಳಿಕೆಗಳನ್ನು ಜನರು ನಂಬುವುದಿಲ್ಲ ಜನರ ವಿಶ್ವಾಸ ಗಳಿಸುವ ಮೂಲಕ ಚುನಾವಣೆಯನ್ನು ಎದುರಿಸಿ, ಆಮಿಷಗಳ ಮೂಲಕ ಅಮಾಯಕರಿಂದ ವಾಸಣ್ಣನವರ ವಿರುದ್ಧ ಹತ್ತಿಕುವುದನ್ನು ವಾಸಣ್ಣನವರ ಅಭಿಮಾನಿಗಳು ಸಹಿಸುವುದಿಲ್ಲ ಎಂದು ಕಿಡಿಕಾರಿದರು.
ಮುಖಂಡ ಶಿವಣ್ಣ ಮಾತನಾಡಿ ವಾಸಣ್ಣನವರು 20 ವರ್ಷಗಳ ಕಾಲ ಸುಧೀರ್ಘ ಸಮೃದ್ಧ ಆಡಳಿತ ನೀಡಿದ್ದಾರೆ. ಬಿಜೆಪಿಯವರು ಉತ್ತಮ ಭಾಷಣಕಾರರೇ ವರೆತು ರಾಜ್ಯದ ಅಭಿ ವೃದ್ಧಿಯ ಬಗ್ಗೆ ಕಾಳಜಿ ಇಲ್ಲ ಬಿಜೆಪಿ ಸರ್ಕಾರ ಇದ್ದರೂ ಸಹ ತಾಲೂಕಿಗೆ ಸಂಸದರ ಕೊಡುಗೆ ಶೂನ್ಯವಾಗಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯೆ ಹಸಿನಾ ತಾಜ್ ಮಾತನಾಡಿ ವಾಸಣ್ಣನವರು ಎಲ್ಲರನ್ನೂ ಸಮಾನವಾಗಿ ಕಾಣುವ ವ್ಯಕ್ತಿತ್ವ ಹೊಂದಿದ್ದಾರೆ. ಪಕ್ಷಕ್ಕಾಗಿ ದುಡಿದಂತಹ ವಾಸಣ್ಣನವರಿಗೆ ಕುಮಾರಸ್ವಾಮಿಯವರು ಮೋಸ ಮಾಡಿದ್ದಾರೆ. ಇದು ವಾಸಣ್ಣ ನವರಿಗೆ ಮಾಡಿದ ಮೋಸ ಅಲ್ಲ ಗುಬ್ಬಿ ತಾಲೂಕಿನ ಜನತೆಗೆ ಮಾಡಿದ ಮೋಸ ಮುಂದಿನ ಚುನಾ ವಣೆಯಲ್ಲಿ ವಾಸಣ್ಣನವರನ್ನು ಗೆಲ್ಲಿಸುವ ಮೂಲಕ ಜೆಡಿಎಸ್ ಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ತಿಳಿಸಿದರು.
ದಲಿತ ಮುಖಂಡ ಎನ್ ಎ ನಾಗರಾಜ್ ಮಾತನಾಡಿ ತಾಲೂಕಿನಲ್ಲಿ ಯಾವುದೇ ಕೋಮುಗಲಭೆಗಳಿಗೆ ಅವಕಾಶ ಮಾಡಿಕೊಡದೆ ಎಲ್ಲಾ ಜನಾಂಗದ ವಿಶ್ವಾಸವನ್ನು ಗಳಿಸಿದ್ದಾರೆ. ತಾಲೂಕಿನ ಜನತೆ ಸರಳ ಸಜ್ಜನಿಕೆಯ ಆದರ್ಶ ರಾಜಕಾರಣಿಯನ್ನು ಕಳೆದು ಕೊಳ್ಳುವುದಿಲ್ಲ. ಅವರು ಯಾವ ಪಕ್ಷದಿಂದ ಸ್ಪರ್ಧಿಸಿದರು ಅತ್ಯಧಿಕ ಮತಗಳಿಂದ ಗೆಲ್ಲಿಸುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಚ್ಚಟಿತ ಜೆಡಿಎಸ್ ಅಧ್ಯಕ್ಷ ಗುರು ರೇಣುಕಾರಾಧ್ಯ, ಮುಖಂಡರಾದ ಕನ್ನಿಗಯ್ಯ, ಚಾಂದ್ ಪಾಷಾ, ಗೋಪಾಲ್, ಶಶಿಧರ್, ಪುರುಷೋತ್ತಮ್, ನಾಗಭೂಷಣ್, ನಾಗರಾಜ್, ಕುಮಾರ್, ಸಿದ್ದರಾಜು, ಗಂಗಾಧರ್, ಪ್ರವೀಣ್, ಮುಂತಾ ದವರಿದ್ದರು.