ಭೂಕಂಪನದ ಮಹಾ ದುರಂತಕ್ಕೆ ಟರ್ಕಿ ಮತ್ತು ಸಿರಿಯಾ ದೇಶಗಳು ಅಕ್ಷರಶಃ ನಲುಗಿ ಹೋಗಿವೆ. ಭೀಕರ ಭೂಕಂಪನದಿಂದ
ಕಟ್ಟಡಗಳು ನೆಲಸಮವಾಗಿದ್ದು, ಜನರ ಆಕ್ರಂದನ ಮುಗಿಲು ಮುಟ್ಟಿದೆ.
ಒಂದರ ಮೇಲೊಂದರಂತೆ ಅಪ್ಪಳಿಸಿದ ಸರಣಿ ಕಂಪನಗಳು ಜನಜೀವನವನ್ನು ಛಿದ್ರಗೊಳಿ ಸಿವೆ. ಈ ದುರಂತದಿಂದ ೫,೬೦೦ಕ್ಕೂ ಹೆಚ್ಚು ಕಟ್ಟಡಗಳು ನೆಲಕಚ್ಚಿದ್ದು, ಸಾವಿನ ಸಂಖ್ಯೆ ಲೆಕ್ಕಕ್ಕೇ ಸಿಗುತ್ತಿಲ್ಲ ಎನ್ನಲಾಗಿದೆ. ಒಟ್ಟಾರೆ ಎರಡೂ ದೇಶಗಳಲ್ಲಿನ ಮರಣ ಪ್ರಮಾಣ ೨೦,೦೦೦ ದಾಟಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಗಾಯಾಳುಗಳು ಆಸ್ಪತ್ರೆಯಲ್ಲೂ ಕೊನೆ ಯುಸಿರೆಳೆಯುತ್ತಿದ್ದಾರೆ.
ಇನ್ನು ಅವಶೇಷಗಳ ಅಡಿಗಳಲ್ಲಿ ಎಷ್ಟು ಜನರು ಸಿಲುಕಿದ್ದಾರೆ ಎಂದು ಊಹಿಸುವುದೂ ಅಸಾಧ್ಯವಾಗಿದೆ. ಪ್ರಾಕೃತಿಕ ವಿಕೋಪ ದಿಂದ ತುತ್ತಾಗಿರುವ ಈ ಎರಡೂ ದೇಶಗಳಿಗೆ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ನೆರವು ಬರಲಾರಂಭಿಸಿದೆ. ಈಗಾಗಲೇ ಭಾರತ, ರಷ್ಯಾ, ನ್ಯೂಜಿ ಲ್ಯಾಂಡ್, ಉಕ್ರೇನ್, ಅಮೆರಿಕ ಸೇರಿದಂತೆ ೪೦ಕ್ಕೂ ಅಧಿಕ ದೇಶಗಳು ಟರ್ಕಿ ಮತ್ತು ಸಿರಿಯಾ ದೇಶಗಳಿಗೆ ತುರ್ತು ಪರಿಹಾರ ಸಾಮಗ್ರಿಗಳನ್ನು ರವಾನಿಸಿವೆ.
ಭಾರತದಿಂದ ಟರ್ಕಿಗೆ ಭೂಕಂಪ ಪರಿಹಾರದ ಮೊದಲ ಬ್ಯಾಚ್ ವಸ್ತುಗಳು ರವಾನೆ ಯಾಗಿವೆ. ಇದರ ಜತೆಗೆ ಎನ್‌ಡಿಆರ್‌ಎ- ಪತ್ತೆ ಹಾಗೂ ರಕ್ಷಣಾ ತಂಡಗಳು, ವಿಶೇಷ ಪರಿಣತ ಶ್ವಾನದಳ, ವೈದ್ಯಕೀಯ ಪೂರೈಕೆಗಳು, ಡ್ರಿಲ್ಲಿಂಗ್ ಯಂತ್ರಗಳು ಹಾಗೂ ಇತರ ಅಗತ್ಯ ಸಾಧನಗಳನ್ನು ಕಳುಹಿಸಲಾಗಿದೆ. ಆದರೆ, ತನ್ನ ದುರ್ಬುದ್ಧಿಗೆ ಹೆಸರಾಗಿರುವ ಪಾಕಿಸ್ತಾನವು ಟರ್ಕಿಗೆ ನೆರವು ಹಸ್ತ ಚಾಚಿ ರುವ ಭಾರತದ ಈ ಕಾರ್ಯಕ್ಕೆ ಅಡ್ಡಿ ಉಂಟು ಮಾಡಿದೆ.
ಅಲ್ಲಿಗೆ ಪರಿಹಾರ ಸಾಮಾಗ್ರಿಗಳನ್ನು ಸಾಗಿಸುವ ಭಾರತೀಯ ವಿಮಾನಗಳಿಗೆ ಪಾಕಿಸ್ತಾನವು ತನ್ನ ವಾಯುಪ್ರದೇಶದ ಅನುಮತಿ ನೀಡಿಲ್ಲ ಎನ್ನುವುದು ವರದಿ ಆಗಿದೆ. ಈ ಹಿಂದೆಯೂ ಅಫ್ಘಾನಿಸ್ತಾನಕ್ಕೆ ಸಹಾಯ ಮಾಡಲು ಹೊರಟಿದ್ದ ವಿಮಾನಗಳಿಗೆ ಕೂಡ ಪಾಕಿಸ್ತಾನ ಅನುಮತಿ ನೀಡಿರಲಿಲ್ಲ. ಈ ಮೂಲಕ ಎರಡನೇ ಬಾರಿ ಭಾರತವು ಅಗತ್ಯವಿರುವ ರಾಷ್ಟ್ರಗಳಿಗೆ ಮಾನವೀಯ ನೆರವು ಕಳುಹಿಸುವುದನ್ನು ತಡೆಯಲು ಯತ್ನಿಸಿದೆ. ಪಾಕಿಸ್ತಾನವು ಈ ದುರ್ಬುದ್ಧಿಯನ್ನು ಬಿಡಬೇಕು. ಜಗತ್ತಿನ ಯಾವುದೇ ಪ್ರದೇಶದಲ್ಲಿ ಮಾನವ ಕುಲ ಸಂಕಟಕ್ಕೆ ಸಿಲುಕಿದಾಗ ಸಹಾಯ ಮಾಡುವುದನ್ನು ಕಲಿಯಬೇಕು. ಕನಿಷ್ಠ ಪಕ್ಷ ಸಹಾಯ ಮಾಡುವ ದೇಶಕ್ಕಾ ದರೂ ಬೆಂಬಲ ನೀಡಬೇಕು.