Tuesday, 26th November 2024

ಸ್ಯಾಾಂಡಲ್‌ವುಡ್ಡೇ ಬೇರೆ ಸ್ಕ್ಯಾಾಂಡಲ್‌ವುಡ್ಡೇ ಬೇರೆ

ಪಿ.ಎಕ್‌ಸ್‌‌ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು

ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಮೂರು ವರ್ಷಗಳ ನಂತರ 1992ರಲ್ಲಿ ‘ಜೀವನ ಚೈತ್ರ’ ಚಿತ್ರದಲ್ಲಿ ಮತ್ತೇ ಬಣ್ಣ ಹಚ್ಚಿದರು
ವರನಟ ರಾಜಣ್ಣನವರು. ಆದರೆ ಇದು ಸಾಮಾನ್ಯ ಕಥೆಯ ಚಿತ್ರವಾಗಿರಲಿಲ್ಲ. ಎಂದಿನಂತೆ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಉದ್ದೇಶದಿಂದಲೇ ಜೀವನಚೈತ್ರ ಆರಂಭಿಸಿದರು.

ಆ ಚಿತ್ರದಲ್ಲಿ ಮದ್ಯಪಾನದ ವಿರುದ್ಧ ಹೋರಾಡಿ ತಮ್ಮ ಮಕ್ಕಳನ್ನೂ ಲೆಕ್ಕಿಸದೆ ಕುಡಿತವನ್ನು ವಿರೋಧಿಸಿ ಮಾಡಿದ ಜೋಡಿದಾರ ವಿಶ್ವನಾಥ್ ಪಾತ್ರ ಸಮಾಜದಲ್ಲಿ ಎಷ್ಟು ಪರಿಣಾಮ ಬೀರಿತೆಂದರೆ ಚಿತ್ರವನ್ನು ನೋಡಿದ ಅಭಿಮಾನಿಗಳು ನೂರಾರು ಸಾರಾಯಿ ಅಂಗಡಿಗಳಿಗೆ ಬೆಂಕಿಯಿಟ್ಟು ಧ್ವಂಸಗೊಳಿಸಿದರು. ನೂರಾರು ಮದ್ಯಪಾನದ ಅಂಗಡಿಗಳನ್ನು ಮುಚ್ಚಿಸಿ ಕುಡಿತದ ವಿರುದ್ಧ ಜಾಗೃತಿ ಆಂದೋಲನ ನಡೆಸಿದರು.

ಇದಕ್ಕಿಿಂತ ಅದ್ಭುತವೆಂದರೆ ಜಾತಿಯಿಂದ ರಾಜಣ್ಣನವರು ಹೆಂಡವನ್ನು ಬಸಿಯುವ ಈಡಿಗ ಸಮುದಾಯದವರಾದರೂ ತಮ್ಮ ಜಾತಿಯ ಕುಲಕಸುಬಿನ ವಿರುದ್ಧವೇ ದಂಗೆಯೇಳುವ ಪಾತ್ರವನ್ನು ಮಾಡಿದ್ದರು. ಇಂಥ ಗುಂಡಿಗೆ ಇಂದು ಯಾರಿಗಿದೆ? ಇದಕ್ಕಿಿಂತಲೂ ಗಮನಾರ್ಹವೆಂದರೆ ಜೀವನಚೈತ್ರ ಬಿಡುಗಡೆಯಾದ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಎಸ್.ಬಂಗಾರಪ್ಪನವರು. ಅವರೂ ಸಹ ಈಡಿಗ ಸಮುದಾಯದವರು ಮತ್ತು ಅವರು ರಾಜ್ ಅವರ ಖಾಸಾ ಬೀಗರೂ ಆಗಿದ್ದರು. ಆದರೂ ರಾಜ್ ತೋರಿದ ನೈತಿಕತೆ, ಸಾಮಾಜಿಕ ಕಳಕಳಿ, ಬದ್ಧತೆ ಎಲ್ಲವನ್ನೂ ಮೀರಿ ನಿಂತಿತ್ತು. ಅವರ ಕೊನೆಯ ಚಿತ್ರ ಶಬ್ಧವೇದಿಯಲ್ಲೂ ಸಮಾಜದಲ್ಲಿ ಕಾಡುತ್ತಿರುವ ಮಾದಕ ವ್ಯಸನ, ಡ್ರಗ್‌ಸ್‌ ಸೇವನೆ, ಗಾಂಜಾ ಅಫೀಮುಗಳ ಮಾರಾಟದ
ವಿರುದ್ಧವೇ ಆಗಿದ್ದು, ಚಿತ್ರರಂಗದಿಂದಾದ ಸಮಾಜಿಕ ಜಾಗೃತಿಯೇ ಆಗಿತ್ತು.

ಅಷ್ಟೇ ಅಲ್ಲ, ರಾಜ್ ಅವರು ಪ್ರಥಮವಾಗಿ ಬಾಂಡ್ ಚಿತ್ರದಲ್ಲಿ ಅಭಿನಯಿಸುವಾಗ ದೊರೆ ಭಗವಾನ್ ಅವರು ಹಾಲಿವುಡ್ ಚಿತ್ರದಂತೆ ಈಜು ಉಡುಪಿನಲ್ಲಿರುವ ನಾಯಕಿಯರೊಂದಿಗೆ ಅಭಿನಯಿಸುವಂತೆ ಹೇಳಿದಾಗ ಗುಬ್ಬಿ ವೀರಣ್ಣ ನವರು ‘ಬೇಡ
ಮುತ್ತಣ್ಣ, ನಿನ್ನಂಥ ಕಲಾವಿದರು ಇಂಥ ಸನ್ನಿವೇಶಗಳಲ್ಲಿ ಅಭಿನಯಿಸಿದರೆ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತ್ತಾಗುತ್ತದೆ’ ಎಂದು ಎಚ್ಚರಿಸಿದ್ದರು. ಆದರೂ ರಾಜ್ ಅದನ್ನೆಲ್ಲಾ ಮೀರಿ ಸಮಾಜಕ್ಕೆ ಸಕಾರಾತ್ಮಕ ಸಂದೇಶ ನೀಡಿದ್ದರು. ಆರಂಭದ ಒಂದೆರಡು ಚಿತ್ರಗಳನ್ನು ಹೊರತುಪಡಿಸಿದರೆ ರಾಜ್ ಅವರು ಎಂದಿಗೂ ಸಿಗರೇಟನ್ನು ಸೇದುವುದಾಗಲಿ ಬಾಟಲಿ ಹಿಡಿದು
ಕುಡುಕರಂತೆ ನಟಿಸುವುದಕ್ಕೆ ಒಪ್ಪಿಕೊಂಡವರಲ್ಲ. ಇದು ಕನ್ನಡಿಗರು ಕಂಡ ನಿಜವಾದ ‘ಗಂಧದ ಗುಡಿ’. ಕನ್ನಡ ಚಿತ್ರರಂಗದ ಆರಂಭದಿಂದ ತೊಂಬತ್ತರ ದಶಕದವರೆಗೂ ತೆರೆಯ ಮೇಲೆ ವಿಜೃಂಭಿಸಿ ನೋಡುಗರಿಗೆ ಮನರಂಜನೆ ನೀಡಿದ ಕಲಾವಿದರ
ದುರಾದೃಷ್ಟವೇನೆಂದರೆ, ನೂರಾರು ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಮೂರುಕಾಸು ಸಂಪಾದನೆ ಮಾಡಿದರೂ ತಮ್ಮ ಕೊನೆಗಾಲದಲ್ಲಿ ಅನಾರೋಗ್ಯದಿಂದ ನರಳಿ ದಯನೀಯವಾಗಿ ಸಾವನ್ನಪ್ಪಿರುವುದೇ ಹೆಚ್ಚು.

ಹೊತ್ತುಗೊತ್ತಿಲ್ಲದ ಸ್ಥಳಗಳಲ್ಲಿ ಶಿಸ್ತಿಲ್ಲದ ದಿನಚರಿಗಳಲ್ಲಿ ಊಟ ತಿಂಡಿ ನಿದ್ರೆ ಮಾಡುತ್ತಾ ಹೊಟ್ಟೆೆಪಾಡಿಗಾಗಿ ಸಂಸಾರದ ನಿರ್ವಹಣೆಗಾಗಿ ತಮ್ಮ ಕಲಾಬದುಕನ್ನು ಸವೆಸಿದ ಮಹಾನ್‌ನಟರುಗಳು ಅತಿಯಾದ ಮದ್ಯಪಾನ ಧೂಮಪಾನ ವ್ಯಸನಗಳಿಂದ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡು ಮಧುಮೇಹ ರಕ್ತದೊತ್ತಡ ಯಕೃತ್ತು ಮತ್ತು ಮೂತ್ರಪಿಂಡದ ವೈಫಲ್ಯದಿಂದಲೇ ಅಸುನೀಗಿದ್ದು ಹೆಚ್ಚು. ಧೀರೇಂದ್ರ ಗೋಪಾಲ್, ರಾಜಾರಾಂ, ವಜ್ರಮುನಿ, ಸುಧೀರ್, ಪ್ರಭಾಕರ್, ಸುಂದರಕೃಷ್ಣ ಅರಸ್, ತೂಗುದೀಪ ಶ್ರೀನಿವಾಸ್, ಮುಸುರಿ ಕೃಷ್ಣಮೂರ್ತಿ, ಎನ್.ಎಸ್.ರಾವ್ ಹೀಗೆ ಅನೇಕ ಕಲಾವಿದರು ಬೆಳ್ಳಿತೆರೆಯ ಮೇಲೆ
ಚಪ್ಪಾಳೆ ಗಿಟ್ಟಿಸಿಕೊಳ್ಳುವಂತೆ ನಟಿಸಿದರೂ ಅವರ ಅನಾರೋಗ್ಯ ಸಮಸ್ಯೆೆಗಳು ಅವರನ್ನು ಅಕಾಲಿಕ ಸಾವಿಗೆ ದೂಡಿತ್ತು. ನೂರು – ಐನೂರು- ಸಾವಿರಗಳಲ್ಲಿ ಸಂಭಾವನೆ ಪಡೆದು, ಅದರಿಂದ ತಮ್ಮ ಸಂಸಾರ ನಡೆದರೆ ಸಾಕು ಎಂಬ ತೃಪ್ತಿಯನ್ನು ಬಯಸುತ್ತಿದ್ದರೆ
ಹೊರತು ಬೇರೇನೂ ಇರಲಿಲ್ಲ.

ಆದರೆ ಇಂದು ಸ್ಯಾಾಂಡಲ್ವುಡ್ ಎಂದು ಕರೆಸಿಕೊಂಡಿರುವ ಕನ್ನಡ ಚಿತ್ರರಂಗದಲ್ಲಿ ಕೆಲ ನಾಲಾಯಕ್ಕು ನಟನಟಿಯರ ವೈಯಕ್ತಿಕ ತೆವಲು ಗಳಿಂದ ಡ್ರಗ್‌ಸ್‌ ವ್ಯಸನ ದಂಧೆಯ ಮಾರುಕಟ್ಟೆೆಯನ್ನು ತೆರೆದು ಸಮಾಜವನ್ನೂ ಹಾಳು ಮಾಡುತ್ತಿರುವುದು
ಶೋಚನೀಯ. ಹೊಟ್ಟೆೆಪಾಡು ಅತ್ಲಾಗಿರಲಿ ಅದೊಂದನ್ನು ಬಿಟ್ಟು ಸೆಲೆಬ್ರಿಟಿ ಎಂಬ ಅಡ್ಡಹೆಸರಿನಿಂದ ಮೋಜು ಮಸ್ತಿ ಮಾಡುವುದಕ್ಕಾಗಿಯೇ ಬಣ್ಣಹಚ್ಚಿ ವಿಕೃತ ಸುಖ, ಅನೈತಿಕ ಮಜಾ ಅನುಭವಿಸುವ ಅಡ್ಡಕಸುಬಿಗಳೇ ಹೆಚ್ಚಾಗಿದ್ದಾರೆ.

ಒಂದೆರೆಡು ಚಿತ್ರಗಳಲ್ಲಿ ನಟಿಸಿಬಿಟ್ಟರೆ ಸಾಕು ದುರಹಂಕಾರ ತಲೆಹತ್ತಿ ತಿರುಗುವಂತೆ ಮಾಡಿಬಿಡುತ್ತದೆ. ತಾನು ಯಾವ
ರಾಜಕಾರಣಿ, ಮಂತ್ರಿಗಳಿಗೂ ಕಡಿಮೆ ಇಲ್ಲ ಎಂಬ ತಿಮಿರು ಬೆಳೆದುಬಿಡುತ್ತದೆ. ಸಮಾಜದ ಮೇಲೊಂದು ಅಸಡ್ಡೆ ನಿರ್ಲಕ್ಷ್ಯ ಹುಟ್ಟಿ ಬಿಡುತ್ತದೆ. ಮಾದಕದ ಮದವೇರಿ ತಾನು ಮಾಡಿದ್ದೇ ಸರಿ ಎಂಬ ತಿಕ್ಕಲು ಮೈಗೂಡಿಬಿಡುತ್ತದೆ. ಇಂಥವರನ್ನು ರಸ್ತೆಯಲ್ಲಿ
ಪೊಲೀಸರು ತಡೆದು ನಿಲ್ಲಿಸಿದರೆ ಅವರನ್ನೇ ಗದರಿಸುವಷ್ಟು ದುರಹಂಕಾರ ಬೆಳೆದು ಸಮಾಜದಲ್ಲಿ ಅತ್ಯಂತ ಗಣ್ಯವ್ಯಕ್ತಿ ತಾನೆಂದು ಉನ್ಮಾದದಲ್ಲೇ ತೇಲುವುದೇ ಹೆಚ್ಚಾಗಿದೆ. ಇಂದಿನ ಒಬ್ಬ ಧಾರವಾಹಿಯ ನಟ ನಟಿಯನ್ನು ಕಾನ್ಸ್ಟೆೆಬಲ್ ತಡೆದು ನಿಲ್ಲಿಸಿ ದಾಖಲೆ
ಗಳನ್ನು ಕೇಳಿ ನೋಡಲಿ ಅವರ ವರ್ತನೆ ದರ್ಪ ಹೇಗಿರುತ್ತದೆಂದು ಪೊಲೀಸರನ್ನೇ ಕೇಳಿನೋಡಿ. ಈಗ ಬಂಧನದಲ್ಲಿರುವ ರಾಗಿಣಿಯ ಆಪ್ತನೊಬ್ಬ ದಿನಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಹಣನೀಡಿ ಆಕೆಯೊಂದಿಗೆ ‘ಲಿವಿಂಗ್ ಟುಗೆದರ್’ ಕಳೆಯುತ್ತಿದ್ದೆೆನೆಂದು ಹೇಳಿಕೆ ನೀಡಿದ್ದಾನೆಂದರೆ ಇಂಥ ಅನಿಷ್ಟರ ಅನೈತಿಕ ‘ಸ್ವರ್ಗಸುಖ’ ಇನ್ನೆೆಂಥದ್ದಿರಬಹುದು. ಒಂದೆಡೆ ಇವರ ಪಲ್ಲಕ್ಕಿ ಹೊರುವ ಸಿನಿಮಾ ಕಾರ್ಮಿಕರು ಒಂದೊತ್ತಿನ ಊಟಕ್ಕೂ ಸಂಕಷ್ಟ ಅನುಭವಿಸುತ್ತಿದ್ದರೆ ಇವರುಗಳ ಅನೈತಿಕ ವೈಭೋಗಕ್ಕೆ ಎಣೆಯೇ ಇಲ್ಲ.

ಅಗತ್ಯಕ್ಕಿಿಂತಲೂ ಹೆಚ್ಚು ಹಣ ಹರಿದು ಬಂದಾಗ ಇನ್ನೂ ಏನೇನೋ, ಮತ್ತೇನೋ ಬೇಕು ಅನಿಸಿದಾಗಲೇ ಈ ಡ್ರಗ್‌ಸ್‌ ಎಂಬ
ಮಾದಕಗಳು ಅಗತ್ಯವೆನಿಸುತ್ತದೆ. ಇವುಗಳ ಸಾರ್ಥಕತೆಗಾಗಿಯೇ ಪಬ್‌ಗಳು ಕ್ಲಬ್‌ಗಳು ಪಾರ್ಟಿಗಳು ರೆಸಾರ್ಟ್‌ಗಳು ವೀಕ್‌ಎಂಡ್
ಮೋಜುಗಳ ಅಗತ್ಯತೆ ಹುಟ್ಟಿಕೊಳ್ಳುತ್ತವೆ. ಮದುವೆ ಸಂಸಾರ ಹೆರಿಗೆಗಳಿಗಿಂತ ‘ಆಪ್ತರು’ ‘ಬ್ರದರ್’ಗಳೇ ಆಪತ್ಭಾಾಂದವರಾಗಿ ಎಡತಾಕುತ್ತಾರೆ. ರಾಜಕಾರಣಿಗಳು ಅವರ ಮಕ್ಕಳು ಹತ್ತಿರವಾಗುತ್ತಾರೆ. ಬಳಕೆದಾರರು ಚಂದಾದಾರರಾಗುತ್ತಾರೆ.

ಇವುಗಳನ್ನೇ ಅಲ್ಲವೇ ನಟ ನಿರ್ದೇಶಕ ಉಪೇಂದ್ರ ಅವರು ತಮ್ಮ ‘ಎ’ ಚಿತ್ರದಲ್ಲಿ ಹಸಿಹಸಿಯಾಗಿ ತೋರಿಸಿರುವುದು. ಈಗ ಸಿಕ್ಕಿಬಿದ್ದಿರುವ ಸಿಕ್ಕಿಬೀಳುತ್ತಿರುವ ಗಾಂಜಾ ಘಾಟು ಪಕ್ಕಕ್ಕಿಟ್ಟು ನೋಡಿದರೆ ಈ ಡ್ರಗ್‌ಸ್‌ ದಂಧೆ ಭ್ರಷ್ಟಾಚಾರದಂತೆಯೇ ಅನೇಕ ದಶಕಗಳಿಂದ ಜೀವಂತವಾಗಿತ್ತೆೆಂಬುದನ್ನು ಅಲ್ಲಗಳೆಯುವಂತಿಲ್ಲ. ಈಗ ನಡೆಯುತ್ತಿರುವ ಸಿಸಿಬಿ ತನಿಖೆಯಲ್ಲಿ ಹೊರಬರು ತ್ತಿರುವ ವಿಚಾರಗಳನ್ನು ಅವಲೋಕಿಸಿದರೆ ಶಾಸಕರು, ಮಾಜಿ ಶಾಸಕರು, ಪಾಲಿಕೆ ಸದಸ್ಯರುಗಳ ಮಟ್ಟದಲ್ಲಿ ಅವರ ಮಕ್ಕಳು ಅವರ ‘ಅನಕ್ಷರಸ್ಥರು ್ತರು, ಅಮಾಯಕರು’ ನಟನಟಿಯರ ಮಟ್ಟದಲ್ಲಿ ಡ್ರಗ್‌ಸ್‌ ದಂಧೆ ಅಬಾಧಿತವಾಗಿ ನಡೆದುಕೊಂಡು ಬರುತ್ತಿರುವುದು ಸುಳ್ಳಲ್ಲ.

ಇದು ತಿಳಿಯದ ವಿಚಾರವಂತೂ ಅಲ್ಲವೇ ಅಲ್ಲ. ಇದರ ಜಾಡನ್ನು ಹಿಡಿದು ಕೆದಕುತ್ತಾ ಹೋದರೆ ದಶಕಗಳ ಹಿಂದೆ ನಟಿ ಯೊಬ್ಬಳು ನಿಗೂಢ ವಾಗಿ ಮಹಡಿಯಿಂದ ಬಿದ್ದು ಸತ್ತದ್ದು, ವಿಶ್ವವಿಖ್ಯಾತ ರಾಜಕಾರಣಿಯ ರಕ್ತಸಂಬಧಿ ದೇಶದಲ್ಲಿ ಆಕಸ್ಮಿಕವಾಗಿ ಸತ್ತದ್ದು, ನಟನೊಬ್ಬ ತನ್ನ ಧರ್ಮಪತ್ನಿಯೊಂದಿಗೆ ವಿಕೃತವಾಗಿ ನಡೆದುಕೊಂಡಿದ್ದು, ಶಾಸಕನ ಪುಂಡ ಮಗ ಮತ್ತು ಅವನ ಸ್ನೇಹಿತರ ಹೊಡೆದಾಟ, ಮೈಸೂರಿನಲ್ಲಿ ಡೈನಾಮಿಕ್ ಆಕ್ಸಿಡೆಂಟ್ ಆಗಿದ್ದು, ಮತ್ತೊಬ್ಬ ನಟ ಅನಿರೀಕ್ಷಿತವಾಗಿ ಅಸುನೀಗಿದ್ದು, ಶರ್ಮಿಳಾ ಮಂಡ್ರೆ ಆಕ್ಸಿಡೆಂಟು, ಇನ್ನೂ ಅನೇಕ ಅಗೋಚರ ಯಡವಟ್ಟುಗಳ ಮೂಲವನ್ನು ಅನುಮಾನಿಸುವಂತಾಗಿದೆ. ಪಾದರಾಯನಪುರ, ಡಿ.ಜೆ ಹಳ್ಳಿ – ಕೆಜಿ ಹಳ್ಳಿ ಗಲಭೆಗಳಿಗೆ ‘ಇಂಧನ’ ವಾಗಿದ್ದದ್ದೂ ಈ ಗಾಂಜಾ ಏಟೇ ಎಂಬುದೂ ಈಗ ಬೆಳಕಿಗೆ ಬರುತ್ತಿದೆ.

ಇಂದು ಮಾಧ್ಯಮಗಳಲ್ಲಿ ದೂಷಿಸಲಾಗುತ್ತಿರುವ ‘ಸ್ಯಾಾಂಡಲ್‌ವುಡ್, ಗಂಧದಗುಡಿ’ಯನ್ನು ಡ್ರಗ್‌ಸ್‌ ಮಾಫಿಯಾದೊಂದಿಗೆ ತಳಕು ಹಾಕಲಾಗುತ್ತಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಈ ಡ್ರಗ್ಗಿಣಿ, ಸಂಜನಾರಂಥ ನಟಿಯರ ಪರವಾಗಿ ನಿಂತು ಇಂದ್ರಜಿತ್, ಪ್ರಶಾಂತ ಸಂಬರಗಿಯಂಥವವರನ್ನು ದೂಷಿಸುತ್ತಿರುವುದು ಅಸ್ಯಾಸ್ಪದವಾಗಿದೆ. ರಾಗಿಣಿಯನ್ನೇ ಇಡೀ ಕನ್ನಡಚಿತ್ರರಂಗ ಎಂಬ ಬಿಂಬಿಸುತ್ತಿರುವುದು ಕನ್ನಡಚಿತ್ರರಂಗಕ್ಕೆ ತರುತ್ತಿರುವ ಕಂಳಕ. ನೋಡಿ, ಈಗ ಇವರ ಬಣ್ಣ ಒಂದೊಂದೇ ಕಳಚಿ ಕೊಳ್ಳುತ್ತಿದೆ.
ಇಂಥ ನಟನಟಿಯರು ಅನೈತಿಕ ವ್ಯಸನ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾಗ ಅವರನ್ನು ಕರೆದು ಬುದ್ಧಿ ಹೇಳಲಾಗದವರು ಈಗ ಅವರ ಪರ ವಕಾಲತ್ತು ವಹಿಸುವುದು ಯಾವ ನೈತಿಕತೆ?.

ರಾಜಣ್ಣನವರ ಹೆಸರಿನಲ್ಲಿ ನೂರಾರು ಸಂಘಗಳನ್ನು ಕಟ್ಟಿ ಬೆಳೆಸಿದ ಸಾ.ರಾ. ಗೋವಿಂದು ಅವರಿಗೇನಾಗಿದೆ?. ರಾಗಿಣಿ ಸಂಜನಾ ಅವರನ್ನು ನಿರ್ಮಾಪಕರು ಕೆಟ್ಟದಾಗಿ ನಡೆಸಿಕೊಂಡಿದ್ದರೆ ಅಥವಾ ಸಿನಿಮಾ ಮಾಡಿ ಹಣವನ್ನು ನೀಡದಿದ್ದರೆ ಅಥವಾ ಅವರ ಮೇಲೆ ವಿವಿಧ ರೀತಿಯ ಕಿರುಕುಳ ನೀಡಿದ್ದರೆ ಅದು ಚಿತ್ರರಂಗದ ಒಗ್ಗಟ್ಟಿನ ಪ್ರಶ್ನೆಯಾಗುತ್ತಿತ್ತು. ಆದರೆ ಇವರಿಂದ ಸಮಾಜ ಮತ್ತು
ಕಾನೂನು ವಿರೋಧಿ ಚಟುವಟಿಕೆಗಳು, ಸಮಾಜ ಘಾತಕ ಮೋಜು ಮಸ್ತಿಗಳು ನಡೆಯುತ್ತಿದ್ದರೆ ಅದನ್ನು ಎತ್ತಿ ತೋರಿಸುವುದು
ಅಪರಾಧವೇ?. ಸಂಬರಗಿಯಾಗಲಿ ಇಂದ್ರಜೀತ್ ಆಗಲಿ ಇಲ್ಲಿ ನೆಪ ಮಾತ್ರ. ಇಂಥ ದುಷ್ಕೃತ್ಯಗಳನ್ನು ಸಾಮಾನ್ಯ ನಾಗರಿಕನೂ ಖಂಡಿಸುವ ಹಕ್ಕನ್ನು ಹೊಂದಿರುತ್ತಾನೆ ಎಂಬುದನ್ನು ಇವರುಗಳು ಅರ್ಥಮಾಡಿಕೊಳ್ಳಲಿ.

ಕಾಲೇಜು ಮತ್ತು ಕೂಲಿಗಾಗಿ ಹೊರಹೋದ ಮಕ್ಕಳು ಇಂಥ ವ್ಯಸನಕ್ಕೆ ಒಳಗಾಗಿ ತಮ್ಮ ಬದುಕನ್ನೇ ನಾಶಮಾಡಿಕೊಂಡು ಮನೆಗೆ ಮಗನಲ್ಲ ಸ್ಮಶಾನಕ್ಕೆ ಹೆಣವಲ್ಲ ಎಂಬಂತಾಗಿ ಖಿನ್ನತೆ ಮಾನಸಿಕ ಅಸ್ವಸ್ಥತೆ ಆತ್ಮಹತ್ಯೆಗಳಿಂದ ಅದೆಷ್ಟೋ ಮನೆಗಳು ಹಾಳಾಗಿವೆ. ತಜ್ಞ ವೈದ್ಯರು ಸ್ಪಷ್ಟಪಡಿಸಿರುವಂತೆ ಯಾವುದೇ ಡ್ರಗ್‌ಸ್‌ ಅತಿಯಾದರೆ ಅಥವಾ ಅತಿಯಾದ ಸೇವನೆಯಾದರೆ ಏಕಾಏಕಿ ಅದು ಹೃದಯದ ಮೇಲೆ ಪರಿಣಾಮಬೀರಿ ಹೃದಯ ಬಡಿತವೇ ನಿಂತುಹೋಗಿ ಸಾವು ಸಂಭವಿಸುವುದು ಸಹಜ. ಇನ್ನೊೊಂದೆಡೆ ಇಂಥ
ವ್ಯಸನಕ್ಕೆ ಒಳಗಾಗಿ ಎಂಥ ದುಷ್ಕೃತ್ಯಕ್ಕೂ ಕೈಜೋಡಿಸಿ, ಸಮಾಜಘಾತಕರಾಗಿ ಮಾರ್ಪಾಡಾಗುತ್ತಿರುವುದು ಇತ್ತೀಚಿನ ಗಲಭೆ ಗಳಲ್ಲಿ ಸಾಬೀತಾಗಿದೆ.

ಹೀಗಿರುವಾಗ ಇಂಥ ಹೈಟೆಕ್ ಮತ್ತು ದುಬಾರಿ ಮಜಾ ಮಾಡುವವರು, ಅದರ ಮಾರಾಟದ ವ್ಯವಹಾರ ಮಾಡುವವರು, ಅವರನ್ನು ಬಳಸಿಕೊಳ್ಳುವ ಪ್ರಭಾವಿಗಳು, ಇವರೆಲ್ಲರ ಹೆಸರನ್ನು ಮುಲಾಜಿಲ್ಲದೆ ಸಾರ್ವಜನಿಕರಿಗೆ ತಿಳಿಸಬೇಕಾದ ಅನಿವಾರ್ಯತೆ ಯಿದೆ. ದುಡ್ಡಿಗಾಗಿ ಸುಳ್ಳುಹೇಳುವುದು, ಕಳ್ಳತನ ಮಾಡುವುದು ಎಷ್ಟು ಅವಮಾನೀಯವೋ ದುಡ್ಡು ಹೆಚ್ಚಾಗಿ ಗಾಂಜಾ ಅಫೀಮು ಡ್ರಗ್‌ಸ್‌ ಸೇವನೆ ಮಾಡಿ ಮಜಾ ಮಾಡುವುದೂ ಸಹ ನಾಚಿಗೇಡಿನ ವಿಚಾರ. ಇಂದು ಕೇವಲ ಇಬ್ಬರು ಗಾಂಜಾವಾಲಿಗಳು ಅವರ ಆಪ್ತರುಗಳು ಮಾತ್ರ ಬಂಧಿತರಾಗಿದ್ದಾರೆ.

ಮುಂದೆ  ಅವರಿಂದ ಇನ್ನೂ ಯಾವ್ಯಾವ ಮಹಾನುಭಾವರ ಹೆಸರುಗಳು ಹೊರಬಂದು ಅವರ ‘ಅಭಿಮಾನಿ ದೇವರುಗಳಿಗೆ’ ಆಘಾತವಾಗುತ್ತದೋ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಇಂಥ ಅನಿಷ್ಟರನ್ನು ರಾಜಕೀಯ ಪಕ್ಷಗಳೊಂದಿಗೆ ತಗಲಿಸುವ ರಾಜಕೀಯ ಮಾತ್ರ ಅಸಹ್ಯಕರ. ಎಲ್ಲಾ ಪಕ್ಷಗಳಲ್ಲೂ ಇವರ ಉಪಕೃತರಿರುವುದು ಸಮಾಜಕ್ಕೆ ತಿಳಿಯದ ವಿಷಯವೇನಲ್ಲ. ಅಂಥ ಐಎಎಸ್ ಅಧಿಕಾರಿ ಬಿ.ಕೆ.ರವಿ, ಪೊಲೀಸ್ ಅಧಿಕಾರಿ ಗಣಪತಿಯವರ ಕೇಸಿನ ಗತಿ ಏನಾಯಿತೆಂದು ಸಾರ್ವಜನಿಕರು ಮರೆತು
ಹೋಗಿದ್ದಾರೆ. ಅಷ್ಟೇ ಏಕೆ ಕರೋನಾದಂಥ ಕರೋನಾವನ್ನೇ ಜನ ಮರೆತು ಹೋಗಿದ್ದಾರೆ. ಇನ್ನು ಈ ಗಾಂಜಾ ಗತಿಯೂ ಅಷ್ಟೇ ಎಂಬುದನ್ನು ಮನಗಂಡಿದ್ದಾರೆ.

ಅದರಂತೆ ಇಂಥ ಕೇಸುಗಳು ಆರಂಭದಲ್ಲಿ ಮದವೇರಿ ಕಾಲಕ್ರಮೇಣ ಅದರ ಕಿಕ್ ಇಳಿದು ಬಿದ್ದುಹೋಗುವುದೇ ಹೆಚ್ಚು. ಹಾಗಾಗದೆ ತನಿಖೆ ಯಶಸ್ವಿಯಾಗಿ ಯಾವ ಮುಲಾಜಿಲ್ಲದೆ ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾದರೆ ಸಮಾಜ ಸಾರ್ಥಕವಾಗುತ್ತದೆ.
ಕರೋನಾ ಕಂಟಕದಿಂದ ಚಿತ್ರೋದ್ಯಮವೇ ಮುದುಡಿ ಕುಂತಿದೆ. ಚಿತ್ರಮಂದಿರ ತೆರೆದರೂ ಪ್ರೇಕ್ಷಕರು ಬರುವುದು ಅನುಮಾನ ವಿದೆ. ಹೀಗಿರುವಾಗ ಸ್ಯಾಾಂಡಲ್‌ವುಡ್ ಎಂಬುದನ್ನು ಗಾಂಜಾಗಿಣಿಗಳ ಡ್ರಗ್‌ಸ್‌‌ಮಣಿಗಳ ಸ್ಕ್ಯಾಾಂಡಲ್‌ಗಳೊಂದಿಗೆ ತಳಕು
ಹಾಕದೆ ಕನ್ನಡ ಚಿತ್ರರಂಗದ ಪಾವಿತ್ರ್ಯವನ್ನು ಉಳಿಸಿಕೊಳ್ಳಬೇಕಾದ ಹೊಣೆಗಾರಿಕೆ ದೊಡ್ಡಣ್ಣರಾದ ಶಿವಣ್ಣ, ರವಿಚಂದ್ರನ್‌ರಂಥ ಕಷ್ಟಜೀವಿಗಳ ಮೇಲಿದೆ.

ಚಿತ್ರರಂಗದಲ್ಲಿ ಇಂಥವನೊಬ್ಬ ದಾರಿತಪ್ಪುತ್ತಿದ್ದರೆ ಅವರನ್ನು ತಿದ್ದಲಿ. ಅದನ್ನು ಬಿಟ್ಟು ಚಿತ್ರರಂಗವನ್ನು ತಮ್ಮ ವೈಯಕ್ತಿಕ ತೀಟೆ ತೆವಲಿಗೆ ಬಳಕೆ ಮಾಡಿಕೊಳ್ಳುವ ಮಾನಗೇಡಿಗಳನ್ನು ಸಮರ್ಥಿಸಿಕೊಳ್ಳದೆ ಒದ್ದು ಹೊರಹಾಕಲಿ. ಆ ಮೂಲಕ ಚಿತ್ರರಂಗ ಸಮಾಜಿಕ ಬದ್ಧತೆ ತೋರಿ ಅಭಿಮಾನಿ ದೇವರುಗಳನ್ನು ಉಳಿಸಿಕೊಳ್ಳುವಂತಾಗಲಿ.