ನವದೆಹಲಿ : ಬೆಂಗಳೂರಿನಲ್ಲಿ ನಡೆದ ಇಂಧನ ಸಪ್ತಾಹದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಇ20 ಪೆಟ್ರೋಲ್ (E20 Petrol) ಬಳಕೆಗೆ ಚಾಲನೆ ನೀಡಿದ್ದಾರೆ. ಇದು ಎಥೆನಾಲ್ ಮಿಶ್ರಿತ ಪೆಟ್ರೋಲ್ ಆಗಿದ್ದು, ಭವಿಷ್ಯದ ಇಂಧನ ಎಂದೇ ಹೇಳಲಾಗುತ್ತಿದೆ.
ಇದೇ ವೇಳೆ ಕೇಂದ್ರ ಸರಕಾರವೂ ವಾಹನಗಳ ಉತ್ಪಾದನೆ ವೇಳೆ ಪಾಲಿಸಬೇಕಾದ ಬಿಎಸ್6 ಮಾನದಂಡದಲ್ಲಿ ಮಾರ್ಪಾಟು ಮಾಡಿದ್ದು, ಕಂಪನಿಗಳು ಇ20 ಪೆಟ್ರೋಲ್ನಿಂದ ಕೆಲಸ ಮಾಡುವ ಎಂಜಿನ್ಗಳನ್ನು ತಯಾರಿಸ ಬೇಕಾಗಿದೆ. ಹೀಗಾಗಿ ಭವಿಷ್ಯದಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ಗೆ ಬೇಡಿಕೆ ಹೆಚ್ಚಾಗಲಿದೆ. ಈ ನಿರೀಕ್ಷೆಯೊಂದಿಗೆ ರಿಲಯನ್ಸ್ ಒಡೆತನದ ಜಿಯೊ ಸಂಸ್ಥೆಯು ಇ20 ಪೆಟ್ರೋಲ್ ಬಂಕ್ಗಳನ್ನು ಸ್ಥಾಪಿಸಲು ಮುಂದಾಗಿದೆ.
ಭಾರತದಲ್ಲಿ ಇ20 ಪೆಟ್ರೋಲ್ ವಿತರಣೆಗೆ ಮುಂದಾಗಿರುವ ಜಿಯೊ ಸಂಸ್ಥೆಯು ಬ್ರಿಟನ್ ಮೂಲದ ಬಿಪಿ ಕಂಪನಿ ಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಜಿಯೊ-ಬಿಪಿ ಪೆಟ್ರೋಲ್ ಬಂಕ್ಗಳಲ್ಲಿ ಇ2ಒ ಪೆಟ್ರೋಲ್ ಎಂಜಿನ್ ಹೊಂದಿರುವ ವಾಹನಗಳಿಗೆ ಇಂಧನ ದೊರೆಯಲಿದೆ.
ಇ20 ಪೆಟ್ರೋಲ್ನಲ್ಲಿ ಶೇ.20ರಷ್ಟು ಎಥೆನಾಲ್ ಇದ್ದರೆ, ಶೇಕಡಾ 80 ಪೆಟ್ರೋಲ್ ಇರುತ್ತದೆ. ಇದಕ್ಕೆ ಬೇಕಾಗಿರುವ ಎಥೆನಾಲ್ ಅನ್ನು ಕಬ್ಬಿನ ತ್ಯಾಜ್ಯ ಅಂದರೆ ಸಕ್ಕರೆ ಕಾರ್ಖಾನೆ ಅಥವಾ ಆಹಾರ ಧಾನ್ಯಗಳಿಂದ ಪಡೆಯುವುದು ಕೇಂದ್ರ ಸರಕಾರದ ಯೋಜನೆಯಾಗಿದೆ. ಇದರಿಂದ ಪೆಟ್ರೋಲ್ಗಾಗಿ ವಿದೇಶ ಗಳ ಅವಲಂಬನೆಯನ್ನು ಕಡಿಮೆಯಾಗುತ್ತದೆ ಹಾಗೂ ಪರಿಸರಕ್ಕೂ ಈ ಇಂಧನ ಪೂರಕವಾಗಿದೆ.
ರಿಲಯನ್ಸ್ ಜಿಯೊ ಹಾಗೂ ಬಿಪಿ ಕಂಪನಿ ಈಗಾಗಲೇ ದೇಶಾದ್ಯಂತ 15,10 ಪೆಟ್ರೋಲ್ ಸ್ಟೇಷನ್ಗಳನ್ನು ಹೊಂದಿದೆ. ಇಲ್ಲೆಲ್ಲ ಇ20 ಪೆಟ್ರೋಲ್ ದೊರೆಯಲಿದೆ. ಭವಿಷ್ಯದಲ್ಲಿ ಸ್ಟೇಷನ್ಗಳ ಸಂಖ್ಯೆಯೂ ಹೆಚ್ಚಾಗಲಿದೆ.