Sunday, 15th December 2024

ನಿರುದ್ಯೋಗ ನಿವಾರಣೆಗೆ ಬೇಕಿದೆ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ

ಚುನಾವಣಾ ವರ್ಷದ ಹೊಸ್ತಿಲಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸುತ್ತಿರುವ ೨೦೨೩-೨೪ನೇ ಸಾಲಿನ ಬಜೆಟ್ ಬಗ್ಗೆ ರಾಜ್ಯದ ಜನರಲ್ಲಿ ಬಹಳಷ್ಟು ನಿರೀಕ್ಷೆಗಳು ಗರಿಗೆದರಿವೆ. ರಾಜ್ಯ ಅಭಿವೃದ್ಧಿಯ ಮುನ್ನೊಟಕ್ಕೆ ಕನ್ನಡಿ ಹಿಡಿಯುವ ಮಹತ್ವದ ಬಜೆಟ್ ಇದಾಗಲಿದೆ ಎಂದು ಜನರು ಭರವಸೆ ಇಟ್ಟುಕೊಂಡಿದ್ದಾರೆ. ಈ ಬಜೆಟ್ ವಿಷಯದಲ್ಲಿ ಪ್ರತಿ ಜಿಯೂ ತನ್ನದೇ ಆದ ಭರವಸೆ ಇಟ್ಟುಕೊಂಡಿವೆ.

ವರ್ಷಗಳಿಂದ ಮುಕ್ತಿ ಕಾಣದ ಯೋಜನೆಗಳು, ಹೊಸ ಕನಸಿನ ಗೋಪುರಗಳು ಜನರ ಎದೆಯಾಳದಲ್ಲಿವೆ. ಅವುಗಳಿಗೆ ಬೊಮ್ಮಾಯಿ ಬಜೆಟ್ ಅದೆಷ್ಟು ಮಟ್ಟಿಗೆ ಸ್ಪಂದಿಸುತ್ತದೆ ಎನ್ನುವುದು ಕುತೂಹಲದ ಪ್ರಶ್ನೆ. ಮುಖ್ಯವಾಗಿ ನಿರು ದ್ಯೋಗ ಸಮಸ್ಯೆಗೆ ಯಾವ ರೀತಿಯ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂಬುದನ್ನು ಜನರು ಕಾದು ನೋಡು ತ್ತಿದ್ದಾರೆ. ರಾಜ್ಯದ ಜನರು ಉದ್ಯೋಗಕ್ಕಾಗಿ ಬೆಂಗಳೂರನ್ನೇ ನಂಬಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗಕ್ಕಾಗಿ ರಾಜ್ಯದ ಶೇ.೯೦ರಷ್ಟು ಜನ ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಡೆಯಲು ಉದ್ಯೋಗಾವಕಾಶ ಹೆಚ್ಚಿಸಬೇಕಿದೆ.

ಬೆಂಗಳೂರಿನ ಬಳಿಕ ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ದಾವಣಗೆರೆ, ಕಲಬುರಗಿ, ಮೈಸೂರು ಪ್ರಮುಖ ನಗರವಾಗಿ ಬೆಳೆಯುತ್ತಿವೆ. ರಸ್ತೆ, ವಿಮಾನ, ರೈಲು, ಜಲ ಸೇರಿದಂತೆ ಪ್ರಮುಖ ಸಾರಿಗೆ ಸಂಪರ್ಕಗಳಿವೆ. ಇದರ ಸಂಪೂರ್ಣ ಪ್ರಯೋಜನ ಪಡೆದುಕೊಂಡು ಐಟಿ ಕಂಪನಿ, ಕೈಗಾರಿಕೆಗಳನ್ನು ಸ್ಥಾಪಿಸಲು ಬಜೆಟ್‌ನಲ್ಲಿ ಪ್ರತ್ಯೆಕ ಅನುದಾನ ಘೋಷಣೆ ಮಾಡಬೇಕಿದೆ. ಪ್ರಸ್ತುತ ಭೂಮಿ ಬೆಲೆ ಗಗನಕ್ಕೆ ಏರಿರುವುದರಿಂದ ಈ ನಗರಗಳಲ್ಲಿ ಅತಿಸಣ್ಣ, ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಉದ್ಯಮಿಗಳಿಗೆ ಸಾಧ್ಯವಾಗುತ್ತಿಲ್ಲ.

ಇಂತಹವರ ಅನುಕೂಲಕ್ಕಾಗಿ ಕೈಗಾರಿಕಾ ಪ್ರದೇಶದಲ್ಲಿ ಒಂದು ಎಕರೆಯವರೆಗೆ ನಿವೇಶನವನ್ನು ರಿಯಾಯಿತಿ ದರದಲ್ಲಿ ಬಾಡಿಗೆ ಕೊಡುವ ಯೋಜನೆ ರೂಪಿಸಬೇಕು. ಜತೆಗೆ ಮಾಹಿತಿ ತಂತ್ರeನ ಪಾರ್ಕ್ ಮಾದರಿಯಲ್ಲಿ ಸುಮಾರು ೨,೦೦೦ದಿಂದ ೩,೦೦೦ ಚದರ ಅಡಿವರೆಗಿನ ಪ್ರದೇಶಗಳನ್ನು ಗುರುತಿಸಿ, ಸಣ್ಣ ಸಣ್ಣ ಉತ್ಪಾದನಾ ಘಟಕಗಳಿಗೆ ಬಹು ಉಪಯೋಗಿ ಬಳಕೆದಾರರ ಮಳಿಗೆಗಳ ಕಟ್ಟಡ ನಿರ್ಮಿಸಬೇಕು. ಈ ಕಟ್ಟಡದಲ್ಲಿರುವ ಸ್ಥಳವನ್ನು ೫ ಅಥವಾ ೧೦ ವರ್ಷಗಳ ಬಾಡಿಗೆ, ಗುತ್ತಿಗೆ ಆಧಾರದ ಮೇಲೆ ಉತ್ಪಾದನಾ ಘಟಕಗಳಿಗೆ ನೀಡಬೇಕು. ಈ ನಗರಗಳಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಸ್ಥಳಾವಕಾಶ ಕಲ್ಪಿಸಬೇಕು. ಆ ಮೂಲಕ ನಿರುದ್ಯೋಗ ನಿವಾರಣೆಗೆ ಆಸಕ್ತಿ ವಹಿಸಬೇಕು.