ನವದೆಹಲಿ: ರಾಜಧಾನಿಯಲ್ಲಿರುವ ತಮ್ಮ ನಿವಾಸದ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಸೋಮವಾರ ಆರೋಪಿಸಿದ್ದಾರೆ.
2014 ರಿಂದೀಚೆಗೆ ಇದು ನಾಲ್ಕನೇ ಘಟನೆ ಎಂದಿದ್ದಾರೆ. ರಾಜಸ್ಥಾನಕ್ಕೆ ಭೇಟಿ ನೀಡಿದ್ದ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ನಾಯಕ, ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿರುವು ದಾಗಿ ಹೇಳಿದ್ದಾರೆ. ‘ನನ್ನ ದೆಹಲಿ ನಿವಾಸದ ಮೇಲೆ ಮತ್ತೆ ದಾಳಿ ನಡೆದಿದೆ. 2014 ರಿಂದ ಇದು ನಾಲ್ಕನೇ ಬಾರಿ ನಡೆದ ದಾಳಿಯಾಗಿದೆ.
ದೆಹಲಿ ಪೊಲೀಸರು ಕೂಡಲೇ ಅವರನ್ನು ಹಿಡಿಯಬೇಕು’ ಎಂದು ಸರಣಿ ಟ್ವೀಟ್ಗಳಲ್ಲಿ ಹೇಳಿದ್ದಾರೆ. ‘ಇದು ‘ಹೈ ಸೆಕ್ಯುರಿಟಿ’ ವಲಯ ಎಂದು ಕರೆಯ ಲ್ಪಡುವ ಪ್ರದೇಶದಲ್ಲಿ ಸಂಭವಿಸಿರುವುದು ಕಳವಳಕಾರಿಯಾಗಿದೆ. ನಾನು ಪೊಲೀಸರಿಗೆ ದೂರು ಸಲ್ಲಿಸಿದ್ದೇನೆ ಮತ್ತು ಅವರು ನನ್ನ ನಿವಾಸವನ್ನು ತಲುಪಿದ್ದಾರೆಟ ಎಂದು ಓವೈಸಿ ಹೇಳಿದರು.