11 ಅಡಿ ಎತ್ತರದ ಇ-ಆನೆಯನ್ನು ಲೋಹ, ರಬ್ಬರ್ ಶೀಟ್ ಮತ್ತು ಮೋಟಾರು ಬಳಸಿ ತಯಾರಿಸಲಾಗಿದೆ. ಆನೆಯ ತಲೆ, ಕಿವಿಗಳು ಮತ್ತು ಬಾಲವು ಚಲಿಸಲು ಮೋಟಾರು ಅಳವಡಿಸಲಾಗಿದೆ. ಈ ಕೃತಕ ಆನೆಯು ಸೊಂಡಿಲಿನಿಂದ ನೀರನ್ನು ಸಿಂಪಡಿಸುವ ಸಾಮರ್ಥ್ಯವನ್ನೂ ಹೊಂದಿದೆ. ಇದರ ಚಲನೆಗಾಗಿ ಕಾಲುಗಳಿಗೆ ಚಕ್ರಗಳನ್ನು ಅಳವಡಿಸಲಾಗಿದ್ದು, ಆನೆ ಮೇಲೆ ನಾಲ್ವರು ಕುಳಿತುಕೊಳ್ಳಬಹುದಾಗಿದೆ ಎಂದು ದೇಗುಲದ ಮೂಲಗಳು ತಿಳಿಸಿವೆ.
ಇ- ಆನೆಗೆ ಇರಿಂಜಾಡಪಿಳ್ಳಿ ರಾಮನ್ ಎಂದು ಹೆಸರಿಡಲಾಗಿದೆ. ಇದು ಕೇರಳದ ಜನಪ್ರಿಯ ಸಾಕಾನೆ ತೆಚಿಕೊಟ್ಟು ಕಾವು ರಾಮಚಂದ್ರನ್ ಅನ್ನು ಹೋಲು ತ್ತಿದ್ದು, ಜನರ ಗಮನ ಸೆಳೆಯುತ್ತಿದೆ ಎಂದಿವೆ.
ದೇವಾಲಯವು ರಾಜ್‌ಕುಮಾರ್ ನಂಬೂದಿರಿ ಎಂಬುವವರ ಕುಟಂಬಕ್ಕೆ ಸೇರಿದ್ದು, ರಾಜ್‌ಕುಮಾರ್ ಅವರು ಇ-ಆನೆಯ ಮಾಲೀಕರಾಗಿದ್ದಾರೆ. ಇ-ಆನೆಯನ್ನು ದೇವಾಲಯದ ಆಚರಣೆಗಳಿಗೆ ಬಳಸಿಕೊಳ್ಳುತ್ತಿರುವುದು ಇದೇ ಮೊದಲು ಎಂದು ರಾಜ್‌ಕುಮಾರ್ ಹೇಳಿದ್ದಾರೆ.
₹5 ಲಕ್ಷಕ್ಕೆ ಇ-ಆನೆಯನ್ನು ಖರೀದಿಸಲಾಗಿದ್ದು, ಭಕ್ತರು ಇದಕ್ಕಾಗಿ ದೇಣಿಗೆ ನೀಡಿದ್ದಾರೆ. ಫೆಬ್ರುವರಿ 26ರಂದು ನಡೆಯುವ ಕಾರ್ಯಕ್ರಮದಲ್ಲಿ ಆನೆಯನ್ನು ಔಪಚಾರಿಕವಾಗಿ ದೇವಾಲಯಕ್ಕೆ ಪಡೆಯಲಾಗುವುದು ಎಂದೂ ಹೇಳಿದ್ದಾರೆ.