ಬಳಕೂರ ವಿ.ಎಸ್.ನಾಯಕ
ಈ ಚಿತ್ರಕಲೆ ಒಂದು ವಿಭಿನ್ನ ಪ್ರಕಾರ. ಅಲ್ಲಲ್ಲಿ ಕಾಣುವ ಚುಕ್ಕೆಗಳು, ಇವುಗಳ ಮಧ್ಯೆ ವೃತ್ತಾಕಾರಾದ ಆಕೃತಿ. ವಿಭಿನ್ನ ಪ್ರಕಾರದ
ಈ ಮಂಡಲಕಲೆಯಲ್ಲಿ ಪರಿಣಿತರಾದವರು, ಮಂಗಳೂರಿನ ಊರ್ವ ನಿವಾಸಿ, ಗಾಯತ್ರಿ ನಾಯಕ್.
ವೃತ್ತಿಯಲ್ಲಿ ಸಾಫ್‌ಟ್‌ವೇರ್ ಇಂಜಿನಿಯರ್ ಆಗಿರುವ, ಕಲಾ ಪ್ರಕಾರವನ್ನು ಹುಡುಕುತ್ತಾ, ಮಂಡಲ ಕಲೆಯ ಕಡೆ ಆಕರ್ಷಿತರಾ
ದರು. ಮಂಡಲ ಚಿತ್ರಗಳನ್ನು ಸಾಮಾನ್ಯವಾಗಿ ಹೋಮ, ಯಾಗ-ಯಜ್ಞಗಳ ಆಚರಣೆಯ ಸಂದರ್ಭದಲ್ಲಿ ಪೂಜಾ ಕರ್ತವ್ಯ ನಿರತರು ಬಿಡಿಸುವುದು ವಾಡಿಕೆ. ಶಾಂತಿ, ದುರ್ಗಾ ಪೂಜೆ, ಹೋಮ-ಹವನಗಳಲ್ಲಿ ಈ ಮಂಡಲಗಳನ್ನು ದೇವರ
ಪ್ರತಿಷ್ಠಾಪನೆಗೆ ಬಿಡಿಸುವುದು ಪ್ರಾರಂಭಿಕ ಹಂತ. ಈ ಸಂದರ್ಭಗಳಲ್ಲಿ ಕೆಲ ಬಣ್ಣಗಳನ್ನು ಸಾಂಕೇತಿವಾಗಿ ಬಳಸುತ್ತಾರೆ. ಮಂಡಲ
ಕಲೆಯಲ್ಲಿ ಮನಸ್ಸಿಗೆ ಬಂದಂತೆ ಬಣ್ಣ ಬಳಸುವಂತಿಲ್ಲ.
ಧಾರ್ಮಿಕ ಆಚರಣೆಗಳಿಗಾಗಿ ಮಂಡಲಗಳನ್ನು ಬಿಡಿಸಬೇಕಾದಲ್ಲಿ ಸಂದರ್ಭಾನುಸಾರ ನಿಯಮಗಳನ್ನು ಅನುಸರಿಸಬೇಕಾಗಿ ಬರುತ್ತದೆ. ಧಾರ್ಮಿಕ ಆಚರಣೆಗಳಲ್ಲಿ ಬಿಡಿಸುವ ಓಂ ಮಂಡಲ ಹಾಗೂ ಏಳು ಚಕ್ರಮಂಡಲದಂತಹ ರಚನೆಗಳನ್ನು ಬಿಡಿಸು ವಾಗ ಬಳಸಲಾಗುವ ಒಂದೊಂದು ಬಣ್ಣಕ್ಕೂ ತನ್ನದೇ ಆದಂತಹ ವಿಶಿಷ್ಟ ಕಲ್ಪನೆ ಹಾಗೂ ಅರ್ಥವಿರುತ್ತದೆ. ನಿರ್ದಿಷ್ಟ ನಿಯಮ ದಂತೆ ಶಾಸ್ತ್ರೀಯವಾಗಿ ರಚಿಸುವ ಬದ್ಧತೆಯೂ ಇರುತ್ತದೆ.
ಆದರೆ ಧಾರ್ಮಿಕವಲ್ಲದ ಮಂಡಲಗಳನ್ನು ಬಿಡಿಸುವಾಗ ಕ್ರಿಯಾತ್ಮಕ ಶೈಲಿಯಲ್ಲಿ, ವೀಕ್ಷಿಸುವವನ ಕಣ್ಣರಳಿಸುವಂತಾಗಲು, ವಿಭಿನ್ನ ರೀತಿಯಲ್ಲಿ ಸುಂದರವಾಗಿ ಬಿಡಿಸಬಹುದು. ವಿವಿಧ ಬಣ್ಣಗಳ ಹೂವಿನ ಆಕೃತಿಯಲ್ಲಿ ಮಂಡಲಗಳನ್ನು ಬಿಡಿಸುವಾಗ ಆಯಾಯ ಹೂವಿನ ಸಂಯೋಜಿತ ಬಣ್ಣಗಳನ್ನೇ ಬಳಸಲಾಗುತ್ತದೆ. ಗಾಯತ್ರಿ ನಾಯಕ್ ಅವರು ಸಾಂಪ್ರದಾಯಿಕ ಮಂಡಲಗಳ ಪರಿಕಲ್ಪನೆಯನ್ನು ಉಪಯೋಗಿಸಿಕೊಂಡು, ನವಿಲು, ಕಥಕ್ಕಳಿ ವೇಷ ಮೊದಲಾದ ವಿವಿಧ ಚಿತ್ತಾರಗಳನ್ನು ಬಿಡಿಸುವುದರಲ್ಲಿ ಎತ್ತಿದಕೈ. ಇವರು ವಿಶೇಷವಾಗಿ ಕಲ್ಲು, ಕ್ಯಾನವಾಸ್ ಹಾಗೂ ಸೀಡಿಗಳ ಮೇಲೆ ಬಿಡಿಸಿರುವಂತಹ ಮಂಡಲಗಳನ್ನು ನೋಡು ವುದೇ ಒಂದು ಆನಂದ.
ಕಪ್ಪು ಬಣ್ಣದಲ್ಲಿ ಮಂಡಲಗಳನ್ನು ವಿಭಿನ್ನ ರೀತಿಯಲ್ಲಿ ಬಿಡಿಸುವ ಇವರ ನಿಪುಣತೆ ಈ ಕ್ಷೇತ್ರದಲ್ಲಿ ಇವರಿಗೆ ಒಂದು ವಿಶಿಷ್ಟ ಸ್ಥಾನ ದೊರಕಿಸಿಕೊಟ್ಟಿದೆ. ಧ್ಯಾನದ ಪರಿಕಲ್ಪನೆ ಮಂಡಲಕಲೆ ಒಂದು ಸೂಕ್ಷ್ಮ ಕಲೆ. ಚಿತ್ರಕಾರನು ಏಕಾಗ್ರಚಿತ್ತತೆಯಿಂದ ಮಂಡಲಗಳನ್ನು ಬಿಡಿಸುವ ಅಗತ್ಯತೆ ಇದೆ. ಗಾಯತ್ರಿಯವರು ಹೇಳುವಂತೆ, ಇದೊಂದು ರೀತಿಯಲ್ಲಿ ಧ್ಯಾನಾಭ್ಯಾಸವನ್ನು ಹೋಲುತ್ತದೆ. ಚಿಕ್ಕ ಚಿಕ್ಕ ಚುಕ್ಕಿಗಳನ್ನು ಜೋಡಿಸಿ, ಒಂದು ಕಲಾಕೃತಿಯ ರೂಪವನ್ನು ಕೊಡುವಲ್ಲಿ ಸಾಮಾನ್ಯವಾಗಿ 7-8 ಗಂಟೆ
ತಗಲುವುದೂ ಇದೆ. ಒಂದು ಸುಂದರವಾದ ಮಂಡಲವನ್ನು ಸಣ್ಣ ಚುಕ್ಕೆಗಳನ್ನು ಬಳಸಿ ಬಿಡಿಸಲು ಹೆಚ್ಚಿನ ಸಮಯ ಹಾಗೂ ದೊಡ್ಡ ಚುಕ್ಕೆಗಳನ್ನು ಜೋಡಿಸಿ ಬಿಡಿಸಲು ಕಡಿಮೆ ಸಮಯ ತಗಲುತ್ತದೆ.
ಆಸಕ್ತರಿಗೆ ಸಂತೋಷದಿಂದ ಕಲಿಸುವ ಇವರು, ಈ ಕಲೆಯನ್ನು ಪೋಷಿಸಿ, ಜನಪ್ರಿಯಗೊಳಿಸುವುದು, ತನ್ಮೂಲಕ ಈ ಪ್ರಾಚೀನ ಕಲೆಯನ್ನು ಮುಂದಿನ ಪೀಳಿಗೆಗಾಗಿ ರಕ್ಷಿಸಿಡುವುದು ತನ್ನ ಉದ್ದೇಶ ಎಂದು ಹೇಳುತ್ತಾರೆ.