ಸಂವಾದ ೫೩೪
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಡಾ.ಸತ್ಯವತಿ ಮೂರ್ತಿ ಅವರಿಂದ ವಿಶೇಷ ಕಾರ್ಯಕ್ರಮ
ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಬೇರೆ ದೇಶದಲ್ಲಿದ್ದರೂ ಸಹ ಕನ್ನಡತನ ನನ್ನ ಆತ್ಮದಲ್ಲಿ ಅಡಗಿದೆ. ನಾನು ಎಲ್ಲಿದ್ದರೇನು ನನ್ನಲ್ಲಿ ನನ್ನ ಕನ್ನಡತನ ಕನ್ನಡ ಸಂಸ್ಕೃತಿಯನ್ನು ಮರೆಯಲು ಸಾಧ್ಯವಿಲ್ಲ ಎಂದು ಡಾ. ಸತ್ಯವತಿ ಮೂರ್ತಿ ಹೇಳಿದರು.
ವಿಶ್ವವಾಣಿ ಕ್ಲಬ್‌ಹೌಸ್ ನಲ್ಲಿ ಕವನ ವಚನ ಗಾಯನ ಸಮಯದಲ್ಲಿ ಮಾತನಾಡಿದ ಸತ್ಯವತಿ ಮೂರ್ತಿ ಅವರು, ಬೇರೆ ದೇಶದಲ್ಲಿದ್ದರೂ ಕನ್ನಡವನ್ನು ಮರೆಯುವುದು ಅಸಾಧ್ಯ. ಕನ್ನಡ ಪದಗಳ ಜಾಗದಲ್ಲಿ ಆಂಗ್ಲ ಪದಗಳು ಸೇರಿದ್ದರೂ ನನ್ನ ಕನ್ನಡಕ್ಕೆ ಯಾವ ಕೊರತೆಯುಂಟಾಗಿಲ್ಲ. ಎಲ್ಲಿದ್ದರೂ ನಾನು ಮಾತನಾಡುವುದು ಕನ್ನಡವನ್ನೇ. ನನ್ನ ಎಲ್ಲಾ ಅನುಭವಗಳನ್ನು, ಭಾವನೆಗಳನ್ನು ಭಾವರೂಪವಾಗಿ ಕಾವ್ಯಗಳಾಗಿ ಬರೆದಿದ್ದೇನೆ ಎಂದು ವಿವರಿಸಿ ದರು.
‘ಯುಗಾದಿ ಹಬ್ಬ’ ಕಾವ್ಯದಲ್ಲಿ ಪ್ರಸ್ತುತೆಯನ್ನು ಮರೆತು ಭವಿಷ್ಯದ ಮರೆಗೆ ಹೊಗಿ, ಮಾನವ ತನ್ನ ಸ್ಥಿತಿಯನ್ನು ಕಷ್ಟಕ್ಕೆ ಸಿಲುಕಿಸಿಕೊಳ್ಳುತ್ತಾನೆ. ಮುಂಬರುವ ದಿನಗಳು ಸುಂದರವೋ ಕುರೂಪವೋ ಭವಿಷ್ಯ ನಿರ್ಧರಿಸುತ್ತದೆ. ಆದರೆ ಇರುವ ಕ್ಷಣವನ್ನು ಸುಂದರ ವಾಗಿ ಮಾಡುವ ಪ್ರಯತ್ನ ಮಾನವ ಮಾಡಬೇಕು ಎಂಬುವುದು ಕವನದ ಸಾರಂಶವಾಗಿದೆ ಎಂದು ವಿವರಿಸಿದರು. ಮತ್ತೊಂದು ಕಾವ್ಯವಾಗಿರುವ ‘ಬುದ್ಧಿಮಾತು ಹೇಳಿದರೆ ಕೇಳಬೇಕು’ ಕವನದಲ್ಲಿ, ನಮ್ಮ ಪ್ರಕೃತಿಯನ್ನು ಮಾನವ ಮಿತಿ ಮೀರಿ ಅತ್ಯಾಚಾರ ಎಸಗಿದ್ದಾನೆ. ಈ ಕಾರಣಗಳಿಂದ ಪರಿಸರ ತನ್ನ ಸಮತೋಲನವನ್ನು ಕಳೆದುಕೊಂಡು ಪ್ರಕೃತಿಯ ವಿಕೋಪಕ್ಕೆ ಮನುಷ್ಯ ಬಲಿಪಶು ಆಗಿದ್ದಾನೆ.
ಇದರಿಂದ ಅತಿವೃಷ್ಟಿ – ಅನವೃಷ್ಟಿ , ವಾತವರಣದಲ್ಲಿ ವೈಪರಿತ್ಯ, ಗಾಳಿ ಮಾಲಿನ್ಯ ಎಲ್ಲಾವು ಸಂಭವಿಸಿದೆ ಎಂದು ಹಾಡಿನ ಸಾರಂಶವಾಗಿದೆ ಎಂದರು.
ನಾನೇಕೆ ಬುದ್ಧನಾಗಿಲ್ಲ ಪದ್ಯದಲ್ಲಿ ಬುದ್ಧನಿಗೆ ವೈರಾಗ್ಯ ಮೂಡಿದ ಕೂಡಲೇ ತನ್ನ ಸಿರಿ ಸಂಪತ್ತನ್ನು ಎಲ್ಲಾವನ್ನು ಬಿಟ್ಟು ಸತ್ಯಶೋಧನೆಗೆ ಕಾಡಿಗೆ
ಹೋರಟ. ಆದರೆ ನಮಗೆ ವೈರಾಗ್ಯ ಮೂಡಿದರು ಸಹ ಕುಟುಂಬ, ಮನೆ, ಮಕ್ಕಳು, ಸ್ನೇಹಿತರ ಎಲ್ಲಾವನ್ನು ಬಿಟ್ಟು ಹೋಗುವುದು ಅಷ್ಟು ಸುಲಭ
ವಲ್ಲ. ಈ ಜಂಜಾಟದಲ್ಲಿ ಒಂದು ಸುಖವಿದೆ ಎಂದು ಸೂಚಿಸುತ್ತದೆ.
ಪುರಸೊತ್ತು ಎಲ್ಲಿದೆ ನಮಗೆ? ಕವನದಲ್ಲಿ ಎಲ್ಲಾರೂ ಅವರ ಕಷ್ಟ ಸುಖಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ನಾವು ಯೋಚನೆ ಮಾಡುವಷ್ಟು ಸಮಯವಿಲ್ಲ. ಓಡುತ್ತಿರುವ ಪ್ರಪಂಚದ ಜತೆಗೆ ಇನ್ನಷ್ಟು ವೇಗದಿಂದ ಓಡಲು ಬಯಸುತ್ತಿದ್ದೇವೆ ಮತ್ತು ಇದರಿಂದ ಅಮೂಲ್ಯವಾದ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದೇವೆ ಯೋಚನೆ ಮಾಡುತ್ತಿಲ್ಲ ಎಂದು ತಿಳಿಸುತ್ತದೆ. ಸತ್ಯವತಿ ಅವರ ವಚನಾ ಮತ್ತು ಸಾವಿತ್ರಿ ಅವರ ಆಗಾಗ ಗಾಯನ ಕ್ಲಬ್‌ಹೌಸ್‌ನಲ್ಲಿ ಒಂದು ಮಿನಿ ಸಂಗೀತ ಕಚೇರಿಯನ್ನು ಸೃಷ್ಟಿ ಮಾಡಿತ್ತು.
ಮಕ್ಕಳ ಬಾಲ್ಯದ ಬಗ್ಗೆಯೂ ಕವನ
ಬಾಲ್ಯ ಕವನದಲ್ಲಿ ಮಕ್ಕಳ ಉಲ್ಲಾಸ ಬಾಲ್ಯದ ಬಗ್ಗೆ ಕವನದ ಮೂಲಕ ಚಿತ್ರೀಕರಿಸಿದ್ದಾರೆ. ಯಾವುದೇ ಒತ್ತಡವಿಲ್ಲದೆ ಸಾಗಿಸುವ ಕಿರಿಯರ ಜೀವನ ಒಂದು ಸುವರ್ಣ ಬದುಕು. ಏಕೆಂದರೆ, ಮಕ್ಕಳು ಶಾಲೆಗೆ ಹೊಗುತ್ತಾರೆ, ಕಲಿ-ನಲಿಯುತ್ತಾ ಸ್ನೇಹವನ್ನು ಬೆಳೆಸಿಕೊಳ್ಳುತ್ತಾ ಜೀವನದ ಭವಿಷ್ಯದ ಬಗ್ಗೆ ಕನಸು ಕಾಣುತ್ತಾರೆ ಎಂದು ಪದ್ಯ ಸೂಚಿಸುತ್ತದೆ. ಗಣಪತಿ ಹಾಡನಲ್ಲಿ, ಭಾರತೀಯರು ಗಣಪತಿಯನ್ನು ಬಹಳ ಅಡಂಬರದಿಂದ ಹಬ್ಬವನ್ನು ಅಚರಣೆ ಮಾಡುತ್ತಾರೆ. ಗಣಪತಿಗೆ ಪೂಜೆಗಳು,ಭಜನೆಗಳು ಮಾಡಿ ಕುಣಿಯುತ್ತಾರೆ. ಗಣೇಶ ವಿದ್ಯೆಯ, ಬುದ್ಧಿಯ ಸಂಕೇತ ಆದರೆ ನಮ್ಮ ಬುದ್ಧಿ ಮತ್ತು ಮನಸ್ಸು ಗಳನ್ನು ಸರಿಪಡಿಸಿಕೊಳ್ಳದೆ ನೀರಿನಲ್ಲಿ ಮುಳಗಿಸುತ್ತಾರೆ ಎಂದು ಹೇಳಿದರು.