Friday, 20th September 2024

ಗ್ರಾಮ ಪಂಚಾಯತಿ ನೂತನ ಕಟ್ಟಡ ಉದ್ಘಾಟನೆ

ಇಂಡಿ: ಭಾರತ ವೈವಿಧ್ಯೆಯಲ್ಲಿ ಏಕತೆಯನ್ನು ಹೊಂದಿದ ದೇಶ, ಮಹಾತ್ಮಾಗಾಂಧಿಜೀಯವರು ಗ್ರಾಮಗಳ ಸುಧಾರಣೆ ದೇಶ ಅಭಿವೃದ್ದಿ, ಗ್ರಾಮ ರಾಜ್ಯವೆ ರಾಮರಾಜ್ಯ ಎಂಬ ಕನಸು ಕಂಡಿದ್ದನ್ನು ಇಂದಿನ ಎಲ್ಲಾ ಸರಕಾರಗಳು ಪ್ರತಿ ಹಂತದಲ್ಲಿ ಇಡೇರಿಸಿವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಝಳಕಿ ಗ್ರಾಮದ ೨೦೨೧-೨೨ನೇ ಸಾಲಿನ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಿದ ಗ್ರಾಮ ಪಂಚಾ ಯತಿ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯನಿಗೆ ಇತಿಹಾಸದ ಬಗ್ಗೆ ಪರಿಕಲ್ಪನೆ ಇರಬೇಕು ಮಹಾತ್ಮಗಾಂಧಿಯವರಿಗೆ ದೂರದೃಷ್ಠಿ ಇರುವದರಿಂದಲ್ಲೆ ಭಾರತದ ಪೀತಾಮಹ ಎಂದು ಕರೆಯಲಾಗಿದೆ. ಈ ಹಿಂದೆ ಪಂಚಾಯತಿ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಬೀದಿ ದೀಪಗಳಿಗೆ ಎಣ್ಣೆ ಹಾಕಲು ಸಹಿತ ಹಣ ಇರಲ್ಲಿಲ್ಲ ಪಂಚಾಯತ ರಾಜ್ಯ ವ್ಯವಸ್ಥೆಯಲ್ಲಿ ಕುಡಿಯಲು ನೀರಿನ ಸಮಸ್ಯ ಇತ್ತು ಇದನ್ನು ಪರಿಹರಿಸಲು ನಜೀರಸಾಹೇಬ ಸಾಕಷ್ಟು ಶ್ರಮಿಸಿದ್ದಾರೆ.

ನಿಮ್ಮ ಗ್ರಾಮದ ಜನ ನಿಮ್ಮ ಮೇಲೆ ನಂಬಿಕೆ ವಿಶ್ವಾಸದಿಂದ ಆಯ್ಕೆ ಮಾಡಿದ್ದಾರೆ. ಬದ್ದತೆಯಿಂದ ಕಳಕಳಿಯಿಂದ ನೀವು ಕೆಲಸ ಮಾಡಿದರೆ ಜನರು ಇನ್ನಷ್ಟು ಎತ್ತರಕ್ಕೆ ಒಯ್ಯುತ್ತಾರೆ. ಈ ದೇಶದ ಆರ್ಥಿಕ ತಜ್ಞ ಮನಮೋಹನಸಿಂಗ್ ಒಳ್ಳೇಯ ಆಡಳಿತ ಮಾಡಿದ್ದಾರೆ. ಬಿಜೆಪಿ ಸರಕಾರದಲ್ಲಿ ಆಟಲ್‌ಬಿಹಾರಿ ವಾಜಪೇಯಿ ರಸ್ತೆಗಳ ಹಾಗೂ ಶಾಲೆಗಳ ಸುಧಾರಣೆ ಮಾಡಿದ್ದಾರೆ ಇಂತಹವರನ್ನು ಸ್ಮರಿಸಬೇಕು.

ಯಾವ ಯಾವ ಕಾಲಘಟದಲ್ಲಿ ಯಾರು ಒಳ್ಳೇಯ ಯೋಜನೆ ಮಾಡಿದ್ದಾರೆ ಗೌರವಿಸುವುದು ಮನುಷ್ಯ ಧರ್ಮ, ಗ್ರಾಮ ಪಂಚಾಯತ ಕಟ್ಟಡ ಸುಂದರ ವಾಗಿದೆ. ಬಡವರಿಗೆ, ದೀನ ದರ್ಬಲರಿಗೆ ಪಂಚಾಯತಿಗೆ ಕೆಲಸಕ್ಕೆಂದು ಜನರು ಬಂದಾಗ ಪಾರದರ್ಶಕ ಆಡಳಿತ ಮಾಡಿ, ಸಂತೋಷಕ್ಕಿ0ತ ಸಮಧಾನ ಮನುಷ್ಯನಿಗೆ ಮತ್ತೋಂದಿಲ್ಲ, ವಿಜಯಪೂರ ಜಿಲ್ಲೆಯ ನಡೇದಾಡುವ ದೇವರಾದ ಶ್ರೀಸಿದ್ದೇಶ್ವರ ಶ್ರೀಗಳು ಕಾರು ,ಬಂಗಲೆ ಇಲ್ಲ ಸರಳ, ನಡೆ ನುಡಿಗಳಿಂದ ಜಗತ್ತಿನಲ್ಲಿಯೇ ಶ್ರೇಷ್ಠ ಸಂತ ಮಹಾಂತರಾಗಿದ್ದಾರೆ.

ನಮ್ಮ ಹತ್ತಿರ ಇರದಿದ್ದರೂ ಅವರ ಸಂದೇಶ ಸೂರ್ಯ ಚಂದ್ರ ಇರುವವರೆಗೂ ಸ್ಮರಣಿಯ, ಭಾರತ ವೀರ ಸನ್ಯಾಸಿ ವಿವೇಕಾನಂದರ ನಂತರ ಶ್ರೀಸಿದ್ದೇಶ್ವರ ಶ್ರೀಗಳು ಎಂದು ರಾಮಕೃಷ್ಣ ಮಷೀನ್ ಹೇಳಿರುವುದು ಸ್ಮರಿಸಿದರು. ವೇ.ಮೂ.ಮಹಾಂತೇಶ ಶಾಸ್ತ್ರಿ ದಿವ್ಯ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು.

ಶ್ರೀಮಂತ ಕಾಪ್ಸೆ, ಧರ್ಮರಾಜ ಮುಜಗೊಂಡ ,ಗ್ರಾ.ಪಂ ಅಧ್ಯಕ್ಷ ಸಣ್ಣಪ್ಪ ತಳವಾರ ಮಾತನಾಡಿದರು. ಗ್ರಾ.ಪಂ ಅಧ್ಯಕ್ಷ ಸಣ್ಣಪ್ಪ ತಳವಾರ, ಎಂ ಆರ್ ಪಾಟೀಲ, ಶ್ರೀಮಂತ ಕಾಪಸೆ, ಶೇಖರ ನಾಯಕ, ಭೀಮಣ್ಣಾ ಕೌಲಗಿ, ನರೇವಣಸಿದ್ದ ಬುಕ್ಕಿ, ಮಹೇಶ ಬದರಿ, ಅಣ್ಣಪ್ಪ ತಳವಾರ, ಉಪಾಧ್ಯಕ್ಷೆ ಸವಿತಾ ಬಸಗೊಂಡ, ಧರ್ಮು, ವಾಲೀಕಾರ, ರಾಜು ನಧಾಪ, ಸಂತೋಷಗೌಡ ಪಾಟೀಲ, ಜಿ.ಪಂ ಉಪಕಾರ್ಯದರ್ಶಿ ಭೀಮಪ್ಪ ಕೆ.ಲಾಳಿ, ತಾ.ಪಂ ಅಧಿಕಾರಿ ಸುನೀಲ ಮದ್ದಿನ, ಸಹಾಯ ನಿರ್ದೇಶಕ ಸಂಜೇಯ ಖಡಗೇಕರ್ , ಎಸ್ ಆರ್ ರುದ್ರವಾಡಿ, ಚಿದಾನಂದ ಮಿಂಚನಾಳ, ಐ.ಬಿ ಚವ್ಹಾಣ, ಸಂಜೀವುಕುಮರ ಬಿರಾದಾರ, ಗ್ರಾ.ಪಂಚಾಯತ ಅಭಿವೃದ್ದಿ ಅಧಿಕಾರಿ ಜಬ್ಬಾಅಲಿ ಹಳ್ಳಿ, ಶ್ರೀನಿವಾಸ ಪತಂಗೆ, ರಾಜೇಶ ಹೂಗಾರ, ಹುಚ್ಚಪ್ಪ ತಳವಾರ ವೇದಿಕೆಯಲ್ಲಿದ್ದರು.

ಗ್ರಾಮ ಪಂಚಾಯತ ಸರ್ವಸದಸ್ಯರು ಸಿಬ್ಬಂದಿ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ಗಣ್ಯರು ಸಾರ್ವಜನಿಕರು ಇದ್ದರು.

*

ಮೊನ್ನೆ ಅಷ್ಠೇ ನನಗೆ ಕರೆದು ಮಂತ್ರಿ ಸ್ಥಾನ ನೀಡುವ ಭರವಸೆ ಹೈಕಮಾಂಡ್ ಹಾಗೂ ವರಿಷ್ಠರು ಸೂಚಿಸಿದಾಗ ನನಗೆ ಯಾವ ಮಂತ್ರಿಗಿರಿ ಬೇಡ ಎಂದಿರುವೆ. ಜಿಲ್ಲೆಯಾಗಿಸುವ ಕನಸು ಕಂಡಿರುವೆ ಇಂಡಿ ಸರ್ವವಿಧದಲ್ಲಿ ಅಭಿವೃದ್ದಿ ಮಾಡಿರುವೆ, ನಮ್ಮ ಸರಕಾರ ಬಂದರೆ ಜಿಲ್ಲೆ ಮಾಡಿಯೇ ತೀರುತ್ತೇನೆ ಎಂದರು. ನಂಜು೦ಡಪ್ಪ ವರದಿಯಂತೆ ಶಾಶ್ವತ ಬರಗಾಲಕ್ಕೆ ತುತ್ತಾಗಿರುವ ಈ ಭಾಗ ಹೋರ್ತಿ ಭಾಗದಲ್ಲಿ ನೀರಿನ ಸಮಸ್ಯೆಯಿಂದ ರೈತರು ತೊಂದರೆ ಅನುಭವಿಸುತ್ತಿದ್ದು ಮುಂಬರುವ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ನಮ್ಮ ಸರಕಾರ ಬಂದರೆ ಒಂದು ಇಂಚು ಸಹಿತ ಬಿಡದಂತೆ ನೀರಾವರಿ ಮಾಡುತೇನೆ ಎಂದರು.
ಶಾಸಕ ಯಶವಂತರಾಯಗೌಡ ಪಾಟೀಲ